Saturday, July 26, 2025
Homeರಾಷ್ಟ್ರೀಯ | Nationalರಾಜ್ಯಸಭಾ ಸದಸ್ಯರಾಗಿ ನಟ ಕಮಲಹಾಸನ್‌ ಪ್ರಮಾಣ ವಚನ ಸ್ವೀಕಾರ

ರಾಜ್ಯಸಭಾ ಸದಸ್ಯರಾಗಿ ನಟ ಕಮಲಹಾಸನ್‌ ಪ್ರಮಾಣ ವಚನ ಸ್ವೀಕಾರ

Kamal Haasan makes Parliament debut, takes oath in Tamil as Rajya Sabha MP

ನವದೆಹಲಿ,ಜು.25– ನಟ ಮತ್ತು ಮಕ್ಕಳ್‌ ನಿಧಿ ಮಯ್ಯಮ್‌ (ಎಂಎನ್‌ಎಂ) ಮುಖ್ಯಸ್ಥ, ಕಮಲ್‌ಹಾಸನ್‌ ಶುಕ್ರವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಂಸತ್ತಿಗೆ ಪಾದಾರ್ಪಣೆ ಮಾಡಿದರು.

ಕಮಲ ಹಾಸನ್‌ ತಮಿಳಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದಾಗ, ಸಂಸದರು ಮೇಜು ಬಡಿಯುವ ಮೂಲಕ ಜೋರಾಗಿ ಕರತಾಡನ ಮಾಡಿದರು. ಕಮಲ್‌ ಹಾಸನ್‌ ಅವರು ರಾಜ್ಯಸಭೆಗೆ ಪ್ರವೇಶಿಸಿರುವುದು ಅವರ ರಾಜಕೀಯ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಏಕೆಂದರೆ ಅವರು ಮೊದಲ ಬಾರಿಗೆ ರಾಷ್ಟ್ರೀಯ ಶಾಸಕಾಂಗದ ಪಾತ್ರವನ್ನು ವಹಿಸಿಕೊಂಡಿದ್ದಾರೆ. ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟದ ಬೆಂಬಲದೊಂದಿಗೆ ಅವರ ನಾಮನಿರ್ದೇಶನವು ಆಗಿದೆ.

ಇದು 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮಕ್ಕಳ್‌ ನೀಧಿ ಮೈಯಂ ಬೆಂಬಲಕ್ಕೆ ಬದಲಾಗಿ ಅವರಿಗೆ ರಾಜ್ಯಸಭೆಯ ಸ್ಥಾನವನ್ನು ಉಡುಗೊರೆಯಾಗಿ ನೀಡಲಾಗಿತ್ತು. 69 ವರ್ಷದ ನಟ, ರಾಜಕಾರಣಿ, ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್‌ಹಾಸನ್‌, ನನಗೆ ತುಂಬಾ ಹೆಮೆ ಮತ್ತು ಗೌರವವಿದೆ ಎಂದು ಹೇಳಿದರು.

ಜೂನ್‌ 6 ರಂದು ತಮಿಳುನಾಡು ಸಚಿವಾಲಯದಲ್ಲಿ ಕಮಲ್‌ ಹಾಸನ್‌ ತಮ ಉಮೇದುವಾರಿಕೆ ಮಾಡಿದ್ದರು. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಮತ್ತು ವಿಸಿಕೆಯ ತೋಲ್‌ ತಿರುಮಾವಲವನ್‌, ಎಂಡಿಎಂಕೆಯ ವೈಕೊ ಮತ್ತು ತಮಿಳುನಾಡು ಕಾಂಗ್ರೆಸ್‌‍ ಮುಖ್ಯಸ್ಥ ಸೆಲ್ವಪೆರುಂಥಗೈ ಸೇರಿದಂತೆ ಮೈತ್ರಿ ಪಾಲುದಾರರ ಹಿರಿಯ ನಾಯಕರೊಂದಿಗೆ ಅವರು ಆಗಮಿಸಿದ್ದರು.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ, ರಾಜ್ಯಸಭಾ ಸ್ಥಾನವನ್ನು ಗೆಲ್ಲಲು ಒಬ್ಬ ಅಭ್ಯರ್ಥಿಗೆ ಕನಿಷ್ಠ 34 ಮತಗಳು ಬೇಕಾಗುತ್ತವೆ. ಡಿಎಂಕೆ ನೇತೃತ್ವದ ಭಾರತ ಬಣದಿಂದ (ಡಿಎಂಕೆ-133, ಕಾಂಗ್ರೆಸ್‌‍-17, ವಿಸಿಕೆ-4, ಸಿಪಿಐ-2, ಸಿಪಿಎಂ-2) 158 ಶಾಸಕರೊಂದಿಗೆ, ಮೇಲನೆಯಲ್ಲಿ ನಾಲ್ಕು ಸ್ಥಾನಗಳನ್ನು ಪಡೆಯಲು ಮೈತ್ರಿಕೂಟಕ್ಕೆ ಅವಕಾಶವಿದೆ. ಜೂನ್‌ 12ರಂದು, ಕಮಲ್‌ ಹಾಸನ್‌ ಮತ್ತು ಇತರ ಐವರು ತಮಿಳುನಾಡಿನಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.

ನಾನು ಪ್ರಮಾಣ ವಚನ ಸ್ವೀಕರಿಸಲಿದ್ದು, ನನ್ನ ಹೆಸರನ್ನು ನೋಂದಾಯಿಸಲಿದ್ದೇನೆ. ಓರ್ವ ಭಾರತೀಯನಾಗಿ ನಾನು ನನ್ನ ಕರ್ತವ್ಯ ನಿರ್ವಹಿಸಲಿದ್ದೇನೆ ಎಂದು ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಅವರು ರಾಜ್ಯಸಭೆಗೆ ತಿಳಿಸಿದರು.ಇದಕ್ಕೂ ಮುನ್ನ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ್ದ ಅವರ ಮಕ್ಕಳ್‌ ನೀಧಿ ಮಯ್ಯಂ ಪಕ್ಷ, ಜುಲೈ 25ರಂದು ಕಮಲ್‌ ಹಾಸನ್‌ ಅವರು ಸಂಸತ್ತಿನಲ್ಲಿ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಲು ನಮಗೆ ಹರ್ಷವಾಗುತ್ತಿದೆ ಎಂದು ಹೇಳಿತ್ತು.

RELATED ARTICLES

Latest News