ಮಧ್ಯ ಪ್ರದೇಶದಲ್ಲಿ ಸಿಎಂ ಕಮಲ್ನಾಥ್ಗೆ ತಲೆಬಿಸಿ
ಭೋಪಾಲ್, ಮೇ 28- ಕಾಂಗ್ರೆಸ್ ಆಡಳಿತಾರೂಢ ಮಧ್ಯಪ್ರದೇಶದಲ್ಲೂ ಕೈ ಪಕ್ಷವು ನೆಲ ಕಚ್ಚಿರುವುದರಿಂದ ಅಲ್ಲೂ ಕೂಡ ಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಮಲ್ನಾಥ್ ವಿರುದ್ಧ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ.
ಮುಖ್ಯಮಂತ್ರಿಯಾಗಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸಲು ವಿಫಲರಾದ ಕಮಲ್ನಾಥ್ ಬಗ್ಗೆ ಉಪಮುಖ್ಯಮಂತ್ರಿ ಜ್ಯೋತಿರಾದಿತ್ಯ ಪರ ಇರುವ ಕೆಲ ಮುಖಂಡರು ತೀವ್ರ ಅತೃಪ್ತಿ ಹೊರಹಾಕಿದ್ದಾರೆ.
ಕಮಲ್ನಾಥ್ ಬದಲಿಗೆ ಅತ್ಯಂತ ಕ್ರಿಯಾಶೀಲರು ಮತ್ತು ಯುವ ನಾಯಕರಾದ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಪಕ್ಷದ ಸಾರಥ್ಯ ನೀಡಬೇಕೆಂಬ ಕೂಗು ಮತ್ತಷ್ಟು ಹೆಚ್ಚಾಗಿದೆ.
ಕಾಂಗ್ರೆಸ್ ವರಿಷ್ಠರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಕಮಲ್ನಾಥ್ ತಲೆ ಬಿಸಿಯಾಗಿದೆ. ಮಧ್ಯ ಪ್ರದೇಶದಲ್ಲಿ ಉಲ್ಬಣಿಸಿರುವ ಆಂತರಿಕ ಬಿಕ್ಕಟ್ಟು ಶಮನಗೊಳಿಸುವ ಪ್ರಯತ್ನವೂ ಮುಂದುವರಿದಿದೆ.