Friday, May 3, 2024
Homeರಾಷ್ಟ್ರೀಯದೇಶದ ಮೊದಲ ಹಂತದ ಚುನಾವಣೆಯಲ್ಲಿ ನಕುಲ್ ನಾಥ್ ಶ್ರಿಮಂತ ಅಭ್ಯರ್ಥಿ

ದೇಶದ ಮೊದಲ ಹಂತದ ಚುನಾವಣೆಯಲ್ಲಿ ನಕುಲ್ ನಾಥ್ ಶ್ರಿಮಂತ ಅಭ್ಯರ್ಥಿ

ನವದೆಹಲಿ,ಏ.10- ದೇಶದಲ್ಲಿ ನಡೆಯುತ್ತಿರುವ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರುವಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಅವರ ಪುತ್ರ ನಕುಲ್ ನಾಥ್ ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದಾರೆ.

ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾಮ್ಸರ್ (ಎಡಿಆರ್) ಸಂಸ್ಥೆ ನಡೆಸಿದ ವಿಶ್ಲೇಷಣೆಯ ಪ್ರಕಾರ, ಕಾಂಗ್ರೆಸ್ ಸಂಸದ ನಕುಲ್ ನಾಥ್ ಅವರು 717 ಕೋಟಿ ಆಸ್ತಿಯೊಂದಿಗೆ ಶ್ರೀಮಂತ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದಾರೆ.

ನಕುಲ್ ನಾಥ್ ಅವರು ಛಿಂದ್ವಾರಾ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳಲು ನಾಮನಿರ್ದೇಶನಗೊಂಡಿದ್ದಾರೆ. ಎಐಎಡಿಎಂಕೆಯ ಅಶೋಕ್ ಕುಮಾರ್ ಅವರು ತಮಿಳುನಾಡಿನ ಈರೋಡ್ನಿಂದ ಸ್ಪರ್ಧಿಸುತ್ತಿದ್ದಾರೆ, ಅವರು ? 662 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಶಿವಗಂಗಾ ಬಿಜೆಪಿ ಅಭ್ಯರ್ಥಿ ಧೇವನಾಥನ್ ಯಾದವ್ ಟಿ ? 304 ಕೋಟಿ ಆಸ್ತಿ ಹೊಂದಿದ್ದಾರೆ.

ತೀವ್ರ ಕುತೂಹಲ ಕೆರಳಿಸಿರುವ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತ ಏಪ್ರಿಲ್ 19ರಿಂದ ಆರಂಭವಾಗಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

ಚುನಾವಣೆಗೆ ಎರಡು ವಾರಗಳಿಗಿಂತ ಕಡಿಮೆ ಅವ„ಯಿದ್ದು, ನಾಮಪತ್ರ ಸಲ್ಲಿಸಲಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಆಸ್ತಿ, ಅಪರಾಧ ಹಿನ್ನೆಲೆ ಅಥವಾ ಪ್ರಕರಣಗಳು, ಹಣಕಾಸಿನ ಪರಿಸ್ಥಿತಿ ಸೇರಿದಂತೆ ಇತರ ಮಾಹಿತಿ ಸೇರಿದಂತೆ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಿದ್ದಾರೆ.ಏಪ್ರಿಲ್ 19ರ ಚುನಾವಣೆಯಲ್ಲಿ ಸ್ಪರ್„ಸುವ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ ? 4.51 ಕೋಟಿ ಮೌಲ್ಯದ್ದಾಗಿದೆ.

RELATED ARTICLES

Latest News