ಕನಕಪುರ,ಅ.9- ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿಶೀಟರ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕನಕಪುರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಭದ್ರೇಗೌಡನದೊಡ್ಡಿ ನಡೆದಿದೆ. ಬೆಂಗಳುರು ಕೆಂಗೇರಿ ಬಳಿಯ ಹೆಮಿಗೆಪುರ ಗ್ರಾಮದ ಚಿರಂಜೀವಿ (25) ಕೊಲೆಯಾದ ರೌಡಿಶೀಟರ್.
ಈತ ಕಳೆದ ಒಂದು ವರ್ಷದ ಹಿಂದೆ ತಲಘಟ್ಟಪುರ ಪೋಲಿಸ್ ಠಾಣಾ ವ್ಯಾಪ್ತಿ ಕೊಲೆ ಪ್ರಕರಣದಲ್ಲಿ ಜೈಲವಾಸ ಅನುಭವಿಸಿ ಕಳೆದ 2 ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ತಾನು ವಾಸವಿದ್ದ ಸ್ಥಳದಲ್ಲಿ ಜೀವ ಭಯವಿದೆ ಎಂದು ಹೆದರಿ ತನ್ನ ಪತ್ನಿಯ ಸ್ವಗ್ರಾಮ ಹಾರೋಹಳ್ಳಿ ತಾಲೂಕು ಪಿಚ್ಚನಕೆರೆ ಗ್ರಾಮದಲ್ಲಿ ವಾಸವಿದ್ದನು. ಕಳೆದ ವಾರ ತನ್ನ ಅಜ್ಜಿಯವ ಊರು ಭದ್ರೇಗೌಡನದೊಡ್ಡಿಗೆ ತೆರಳಿದ್ದಾಗ ಹೆಬ್ಬಿದರಮೆಟ್ಟಿಲು ಹಾಗೂ ಸಮೀಪದ ಚಿಕ್ಕಕಲ್ಬಾಳು ಗ್ರಾಮದ ಯುವಕರೊಂದಿಗೆ ಕಿರಿಕ್ ಮಾಡಿ ಗಲಾಟೆ ಮಾಡಿಕೊಂಡಿದ್ದಾನೆ. ರಾತ್ರಿ ನಾಲ್ವರು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಯಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ಗೌಡ, ಸಹಾಯಕ ವರಿಷ್ಠಾಧಿಕಾರಿಗಳಾದ ರಾಮಚಂದ್ರಪ್ಪ, ಸುರೇಶ್, ಡಿ.ವೈ.ಎಸ್.ಪಿ ಗಿರಿ, ಸರ್ಕಲ್ ಇನ್್ಸಪೆಕ್ಟರ್ ವಿಕಾಸ್, ಗ್ರಾಮಾಂತರ ಠಾಣಾಧಿಕಾರಿ ಆಕಾಶ್, ಪರಿಶೀಲನೆ ನಡೆಸಿದ್ದಾರೆ.
ಸಹೋದರ ನಂದೀಶ್ ನೀಡಿದ ದೂರು ನೀಡಿದ್ದು, ಚಿಕ್ಕಕಲ್ಬಾಳು ಪ್ರಜ್ವಲ್, ಪವನ್ ಹಾಗೂ ಬೆಂಗಳೂರಿನ ಮೋಹನ್ ಮತ್ತು ಚೇತನ್ ಎಂಬುವವರು ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಮೇರೆಗೆ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.