Sunday, April 28, 2024
Homeರಾಜ್ಯಅವೈಜ್ಞಾನಿಕ ಕಾಂತರಾಜ್ ವರದಿ ಒಪ್ಪಲು ಸಾಧ್ಯವಿಲ್ಲ : ಆರ್.ಅಶೋಕ್

ಅವೈಜ್ಞಾನಿಕ ಕಾಂತರಾಜ್ ವರದಿ ಒಪ್ಪಲು ಸಾಧ್ಯವಿಲ್ಲ : ಆರ್.ಅಶೋಕ್

ಬೆಂಗಳೂರು, ಜ.28- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯಿತ ಮತ್ತು ಒಕ್ಕಲಿಗರನ್ನು ತುಳಿಯಲು ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ತಮಗೆ ಬೇಕಾದ ಜಾತಿಯವರನ್ನು ಹೆಚ್ಚು ಸೇರ್ಪಡೆ ಮಾಡಿಸಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ರಾಜಕಾರಣ ಮಾಡುವುದರಲ್ಲಿ ಸಿದ್ದರಾಮಯ್ಯ ಅತ್ಯಂತ ಅನುಭವಿ ರಾಜಕಾರಣಿ. ರಾಜ್ಯದ ಎರಡು ಪ್ರಬಲವಾದ ಲಿಂಗಾಯಿತ ಮತ್ತು ಒಕ್ಕಲಿಗರ ಸಮುದಾಯಗಳನ್ನು ಕಡಿಮೆ ಮಾಡಿದ್ದು, ತಮಗೆ ಬೇಕಾದ ಸಮುದಾಯಗಳ ಸಂಖ್ಯೆ ಹೆಚ್ಚು ಸೇರ್ಪಡೆ ಮಾಡಿಸಿದ್ಧಾರೆ.

ಯಾವುದೇ ಕಾರಣಕ್ಕೂ ಅವೈಜ್ಞಾನಿಕವಾದ ಕಾಂತರಾಜು ನೇತೃತ್ವದ ಆಯೋಗದ ವರದಿ ಒಪ್ಪಲು ಸಾಧ್ಯವಿಲ್ಲ ಎಂದರು. ಬಿಜೆಪಿ ಮತ್ತು ಜೆಡಿಎಸ್ ಮಾತ್ರವಲ್ಲದೆ, ಸ್ವತಃ ಕಾಂಗ್ರೆಸ್ ಪಕ್ಷದವರೇ ಆ ವರದಿ ಅವೈಜ್ಞಾನಿಕವೆಂದು ಹೇಳಿದ್ದಾರೆ. ಮತ್ತೊಮ್ಮೆ ವೈಜ್ಞಾನಿಕ ಸಮೀಕ್ಷೆ ನಡೆಸಿ ವರದಿ ಪಡೆದ ಬಳಿಕವೇ ವರದಿ ಬಿಡುಗಡೆ ಮಾಡಲಿ ಇದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಅವರು ಹೇಳಿದರು.

ಧಾರ್ಮಿಕ ಧ್ವಜ ಹಾರಿಸಲು ಅವಕಾಶವಿಲ್ಲ : ಸಚಿವ ಚಲುವರಾಯಸ್ವಾಮಿ

ಜನವರಿ ಅಂತ್ಯಕ್ಕೆ ಹಿಂದುಳಿದ ವರ್ಗಗಳ ಆಯೋಗದ ವರದಿ ಸ್ವೀಕಾರ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ. ಅದಕ್ಕೆ ಸಹಿ ಇಲ್ಲ, ಮೂಲ ಪ್ರತಿ ಕಳೆದು ಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿ ಬರೆಸಿರುವ ಸಮಿಕ್ಷೆ ಆಗಿದೆ ಎಂದು ಆರೋಪಿಸಿದರು. ವೀರಶೈವ ವಿರೋಧಿಯಾಗಿ ಎರಡು ಭಾಗ ಮಾಡಿದ್ದು ಸಿದ್ದರಾಮಯ್ಯ ಅವರೇ. ಲಿಂಗಾಯತರ ಸಮುದಾಯ ವಿಭಜಿಸಿದಂತೆ, ಈಗ ಒಕ್ಕಲಿಗರನ್ನು ವಿಭಜಿಸಲು ಹೋಗುತ್ತಿದ್ದಾರೆ. ಮಂಡ್ಯ ಲೋಕಸಭಾ ಟಿಕೆಟ್‍ಗೆ ಸಂಬಂಧಿಸಿದಂತೆ ರಾಜ್ಯ ನಾಯಕರು ಮತ್ತು ಕೇಂದ್ರದ ನಾಯಕರು ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಯಾರಿಗೇ ಟಿಕೆಟ್ ಕೊಟ್ಟರೂ ಮಂಡ್ಯದಲ್ಲಿ ಎನ್‍ಡಿಎ ಅಭ್ಯರ್ಥಿ ಗೆಲ್ಲುತ್ತಾರೆ ಎಂದರು.

ಹನುಮ ಧ್ವಜ ತೆಗೆಯಲು ಕಾಂಗ್ರೆಸ್ ಕಾರಣ: ರಾಮಮಂದಿರ ಈಗ ಯಾತ್ರಾ ಸ್ಥಳವಾಗಿ ಪರಿವರ್ತನೆಯಾಗುತ್ತಿದೆ. ತಿರುಪತಿಗಿಂತಲೂ ಹೆಚ್ಚು ಜನ ಬರುತ್ತಿದ್ದಾರೆ. ಮಂಡ್ಯದಲ್ಲಿ ಗ್ರಾಮ ಪಂಚಾಯಿತಿ ಅನುಮೋದನೆಯೊಂದಿಗೆ 108 ಅಡಿ ಸ್ಥಂಭದಲ್ಲಿ ಹನುಮ ಧ್ವಜ ಹಾಕಿದ್ದರು. ಕಾಂಗ್ರೆಸ್‍ನವರು ಆ ಧ್ವಜ ತೆಗೆಸಿದ್ದಾರೆ. ಸಿದ್ದರಾಮಯ್ಯ ಅವರು ಜೈ ಶ್ರೀ ರಾಮ್ ಎಂದರೂ, ಉಪ ಮುಖ್ಯಮಂತ್ರಿ ಶಿವಕುಮಾರ್ ಶಿವ ಎಂದರು. ಕೇವಲ ಬಾಯಲ್ಲಿ ಹೇಳೋದಲ್ಲ, ಹೃದಯಲ್ಲಿ ಇರಬೇಕು. ನಿಮ್ಮ ಹೃದಯದಲ್ಲಿ ಟಿಪ್ಪು ತುಂಬಿದ್ದಾನೆ. ಹೇಳೋದೊಂದು ಮಾಡೋದೊಂದು. ಹನುಮ ಧ್ವಜ ತೆಗೆಸಲು ನೇರವಾಗಿ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು.

ಕಾಂಗ್ರೆಸ್‍ನವರದು ಹಿಂದು ವಿರೋ ನೀತಿ, ರಾಮ ವಿರೋ ನೀತಿ ಅನುಸರಿಸುತ್ತಾರೆ. ಏಕಾಏಕಿ ಪೋಲಿಸರನ್ನು ಕರೆದುಕೊಂಡು ಹೋಗಿ ಧ್ವಜ ತೆಗೆಸುವಂತದ್ದು ಏನಿತ್ತು? ಗ್ರಾಮಸ್ಥರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಕಾಂಗ್ರೆಸ್‍ನ ಈ ನೀತಿಯನ್ನು ಖಂಡಿಸುತ್ತೇನೆ. ಕುಕ್ಕರ್ ಬಾಂಬ್ ಹಿಡಿದು ಬಂದವನಿಗೆ ಬ್ರದರ್ ಎಂದವರು ಹನುಮನ ಬಾವುಟ ಹಾರಿಸಿದವರಿಗೆ ಏನು ಹೇಳುತ್ತೀರಿ? ಘಟನಾ ಸ್ಥಳಕ್ಕೆ ಭೇಟಿ ನೀಡುತ್ತೇವೆ, ಪ್ರತಿಭಟನೆ ಮಾಡುತ್ತೇವೆ ಎಂದರು.

70 ವರ್ಷ ರಾಮದೇವರ ಬೆಟ್ಟ ಕಾಣಲಿಲ್ಲವೆ?
ಕಳೆದ 70 ವರ್ಷದಿಂದ ಶ್ರೀರಾಮದೇವರಬೆಟ್ಟ ರಾಮನಗರದಲ್ಲೇ ಇತ್ತಲ್ಲವೇ? ಈಗ ರಾಮಮಂದಿರ ಕಟ್ಟುತ್ತಾರಂತೆ. ಇಷ್ಟು ದಿನ ರಾಮದೇವರ ಬೆಟ್ಟ ಕಾಣುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.
ಶ್ರೀರಾಮನ ಜನ್ಮ ದಿನಾಂಕದ ಸರ್ಟಿಫಿಕೇಟ್ ಕೇಳಿದವರು ಕಾಂಗ್ರೆಸ್‍ನವರು, ವಿವಾದಿತ ಭೂಮಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗ ಅವರ ಅಪ್ಪನ ರಾಮಮಂದಿರವೇ ಎಂದು ಕೇಳುತ್ತಾರೆ. ಹೌದು ನಾವೇ ಕರಸೇವಕರಾಗಿ ಹೋರಾಡಿದ್ದು, ನಿಮ್ಮ ಮನೆಯಿಂದ ಒಬ್ಬರಾದರೂ ಬಂದಿದ್ರಾ ಎಂದು ಅವರು ವಾಗ್ದಾಳಿ ನಡೆಸಿದರು.

ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ಪತನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಬಿಟ್ಟಾಯಿತು. ಈಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಕಾಂಗ್ರೆಸ್ ಚೋಡೋ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಲಿಟ್ಟಲ್ಲೆಲ್ಲ ಹೀಗೇ ಆಗೋದು. ಬಿಹಾರಕ್ಕೆ ಕಾಲಿಟ್ಟರು ಅಲ್ಲಿನ ಸರ್ಕಾರವೇ ಪತನವಾಯಿತು. ರಾಹುಲ್ ಕಾಲಿಟ್ಟ ಕಡೆಯೆಲ್ಲ ಸರ್ಕಾರಗಳು ಪತನ ಆಗಲಿವೆ ಎಂದು ಟೀಕಿಸಿದರು.

ಬಿಜೆಪಿಯವರ ಅತ್ಯುತ್ಸಾಹಕ್ಕೆ ನಾವು ಅಡ್ಡಿಪಡಿಸುವುದಿಲ್ಲ : ಡಿಕೆಶಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಸರ್ಕಾರದ ಬಳಿ ಹಣ ಇಲ್ಲ. 34 ಶಾಸಕರಿಗೆ ಸಂಪುಟ ದರ್ಜೆಯ ನಿಗಮ ಮಂಡಳಿ ಕೊಟ್ಟಿದ್ದಾರೆ. ವಿಶೇಷ ಸಲಹೆಗಾರರು, ಮೆಡಿಕಲ್ ಅಡ್ವೈಸರ್ ಅಂತೆಲ್ಲ ನೇಮಿಸಿದ್ದಾರೆ. ಇದಕ್ಕೆಲ್ಲ ಎಲ್ಲಿಂದ ಹಣ ಬಂತು? ರೈತರಿಗೆ ಕೊಡಲು ಹಣವಿಲ್ಲ. ದುಂದು ವೆಚ್ಚಕ್ಕೆ ಹಣ ಇದೆ. 20 ವರ್ಷಗಳಲ್ಲಿ ವಿತ್ತೀಯ ಶಿಸ್ತು ದಾಟಿಲ್ಲ. ಈ ಬಾರಿ ಅದನ್ನೆಲ್ಲ ಮೀರಿ ಹೋಗುವ ಸ್ಥಿತಿ ಇದೆ. ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಸರ್ಕಾರ ದಿವಾಳಿ ಆಗಿದೆ. ರೈತರಿಗೆ ಪರಿಹಾರ ಕೊಡಿ ಇಲ್ಲವೆ ಕುರ್ಚಿ ಬಿಡಿ ಎಂದು ನಾಳೆ ಕೋಲಾರದಲ್ಲಿ ರಾಜ್ಯ ಸರ್ಕಾರದ ವಿರುದ್ದ ಹೋರಾಟವನ್ನು ಬಿಜೆಪಿ ಆರಂಭಿಸಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ ಪಕ್ಕಾ; ಕಾಂಗ್ರೆಸ್ ಗ್ಯಾರಂಟಿ ಸುಳ್ಳು. ಅದಕ್ಕೆ ಸಾಕ್ಷಿ ರಾಮನಗರ ಶಾಸಕರು ಎಂದು ಆರೋಪಿಸಿದ ಅವರು, ಲೋಕಸಭೆ ಚುನಾವಣೆವರೆಗೆ ಗ್ಯಾರಂಟಿ ಗಿಮಿಕ್ ಅಷ್ಟೆ. ಕಾಂಗ್ರೆಸ್ ಸರ್ಕಾರದ ಆರ್ಥಿಕ ಸಲಹೆಗಾರರೇ ಗ್ಯಾರಂಟಿಗೆ ಷರತ್ತು ಹಾಕಬೇಕು ಎಂದಿದ್ದಾರೆ ಎಂದು ಟೀಕಿಸಿದರು.

RELATED ARTICLES

Latest News