Friday, May 3, 2024
Homeರಾಜ್ಯಕರ್ನಾಟಕ ಬಂದ್ : KSRTC-BMTC ಬಸ್‍ಗಳಿದ್ದರೂ ಪ್ರಯಾಣಿಕರೇ ಇಲ್ಲ

ಕರ್ನಾಟಕ ಬಂದ್ : KSRTC-BMTC ಬಸ್‍ಗಳಿದ್ದರೂ ಪ್ರಯಾಣಿಕರೇ ಇಲ್ಲ

ಬೆಂಗಳೂರು, ಸೆ.29- ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ವಿವಿಧ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಪ್ರಯಾಣಿಕರ ಸಂಖ್ಯೆ ಬೆರಳೆಣಿಕೆಯಷ್ಟು ಇದದ್ದು ಕಂಡು ಬಂದಿತು. ಕೆಂಪೇಗೌಡ ಬಸ್ ನಿಲ್ದಾಣ, ವಿಜಯನಗರ, ಜಯನಗರ, ಶಿವಾಜಿ ನಗರ, ಕಲಾಸಿಪಾಳ್ಯ, ಕೆಆರ್ ಮಾರುಕಟ್ಟೆ ಸೇರಿದಂತೆ ವಿವಿಧ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ವಿರಳವಾಗಿರುವುದು ಎದ್ದು ಕಾಣುತ್ತಿತ್ತು.

ಸದಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಆಸನೆಗಳೇ ಭರ್ತಿಯಾಗದಷ್ಟು ಪ್ರಯಾಣಿಕರಿದ್ದರು. ಬಂದ್ ಇದ್ದರೂ ಎಂದಿನಂತೆ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್‍ಗಳ ಸೇವೆಯನ್ನು ಒದಗಿಸಲಾಗಿತ್ತು. ಶಾಲಾ- ಕಾಲೇಜುಗಳಿಗೆ ರಜೆ ನೀಡಿರುವುದು, ವಿವಿಧ ವಾಣಿಜ್ಯ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಮುಚ್ಚಿರುವುದರಿಂದ ಸಹಜವಾಗಿಯೇ ಪ್ರಯಾಣಿಕರ ಹೋರಾಟ ಕಡಿಮೆಯಾಗಿದೆ.

ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದ ಬೆಂಗಳೂರು ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಾರಿಗೆ ಸಂಸ್ಥೆಯ ವಾಹನಗಳು ಹಾಗೂ ಕೆಲವು ಖಾಸಗಿ ವಾಹನಗಳು ಮಾತ್ರ ವಿರಳವಾಗಿ ಸಂಚರಿಸುತ್ತಿದ್ದು, ಎಲ್ಲೂ ಕೂಡ ಟ್ರಾಫಿಕ್ ಜಾಮ್ ಆದ ವರದಿಯಾಗಿಲ್ಲ.

6 ಮಂದಿ ನಿಫಾ ಸೋಂಕಿತರಲ್ಲಿ ಇಬ್ಬರ ಸಾವು, ನಾಲ್ವರು ಗುಣಮುಖ

ದೈನಂದಿನ ಬಸ್ ಸೇವೆಯಲ್ಲಿ ಯಾವುದೇ ರೀತಿಯ ಕಡಿತ ಮಾಡಿಲ್ಲ. ಎಂದಿನಂತೆ ಬಸ್‍ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರೆ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಅತ್ಯಂತ ಕಡಿಮೆ ಇದೆ ಎಂದು ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ 9 ಗಂಟೆ ವೇಳೆಗೆ ಕೆಎಸ್‍ಆರ್‍ಟಿಸಿಯ 82 ಘಟಕಗಳಿಂದ 1948 ಕಾರ್ಯಾಚರಣೆ ಮಾಡಲಾಗಿತ್ತು. ಶೇ. 60ರಷ್ಟು ಬಸ್ ಸಂಚಾರ ಎಂದಿನಂತೆ ಇದೆ ಎಂದು ಕೆಸ್‍ಆರ್‍ಟಿಸಿ ಪ್ರಕಟಣೆ ತಿಳಿಸಿದೆ.

RELATED ARTICLES

Latest News