Friday, November 22, 2024
Homeರಾಜಕೀಯ | Politicsಡಿಸೆಂಬರ್ ವೇಳೆಗೆ ಬಿಜೆಪಿಯಲ್ಲಿ ಒಂದೇ ಬಾಗಿಲ ಮೂಲಕ ಕಾರ್ಯನಿರ್ವಹಿಸಲಿದೆ : ವಿಜಯೇಂದ್ರ

ಡಿಸೆಂಬರ್ ವೇಳೆಗೆ ಬಿಜೆಪಿಯಲ್ಲಿ ಒಂದೇ ಬಾಗಿಲ ಮೂಲಕ ಕಾರ್ಯನಿರ್ವಹಿಸಲಿದೆ : ವಿಜಯೇಂದ್ರ

Karnataka BJP leaders seek to meet JP Nadda to prevent MLA Yatnal

ನವದೆಹಲಿ,ನ.22– ನಮ್ಮ ಪಕ್ಷದಲ್ಲಿ ಐದಾರು ಬಾಗಿಲು ಇದ್ದರೂ ಮುಂಬರುವ ಡಿಸೆಂಬರ್ ತಿಂಗಳ ವೇಳೆಗೆ ಎಲ್ಲಾ ಬಾಗಿಲುಗಳು ಬಂದ್ ಆಗಿ ಒಂದೇ ಬಾಗಿಲು ಕಾರ್ಯ ನಿರ್ವಹಿಸಲಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಈ ಮೂಲಕ ಬಿಜೆಪಿಯಲ್ಲಿ ಖಾಯಂ ಭಿನ್ನಮತೀಯ ನಾಯಕ ಎಂದು ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಪಕ್ಷದಲ್ಲಿರುವ ತಮ್ಮ ವಿರೋಧಿ ಬಣದ ಬಾಗಿಲುಗಳು ಬಂದಾಗಲಿವೆ ಎಂಬ ಮುನ್ಸೂಚನೆಯನ್ನು ಕೊಟ್ಟಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪರೋಕ್ಷವಾಗಿ ಇದೇ 25ರಂದು ವಕ್ಫ್ ವಿರುದ್ದ ನಡೆಸಲು ಉದ್ದೇಶಿಸಿರುವ ಜನಜಾಗೃತಿ ಅಭಿಯಾನಕ್ಕೆ ಪರೋಕ್ಷವಾಗಿ ಯತ್ನಾಳ್ ಹಾಗೂ ಅವರ ಆಪ್ತರ ಹೆಸರು ಉಲ್ಲೇಖ ಮಾಡದೆ ಕಿಡಿಕಾರಿದರು.

ನಮಲ್ಲಿ ಎಷ್ಟು ಬಾಗಿಲುಗಳಿವೆ ಎಂಬುದು ಮುಖ್ಯವಲ್ಲ. ಮಾಧ್ಯಮದವರು ಹೇಳುವಂತೆ ಐದಾರು ಬಾಗಿಲುಗಳಿದ್ದರೂ ಡಿಸೆಂಬರ್ನಲ್ಲಿ ಒಂದೇ ಬಾಗಿಲು ಕಾರ್ಯ ನಿರ್ವಹಿಸಲಿದೆ ಎಂದು ಸೂಚ್ಯವಾಗಿ ಹೇಳಿದರು. ವಕ್ಫ್ ವಿಚಾರವಾಗಿ ರಚಿಸಲಾಗಿದ್ದ ಬಿಜೆಪಿ ಸಮಿತಿಯಿಂದ ಆರಂಭದಲ್ಲಿ ಯತ್ನಾಳ್ ಹಾಗೂ ಅವರ ಬಣದ ಕೆಲವು ನಾಯಕರನ್ನು ಹೊರಗಿಡಲಾಗಿತ್ತು. ಇದು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಒಟ್ಟು 3 ತಂಡಗಳನ್ನು ರಚಿಸಿ ಯತ್ನಾಳ್ ಬಣದ ನಾಯಕರಿಗೂ ಅವಕಾಶ ನೀಡಲಾಗಿತ್ತು.

ಕರ್ನಾಟಕದಲ್ಲಿ ದೇವಾಲ ಯಗಳಿಗೂ ವಕ್‌್ಫ ನೋಟಿಸ್ ನೀಡಿದ್ದಾರೆ. ವಕ್‌್ಫ ವಿರುದ್ಧ ಮೂರು ತಂಡ ಮಾಡಿ ಅಹವಾಲು ಸ್ವೀಕರಿಸುತ್ತಿದ್ದೇವೆ. ಹೈಕಮಾಂಡ್ ನಾಯಕರು ನನಗೆ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ದೆಹಲಿಗೆ ಬಂದು ಚಾಡಿ ಹೇಳುವ ಕೆಲಸವನ್ನು ನಾನು ಮಾಡುವುದಿಲ್ಲ. ಪಕ್ಷದ ಅಧ್ಯಕ್ಷನಾಗಿ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದೇನೆ. ನನ್ನ ವಿರುದ್ಧ ದೂರು ನೀಡುವವರನ್ನು ತಡೆಯಲು ಸಾಧ್ಯವಿಲ್ಲ ಎಂದರು.ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಈಗಾಗಲೇ ಸೋಲೊಪ್ಪಿ ಕೊಳ್ಳುವ ಮಾತುಗಳನ್ನಾಡಿದ್ದಾರೆ. ಶಿಗ್ಗಾಂವಿಯಲ್ಲಿ ಹೆಚ್ಚು ಮತಗಳ ಅಂತರದಲ್ಲಿ ಭರತ್ ಗೆಲ್ಲುತ್ತಾರೆ. ಸಂಡೂರಿನಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಸನ್ನಿಹಿತವಾಗಿದೆ. ಅದನ್ನೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮೈಸೂರಿನಲ್ಲಿ ಹೇಳಿದ್ದಾರೆ. ಆಡಳಿತ ಪಕ್ಷದ ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಆಗದಿದ್ದರೆ ಜನರ ಕ್ಷಮೆ ಕೇಳಿ, ಅದನ್ನು ಬಿಟ್ಟು ಬಡವರಿಗೆ ತೊಂದರೆ ಕೊಡಬೇಡಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಆಡಳಿತ ವೈಖರಿಯಿಂದ ಶಾಸಕರು ದಂಗೆ ಏಳಲಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅನೇಕ ಹಗರಣಗಳು ನಡೆದಿವೆ. ವಾಲೀಕಿ ಅಭಿವೃದ್ಧಿ ನಿಗಮ ಹಗರಣ, ಮುಡಾ, ಅಬಕಾರಿ ಹಗರಣ ಬೆಳಕಿಗೆ ಬಂದಿದೆ ಎಂದ ಅವರು, ಲೋಕಾಯುಕ್ತವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಭೈರತಿ ಸುರೇಶ್ ಹೆಲಿಕಾಪ್ಟರ್ನಲ್ಲಿ ದಾಖಲೆ ಹೊತ್ತೊಯ್ದಿದ್ದಾರೆ. ದಾಖಲೆಗಳನ್ನು ಅಧಿಕಾರಿಗಳ ಮೂಲಕ ನಾಶಪಡಿಸಲಾಗಿದೆ ಎಂದು ಆರೋಪಿಸಿದರು.

ದಾಖಲೆ ನಾಶ ಮಾಡಲು ಅಧಿಕಾರಿಗಳ ತಂಡ ರಚನೆ ಮಾಡಿದ್ದರು. ಮುಖ್ಯಮಂತ್ರಿಗಳ ಬಾಮೈದ ರಾತ್ರಿ ಲೋಕಾಯುಕ್ತರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಕ್ಲೀನ್ಚೀಟ್ ತೆಗೆದುಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ. ಶೀಘ್ರದಲ್ಲೇ ಕ್ಲೀನ್ ಚೀಟ್ ಸಿಗಲಿದೆ ಯಾವ ಅನುಮಾನ ಬೇಡ ಎಂದು ವಿಜಯೇಂದ್ರ ವ್ಯಂಗ್ಯವಾಗಿ ನುಡಿದರು.

ಸರ್ಕಾರದ ಯಾವ ಯೋಜನೆಗಳು ಕೂಡ ಬಡವರಿಗೆ ತಲುಪುತ್ತಿಲ್ಲ. ಭಾಗ್ಯಲಕ್ಷಿ ಯೋಜನೆಯ ಹಣವನ್ನು ನೀಡಲಾಗುತ್ತಿಲ್ಲ. ಹಾಲಿಗೆ ಸಬ್ಸಿಡಿ ಕೊಡುತ್ತಿಲ್ಲ. ನಬಾರ್ಡ್ ಹಣ ಕಡಿತ ಮಾಡಿದ್ದಾರೆ ಎಂದು ಸಿಎಂ ಸುಳ್ಳು ಹೇಳುತ್ತಿದ್ದಾರೆ. ಎಲ್ಲಾ ಗೊತ್ತಿದ್ದೂ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸವಾಗುತ್ತಿದೆ ಎಂದು ವಿಜಯೇಂದ್ರ ಹೇಳಿದರು.

RELATED ARTICLES

Latest News