Thursday, May 2, 2024
Homeರಾಜಕೀಯಕೆಲವು ಲಿಂಗಾಯತ ಮುಖಂಡರ ಅಸಮಾಧಾನದ ನಡುವೆ ವಿಜಯೇಂದ್ರಗೆ ದಕ್ಕಿದ ಒಕ್ಕಲಿಗರ ಬೆಂಬಲ

ಕೆಲವು ಲಿಂಗಾಯತ ಮುಖಂಡರ ಅಸಮಾಧಾನದ ನಡುವೆ ವಿಜಯೇಂದ್ರಗೆ ದಕ್ಕಿದ ಒಕ್ಕಲಿಗರ ಬೆಂಬಲ

ಬೆಂಗಳೂರು,ನ.27- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರ ನೇಮಕದ ಬಗ್ಗೆ ವೀರಶೈವ ಲಿಂಗಾಯತ ಸಮುದಾಯದ ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರೂ, ಒಕ್ಕಲಿಗ ಮತ್ತು ಇತರ ಸಮುದಾಯಗಳ ನಾಯಕರು ತಮ್ಮ ಮುಂದಿನ ರಾಜಕೀಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೊಂದಾಣಿಕೆ ಮಾಡಿಕೊಂಡಿದ್ದಾರೆ.

ಮಾಜಿ ಸಚಿವ ವಿ.ಸೋಮಣ್ಣ ನೇತೃತ್ವದ ಬಿಜೆಪಿಯ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಬಣವು ಡಿಸೆಂಬರ್ ಮೊದಲ ವಾರದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ ಹೈಕಮಾಂಡ್‍ಗೆ ದೂರು ನೀಡುವ ನಿರೀಕ್ಷೆಯಿದೆ. ಒಕ್ಕಲಿಗ ಮುಖಂಡರು ಮತ್ತು ಇತರ ಸಮುದಾಯದ ಮುಖಂಡರು ವಿಜಯೇಂದ್ರರ ಜೊತೆಗೆ ಸಂಬಂಧ ಮುಂದುವರೆಸಲು ಬಯಸಿದ್ದಾರೆ.

ವಿಜಯೇಂದ್ರ ನೇಮಕದಿಂದ ಅಸಮಾಧಾನಗೊಂಡಿದ್ದ ಸಿ.ಟಿ.ರವಿ ಮತ್ತಿತರ ನಾಯಕರು ವಂಶ ರಾಜಕಾರಣದ ವಿಚಾರ ಪ್ರಸ್ತಾಪಿಸಿದ್ದರು. ವಿಜಯೇಂದ್ರ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದ ಸಿ.ಟಿ.ರವಿ ಇತ್ತೀಚೆಗೆ ಅವರನ್ನು ಭೇಟಿ ಮಾಡಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.

ಭಾನುವಾರ, ಪಕ್ಷದ ಕಚೇರಿಯಲ್ಲಿ ನಡೆದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಇಬ್ಬರೂ ವೇದಿಕೆ ಹಂಚಿಕೊಂಡಿದ್ದರು ಮತ್ತು 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ನಾವು ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸಿದರು.

ಈ ಹಿಂದಿನ ಚುನಾವಣೆಯಲ್ಲಿ ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾಗ ಒಕ್ಕಲಿಗರು ವಿಜಯೇಂದ್ರ ವಿರುದ್ಧ ಹೋಗದ ಕಾರಣ, ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಇದು ನೆರವಾಗುವ ಸಾಧ್ಯತೆಯಿದೆ. ಗೋವಿಂದ ಕಾರಜೋಳ ಮತ್ತು ಶ್ರೀರಾಮುಲು ಸೇರಿದಂತೆ ಎಸ್‍ಸಿ/ಎಸ್‍ಟಿ ನಾಯಕರಿಗೂ ವಿಜಯೇಂದ್ರ ಅವರ ನೇಮಕದ ಬಗ್ಗೆ ಯಾವುದೇ ಬೇಸರವಿದ್ದಂತಿಲ್ಲ. ಏಕೆಂದರೆ ಅವರಿಗೂ ವೀರಶೈವ-ಲಿಂಗಾಯತ ಸಮುದಾಯದ ಬೆಂಬಲ, ವಿಶೇಷವಾಗಿ ಚುನಾವಣೆಯಲ್ಲಿ ಯಡಿಯೂರಪ್ಪನವರ ಬೆಂಬಲ ಅಗತ್ಯ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ.

ತನ್ನ ಮೂರು ಹೆಣ್ಣುಮಕ್ಕಳನ್ನು ಕೊಂದ ಪಾಪಿ ತಂದೆ

ಸಿ.ಟಿ.ರವಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ವೀರಶೈವ-ಲಿಂಗಾಯತ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋತಿದ್ದರು. ಏಕೆಂದರೆ ಅವರು ಸಮುದಾಯ ಮತ್ತು ಯಡಿಯೂರಪ್ಪ ಕುಟುಂಬದ ದ್ವೇಷಿ ಎಂಬ ಹಣೆಪಟ್ಟಿ ಹೊಂದಿದ್ದರು. ಆದ್ದರಿಂದ ರವಿ ಇನ್ನು ಮುಂದೆ ಅವರನ್ನು ವಿರೋಸಲು ಬಯಸುವುದಿಲ್ಲ ಎಂಬುದು ಇದೀಗ ಮನವರಿಕೆಯಾಗಿದೆ.

ಆದರೆ ಎಸ್‍ಸಿ ಸಮುದಾಯದಿಂದ ಬಂದಿರುವ ಹಿರಿಯ ನಾಯಕ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ನಿರಂತರವಾಗಿ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಲಿಂಬಾವಳಿ ಹಾಗೂ ಮತ್ತೊಬ್ಬ ಮಾಜಿ ಸಚಿವ ಹಾಗೂ ಎಸ್‍ಟಿ ಮುಖಂಡ ರಮೇಶ್ ಜಾರಕಿಹೊಳಿ ಅವರು ಹೈಕಮಾಂಡ್ ಬಳಿಗೆ ತೆರಳಲಿರುವ ನಿಯೋಗದಲ್ಲಿದ್ದಾರೆ ಎಂದು ಸೋಮಣ್ಣ ಹೇಳಿದ್ದಾರೆ.

ಕುತೂಹಲಕಾರಿವೆಂದರೆ, ರಮೇಶ್ ಜಾರಕಿಹೊಳಿ ವಿಜಯೇಂದ್ರ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಅವರು ಸೋಮಣ್ಣ ಅವರನ್ನು ಬೆಂಬಲಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.

RELATED ARTICLES

Latest News