Thursday, November 14, 2024
Homeರಾಜ್ಯರಾಜ್ಯದಲ್ಲಿವೆ 47,362 ವಕ್ಫ್ ಆಸ್ತಿಗಳು

ರಾಜ್ಯದಲ್ಲಿವೆ 47,362 ವಕ್ಫ್ ಆಸ್ತಿಗಳು

ಬೆಂಗಳೂರು,ನ.3- ಕೃಷಿ ಭೂಮಿಯಲ್ಲಿ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ದಾಖಲಾದ ವಿಚಾರ ರಾಜ್ಯದಲ್ಲಿ ಬೆಂಕಿ ಜ್ವಾಲೆಯಂತೆ ಹಬ್ಬುತ್ತಿರುವ ಬೆನ್ನಲ್ಲೇ ರಾಜ್ಯಾದ್ಯಂತ 47,362 ವಕ್ಫ್ ಆಸ್ತಿಗಳಿವೆ ಎಂಬ ಮಾಹಿತಿ ಚಕಿತಗೊಳಿಸಿದೆ. ಕಲಬುರಗಿ, ವಿಜಯಪುರ,ಬಾಗಲಕೋಟೆ, ಬೀದರ್‌, ಹಾವೇರಿ, ಧಾರವಾಡ, ರಾಯಚೂರು ಮತ್ತು ಹಾವೇರಿಯಲ್ಲಿ ಅತಿ ಹೆಚ್ಚು ವಕ್ಫ್ ಆಸ್ತಿಗಳಿವೆ. ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದ ಭಾಗದಲ್ಲೇ ಅಧಿಕ ವಕ್ಫ್ ಆಸ್ತಿಗಳಿರುವುದು ಅಂಕಿಅಂಶಗಳಿಂದ ಬಹಿರಂಗವಾಗಿದೆ.

ರಾಜಕೀಯ ನಾಯಕರು ಸೇರಿ ಬಲಾಢ್ಯರು ವಕ್ಫ್ಆಸ್ತಿ ಮೇಲೆ ವಕ್ರದೃಷ್ಠಿ ಬೀರಿದ್ದಾರೆ. ಅದರಂತೆ, 4 ವರ್ಷದಲ್ಲಿ ರಾಜ್ಯಾದ್ಯಂತ 1,127 ವಕ್ಫ್ ಆಸ್ತಿ ಒತ್ತುವರಿ ಕೇಸ್‌‍ಗಳು ವರದಿಯಾಗಿವೆ. ವರ್ಷದಿಂದ ವರ್ಷಕ್ಕೆ ಕಾನೂನುಬಾಹಿರವಾಗಿ ವಕ್ಫ್ ಆಸ್ತಿ ಕಬಳಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ವಕ್ಫ್ ಆಸ್ತಿ ಕಬಳಿಕೆ, ಅನುದಾನ ದುರ್ಬಳಕೆ ಕುರಿತು 2012ರಲ್ಲಿ ಸಲ್ಲಿಕೆಯಾದ ಅನ್ವರ್‌ ಮಾಣಿಪ್ಪಾಡಿ ವರದಿ ಧೂಳು ಹಿಡಿದಿದ್ದು, ವರದಿ ಆಧರಿಸಿ ಕ್ರಮಕೈಗೊಳ್ಳಲು ಆಡಳಿತ ನಡೆಸಿದ್ದ ಸರ್ಕಾರಗಳು ಹಾಗೂ ಈಗಿನ ಸರ್ಕಾರವೂ ಹಿಂದೇಟು ಹಾಕುತ್ತಿವೆ.

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ದಾನ-ಧರ್ಮದ ಉದ್ದೇಶಕ್ಕಾಗಿ ಮುಸ್ಲಿಂ ಸಮುದಾಯದ ವ್ಯಕ್ತಿ, ದೇವರ ಹೆಸರಲ್ಲಿ ನೀಡಿರುವ ಭೂಮಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇದರ ಮಾಲೀಕತ್ವ ದೇವರಿಗೆ ಸೇರಲಿದೆ. ನಂತರ, ಈ ಆಸ್ತಿ ರಾಜ್ಯ ವಕ್ಫ್ ಮಂಡಳಿ ಸ್ವಾಧಿನಕ್ಕೆ ಬರುತ್ತದೆ. ದಾನ ಅಥವಾ ವರ್ಗಾವಣೆ ಮೂಲಕ ನೀಡಿದ ಆಸ್ತಿಯನ್ನು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗೆ ಮಾತ್ರ ಉಪಯೋಗಿಸುತ್ತಿದ್ದರೆ ಆ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲ್ಪಡುತ್ತದೆ. ಈ ಆಸ್ತಿಯಿಂದ ಬರುವ ಹಣವನ್ನು ಶೈಕ್ಷಣಿಕ, ಮಸೀದಿಗೆ ಅಭಿವೃದ್ಧಿಗೆ ಬಳಸಬೇಕೆಂದು ಕಾನೂನು ಹೇಳುತ್ತದೆ. ಈ ಆಸ್ತಿ ಮೇಲೆ ಯಾರೂ ಹಕ್ಕು ಸಾಧಿಸುವಂತಿಲ್ಲ.

ರಾಜ್ಯದ ಉದ್ದಗಲಕ್ಕೂ ವಕ್ಫ್ ತಾಪ
ಅನೇಕ ಕಡೆ ಕೃಷಿ ಭೂಮಿಯನ್ನು ವಕ್‌್ಫ ಆಸ್ತಿ ಎಂದು ಪಹಣಿಯಲ್ಲಿ ದಾಖಲಿಸಿರುವ ವಿಚಾರ ರಾಜ್ಯದ ಉದ್ದಗಲಕ್ಕೂ ವಕ್‌್ಫ ತಾಪ ಕಾಣಿಸಿದೆ. ವಕ್‌್ಫನಿಂದ ರೈತರಿಗೆ, ಬಡಾವಣೆ ನಿವಾಸಿಗಳಿಗೆ ನೋಟೀಸ್‌‍ ನೀಡಿರುವುದು, ವಕ್‌್ಫ ಆಸ್ತಿ ದುರ್ಬಳಕೆ ಸಂಬಂಧ ದೂರುಗಳು ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿವೆ ಮತ್ತು ಈಗಲೂ ಸಲ್ಲಿಕೆಯಾಗುತ್ತಿವೆ. ವಾರದಿಂದೀಚೆಗೆ ವಿಜಯಪುರ ಜಿಲ್ಲೆಯಲ್ಲಿ ಆರಂಭವಾಗಿರುವ ಬೆಳವಣಿಗೆ ರಾಜಕೀಯ ಹೋರಾಟದ ರೂಪ ಪಡೆದುಕೊಳ್ಳುತ್ತಿದೆ.

ಇನ್ನೊಂದೆಡೆ ಈ ಸಮಸ್ಯೆ ಈ ಜಿಲ್ಲೆಗೆ ಸೀಮಿತವಾಗದೇ ಮಂಡ್ಯ, ಮೈಸೂರು, ಕಲಬುರಗಿ, ಬೀದರ್‌ ಸೇರಿ ರಾಜ್ಯದ ಹತ್ತಾರು ಜಿಲ್ಲೆಗಳಲ್ಲೂ ಕಾಣಿಸಿದೆ. ಪಹಣಿಯಲ್ಲಿ ವಕ್ಫ್ ಎಂದು ನಮೂದಾದ ಕಾರಣಕ್ಕೆ ರೈತರಿಗೆ ಬ್ಯಾಂಕ್‌ ಸಾಲ,ಜಮೀನು ಮಾರಾಟ ಮಾಡುವುದಕ್ಕೂ ಸಮಸ್ಯೆಯಾಗುತ್ತಿದೆ. ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಅನಧಿಕೃತ ಒತ್ತುವರಿ ತೆರವುಗೊಳಿಸಲು ವಕ್ಫ್ ಕಾಯ್ದೆಯ ಕಲಂ 54ರ ಪ್ರಕಾರ ವರ್ಷದ ಆರಂಭದಲ್ಲಿ ಸರ್ಕಾರ 3,720 ಪ್ರಕರಣಗಳನ್ನು ದಾಖಲೆ ಮಾಡಿಕೊಂಡು ವಿಚಾರಣೆ ಕೈಗೆತ್ತಿಕೊಂಡಿತ್ತು. ಇನ್ನು ವಕ್‌್ಫ ನ್ಯಾಯಾಧೀಕರಣಕ್ಕೆ ಒತ್ತುವರಿ ತೆರವು ಆದೇಶಕ್ಕೆ 1,458 ಅರ್ಜಿ ಸಲ್ಲಿಕೆಯಾಗಿತ್ತು. ವಕ್‌್ಫ ಆಸ್ತಿಗಳ ರಕ್ಷಣೆಗಾಗಿ ಆಸ್ತಿಗಳ ಸುತ್ತ ಬೇಲಿ, ಗೋಡೆ ನಿರ್ಮಿಸಲು ಕಳೆದ ವರ್ಷ 50 ಕೋಟಿ ರೂ ಅನುದಾನ ಒದಗಿಸ ಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂ. ಮೀಸಲಿಡ ಲಾಗಿದೆ.

ಸುಲಭ ರಹದಾರಿ: ರಾಜ್ಯ ವಕ್ಫ್ ಮಂಡಳಿಗೆ ಸಂಬಂಧ ಪಡುವ ವಕ್ಫ್ ಕಾಯ್ದೆ 1995ರ ಕಲಂ 36ರ ಪ್ರಕಾರ ಸರ್ಕಾರದಿಂದ ಮಂಜೂರಾದ ಜಮೀನು, ಇತರೆ ಜಮೀನುಗಳು ಧಾರ್ಮಿಕ ಉದ್ದೇಶಕ್ಕಾಗಿ ಕಾಲಾಂತರಗಳಿಂದ ಅನುಭವಿಸುತ್ತಿರುವ ಆಸ್ತಿಗಳನ್ನು ವಕ್ಫ್ ಆಸ್ತಿಗಳೆಂದು ದಾಖಲಿಸಲು ಅವಕಾಶ ನೀಡಲಾಗಿದೆ. ವಕ್ಫ್ ಕಾಯ್ದೆ 1995ರಕಲಂ 54ರ ಅಡಿ ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸಿ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಕೆಲವು ಕಡೆ ಅನ್ಯ ಜಮೀನುಗಳು, ನಿವೇಶನ ಗುರುತಿಸಿರುವುದು ಈಗ ವಿವಾದ ಭುಗಿಲೇಳಲು ಕಾರಣವಾಗಿದೆ. ಅಲ್ಲದೆ, ರಾಜ್ಯ ವಕ್ಫ್ ಮಂಡಳಿ ಅಧೀನದಲ್ಲಿ 32,350 ವಕ್‌್ಫ ಸಂಸ್ಥೆಗಳಿವೆ. 27,247 ಸಂಸ್ಥೆಗಳ ಅವಧಿ ಮುಕ್ತಾಯಗೊಂಡಿದ್ದು, ವಕ್ಫ್ ಕಾಯ್ದೆ 2017ರ ನಿಯಮ 48ರ ನಮೂನೆ 42ರ ಅಧ್ಯಾಯ 6 9(2)ರಂತೆ ಅಸ್ತಿತ್ವದಲ್ಲಿರುವ ಸಮಿತಿಯು, ತನ್ನ ಅವಧಿ ಮುಕ್ತಾಯ ಪೂರ್ವದಲ್ಲಿಯೆ ನೂತನ ಸಮಿತಿ ರಚನೆಯಾಗಬೇಕಿತ್ತು. ಆದರೆ, ಸಕಾಲದಲ್ಲಿ ಕ್ರಮ ಜರುಗಿಸದ ಕಾರಣ ಸಮಿತಿ ರಚಿಸಲು ವಿಳಂಬವಾಗುತ್ತಿದೆ.

ಜಿಲ್ಲೆ ಆಸ್ತಿಗಳ ಸಂಖ್ಯೆ

ಕಲಬುರಗಿ 5,814
ವಿಜಯಪುರ 4,134
ಬೀದರ್‌ 3,822
ಹಾವೇರಿ 3,235
ರಾಯಚೂರು 2,689
ಧಾರವಾಡ 2,453
ಬಳ್ಳಾರಿ 1,630
ಚಿಕ್ಕೋಡಿ 1,455
ಬಾಲಕೋಟೆ 1,419
ಉತ್ತರ ಕನ್ನಡ 1,429
ಯಾದಗಿರಿ 1,425
ಬೆಂಗಳೂರು ನಗರ 1,415
ಗದಗ 1,369
ಬೆಳಗಾವಿ 1,232
ತುಮಕೂರು 1,155
ಕೋಲಾರ 1,025
ಮೈಸೂರು 964

ರಾಜ್ಯದಲ್ಲಿದೆ 1,10,399 ಎಕರೆ ವಕ್ಫ್ ಆಸ್ತಿ
ವಕ್‌್ಫ ಮಂಡಳಿಗೆ ಸಂಬಂಧಪಟ್ಟಂತೆ ರಾಜ್ಯಾದ್ಯಂತ 1,10,399 ಎಕರೆ ಜಾಗವಿದೆ. ಕಲಬುರಗಿಯಲ್ಲಿ 20,565 ಎಕರೆ, ವಿಜಯಪುರ 13,570 ಎಕರೆ, ಬೀದರ್‌ 13,310 ಎಕರೆ, ರಾಯಚೂರು 10,156 ಎಕರೆ, ಬಾಗಲಕೋಟೆ 7,535 ಎಕರೆ, ಹಾವೇರಿ 7,020 ಎಕರೆ, ಚಿಕ್ಕೋಡಿ 4,095 ಎಕರೆ, ಧಾರವಾಡ 3,323 ಎಕರೆ, ಬೆಂಗಳೂರು ನಗರ 3,326 ಎಕರೆ ಸೇರಿ ರಾಜ್ಯಾದ್ಯಂತ ಒಟ್ಟು 1,10,399 ಎಕರೆ ಜಾಗವು ವಕ್ಫ್ ಗೆ ಸೇರುತ್ತದೆ.

-ರಾಮಚಂದ್ರ ಬಿ.ಎಸ್‌‍.

RELATED ARTICLES

Latest News