Friday, November 22, 2024
Homeರಾಜ್ಯ15 ವರ್ಷ ಹಳೆಯ 5 ಸಾವಿರ ಸರ್ಕಾರಿ ವಾಹನಗಳನ್ನು ನಾಶಪಡಿಸಲು ಅನುಮತಿ

15 ವರ್ಷ ಹಳೆಯ 5 ಸಾವಿರ ಸರ್ಕಾರಿ ವಾಹನಗಳನ್ನು ನಾಶಪಡಿಸಲು ಅನುಮತಿ

ಬೆಂಗಳೂರು, ಸೆ.29- ಹದಿನೈದು ವರ್ಷಗಳನ್ನು ಪೂರೈಸಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು, ನಿಗಮ, ಮಂಡಳಿಗಳು, ಸ್ಥಳೀಯ ಸಂಸ್ಥೆಗಳಲ್ಲಿನ ಐದು ಸಾವಿರ ವಾಹನಗಳನ್ನು ನಾಶಪಡಿಸಲು ಸರ್ಕಾರ ಅನುಮೋದನೆ ನೀಡಿದೆ.

ರಾಜ್ಯದಲ್ಲಿನ ಹಳೆಯ ವಾಹನಗಳನ್ನು ನಾಶಪಡಿಸಲು ನೊಂದಾಯಿತ ವಾಹನಗಳ ಸ್ಕ್ರಾಪಿಂಗ್ ಪಾಲಿಸಿ 2022ರ ಅಡಿಯಲ್ಲಿ 15 ವರ್ಷ ಪೂರೈಸಿರುವ ಸರ್ಕಾರಿ ಸ್ವಾಮ್ಯದ ವಾಹನಗಳನ್ನು ಆದ್ಯತೆ ಮತ್ತು ಉಪಯೋಗದ ಆಧಾರದ ಮೇಲೆ ಹಂತ-ಹಂತವಾಗಿ ನಾಶಪಡಿಸಲು ಸಾರಿಗೆ ಇಲಾಖೆ ಅನುಮೋದನೆ ನೀಡಿ ಆದೇಶಿಸಿದೆ.

ಅತೀ ಹೆಚ್ಚು ವರ್ಷಗಳನ್ನು ಪೂರೈಸಿರುವ ವಾಹನಗಳನ್ನು ಮೊದಲು ನಾಶ ಪಡಿಸಲು ಆದ್ಯತೆ ನೀಡಬೇಕು ಎಂದು ಸಾರಿಗೆ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ನಾಶಪಡಿಸಲು ಉದ್ದೇಶಿಸಿರುವ ವಾಹನದ ಮೇಲಿನ ಕೊನೆಯ ಒಂದು ವರ್ಷದಲ್ಲಿ ಸಾರಿಗೆ ಇಲಾಖೆಯ ಶಾಸನದ ಕ್ರಮದಡಿಯಲ್ಲಿ ದಾಖಲಾದ ಪ್ರಕರಣದ ದಂಡಗಳು ಮತ್ತು ಪೊಲೀಸ್ ಇಲಾಖೆಯ ಸಂಚಾರ ನಿಯಮ ಉಲ್ಲಂಘಟನೆಯಡಿ ದಾಖಲಾದ ಪ್ರಕರಣಗಳಿಗೆ ಸೀಮಿತಗೊಳಿಸಿ ದಂಡಗಳ ವಸೂಲಾತಿಗಳಿಂದ ವಿನಾಯಿತಿ ನೀಡಲಾಗಿದೆ.

ಕರ್ನಾಟಕ ಬಂದ್ : ಎಲ್ಲೆಲ್ಲಿ ಏನೇನಾಯ್ತು..? ಇಲ್ಲಿದೆ ಕಂಪ್ಲೀಟ್ ಚಿತ್ರಣ

ಈ ವಿನಾಯಿತಿಯೂ ಆದೇಶ ಹೊರಡಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಮಾತ್ರ ಅನ್ವಯವಾಗುವಂತೆ ವಿನಾಯಿತಿ ನೀಡಲಾಗಿದೆ. ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸಲ್ಲಿಸಿದ ಪ್ರಸ್ತಾವನೆ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. 15 ವರ್ಷ ಮೀರಿದ ಸರ್ಕಾರಿ ವಾಹನಗಳ ನೊಂದಾಯಿತ ಪ್ರಮಾಣಪತ್ರವನ್ನು ನವೀಕರಿಸಲು ನಿಷೇಸಲಾಗಿದ್ದು, ಅಂತಹ ವಾಹನಗಳನ್ನು ಕಡ್ಡಾಯವಾಗಿ ಕೇಂದ್ರ ಮೋಟಾರು ವಾಹನಗಳ ನಿಯಮದ ಪ್ರಕಾರ ನಾಶಪಡಿಸಬೇಕಾಗಿದೆ.

ನಾಶಪಡಿಸಲಾದ ವಾಹನಗಳ ಮೇಲಿನ ಬಾಕಿ ಇರುವ ಹೊಣೆಗಾರಿಕೆಗಳನ್ನು ಒಂದು ಬಾರಿಗೆ ಅನ್ವಯವಾಗುವಂತೆ ಒಂದು ವರ್ಷದ ಅವಗೆ ಸೀಮಿತವಾಗಿ ಮನ್ನಾ ಮಾಡುವ ಬಗ್ಗೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ. ಅಲ್ಲದೆ, ಹಳೆಯ ವಾಹನಗಳನ್ನು ನಾಶಮಾಡಲು ಕೇಂದ್ರ ಸರ್ಕಾರ 200 ಕೋಟಿ ರೂ.ಗಳನ್ನು ಪೊ್ರೀತ್ಸಾಹವನ್ನು ನಿಗದಿಪಡಿಸಿದೆ.

ಮೂರು ಮೈಸ್ಟೋನ್ಗಳ ಗುರಿಗಳನ್ನು ಪೊ್ರೀತ್ಸಾಹ ಧನ ಪಡೆಯಲು ನಿಗದಿಪಡಿಸಿದೆ. ಅದರಂತೆ ರಾಜ್ಯ ಸರ್ಕಾರವೂ ಮೊದಲ ಮೈನ್ಸ್ ಸ್ಟೋರ್ನಲ್ಲಿ ನಿಗದಿ ಪಡಿಸಿರುವ ಗುರಿಗಳನ್ನು ಪೂರ್ಣಗೊಳಿಸಿದರೆ ಕೇಂದ್ರ ಸರ್ಕಾರದ ನೂರು ಕೋಟಿ ಪೊ್ರೀತ್ಸಾಹಕ ಅನುದಾನ ಲಭ್ಯವಾಗಲಿದೆ.

RELATED ARTICLES

Latest News