Tuesday, September 17, 2024
Homeರಾಷ್ಟ್ರೀಯ | Nationalಕರ್ಣಿ ಸೇನಾ ಮುಖ್ಯಸ್ಥರ ಹಂತಕರೊಂದಿಗೆ ಸಂಬಂಧ ಹೊಂದಿದ್ದ ಮಹಿಳೆ ಬಂಧನ

ಕರ್ಣಿ ಸೇನಾ ಮುಖ್ಯಸ್ಥರ ಹಂತಕರೊಂದಿಗೆ ಸಂಬಂಧ ಹೊಂದಿದ್ದ ಮಹಿಳೆ ಬಂಧನ

ಜೈಪುರ,ಡಿ.12- ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಅವರ ಹತ್ಯೆಗೆ ಸಂಬಂಸಿದಂತೆ ಅಪರಾಧ ಜಾಲದೊಂದಿಗೆ ಸಂಬಂಧ ಹೊಂದಿರುವ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿಸಲಾದ ಇಬ್ಬರು ಶೂಟರ್‍ಗಳು ಸೇರಿದಂತೆ ಮೂವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅವರನ್ನು ಮ್ಯಾಜಿಸ್ಟ್ರೇಟ್ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.

ಚಂಡೀಗಢದಲ್ಲಿ ಸೆಕ್ಟರ್ 22 ರಿಂದ ಶೂಟರ್‍ಗಳಾದ ನಿತಿನ್ ಫೌಜಿ ಮತ್ತು ರೋಹಿತ್ ರಾಥೋಡ್ ಅವರ ಸಹಚರ ಉಧಮ್ ಸಿಂಗ್ ಅವರನ್ನು ಬಂಧಿಸಿದ್ದರು. ಜೈಪುರದ ಜಗತ್‍ಪುರ ಪ್ರದೇಶದಲ್ಲಿ ದಂಪತಿಯ ಬಾಡಿಗೆ ಫ್ಲಾಟ್‍ನಲ್ಲಿ ಡಿಸೆಂಬರ್ 5 ರಂದು ಹತ್ಯೆ ಮಾಡುವ ಮೊದಲು ಸುಮಾರು ಒಂದು ವಾರದವರೆಗೆ ಫೌಜಿಗೆ ಪೂಜಾ ಸೈನಿ ಮತ್ತು ಆಕೆಯ ಪತಿ ಮಹೇಂದ್ರ ಮೇಘವಾಲ್ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾರೆ ಎಂದು ಜೈಪುರ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ಹೇಳಿದ್ದಾರೆ. ಮೇಘವಾಲ್ ಅಲಿಯಾಸ್ ಸಮೀರ್ ಕೋಟಾ ಮೂಲದವನಾಗಿದ್ದು, ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಪ್ರದೇಶ ಸಿಎಂ ಆಯ್ಕೆಗೆ ಕಾಂಗ್ರೆಸ್ ಲೇವಡಿ

ಫೌಜಿ ನವೆಂಬರ್ 28 ರಂದು ಟ್ಯಾಕ್ಸಿಯಲ್ಲಿ ಜೈಪುರಕ್ಕೆ ಬಂದರು ಮತ್ತು ಮೇಘವಾಲ್ ಅವರನ್ನು ಭೇಟಿಯಾದರು ಮತ್ತು ಅವರನ್ನು ಜಗತ್ಪುರದ ಫ್ಲಾಟ್‍ಗೆ ಕರೆದೊಯ್ದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಕೈಲಾಶ್ ಚಂದ್ರ ಬಿಷ್ಣೋಯ್ ಹೇಳಿದರು.ಮೇಘವಾಲ್ ಮೂಲಕವೇ ಫೌಜಿ ದರೋಡೆಕೋರ ರೋಹಿತ್ ಗೋಡಾರಾ ಜೊತೆ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‍ನೊಂದಿಗೆ ಸಂಪರ್ಕ ಹೊಂದಿರುವ ಗೋದಾರಾ ಅವರು ಫೇಸ್‍ಬುಕ್ ಪೋಸ್ಟ್ ನಲ್ಲಿ ಗೊಗಮೆಡಿಯ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದರು, ಕರ್ಣಿ ಸೇನಾ ಮುಖ್ಯಸ್ಥರು ತಮ್ಮ ಶತ್ರುಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು.

RELATED ARTICLES

Latest News