Thursday, March 6, 2025
Homeರಾಜ್ಯಕಾರವಾರ : ಹೆಣ್ಣುಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ, ಆರೋಪಿ ಅರೆಸ್ಟ್

ಕಾರವಾರ : ಹೆಣ್ಣುಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ, ಆರೋಪಿ ಅರೆಸ್ಟ್

Karwar: Class 10 student gives birth to a girl child, accused arrested

ಕಾರವಾರ,ಮಾ.6- ಅಪ್ರಾಪ್ತ 10ನೇ ತರಗತಿ ವಿದ್ಯಾರ್ಥಿನಿ ಹೆಣ್ಣುಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ಗಿರೀಶ್ ದುರ್ಗಪ್ಪ ಭೋವಿ (20)ಯನ್ನು ಮುಂಡಗೋಡ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಯಲ್ಲಾಪುರದ ಮೂಲದ ಸಂತ್ರಸ್ತ ಯುವತಿ ಮುಂಡಗೋಡ ತಾಲೂಕಿನ ಗ್ರಾಮವೊಂದರ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಯುವತಿಯನ್ನ ಪರಿಚಯಿಸಿಕೊಂಡಿರುವ ಆರೋಪಿ, ಪುಸಲಾಯಿತಿ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ.

ಈ ವಿಚಾರ ಯಾರಿಗಾದರೂ ಹೇಳಿದ್ರೆ ಜೀವ ಸಹಿತ ಬಿಡುವುದಿಲ್ಲ ಎಂದು ಆಪ್ರಾಪ್ತಿಗೆ ಬೆದರಿಕೆಯೊಡ್ಡಿದ್ದನೆಂದು ಆರೋಪಿಸಲಾಗಿದೆ. ಆರೋಪಿಯ ಬೆದರಿಕೆಯಿಂದ ಅತ್ಯಾಚಾರ ನಡೆದ ಮನೆಯಲ್ಲಿ ತಿಳಿಸಿರಲಿಲ್ಲ. ನಿನ್ನೆ ಬುಧವಾರ ಆಪ್ತಾಪ್ತಿಗೆ ದಿಡೀರ್ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಪಾಲಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ವೈದ್ಯರು ತಪಾಸಣೆ ನಡೆಸಿದಾಗ ವಿದ್ಯಾರ್ಥಿನಿ ಗರ್ಭಿಣಿಯಾಗಿರೋ ವಿಚಾರ ಬೆಳಕಿಗೆ ಬಂದಿದೆ. ಶಾಲೆಗೆ ಹೋಗುವ ಮಗಳು ಗರ್ಭಿಣಿಯಾದ ಸುದ್ದಿ ಕೇಳಿ ಪೋಷಕರು ಶಾಕ್ ಆಗಿದ್ದಾರೆ.

ಪೊಲೀಸರಿಗೆ ಮಾಹಿತಿ ನೀಡಿದ ವೈದ್ಯರು:
ನಂತರ ವಿದ್ಯಾರ್ಥಿನಿಗೆ ಹೆರಿಗೆ ಮಾಡಿದ್ದು ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ಉಸಿರಾಟ ತೊಂದರೆ ಎದುರಾಗಿತ್ತು. ಮಗುವಿಗೆ ಹೆಚ್ಚಿನ ಚಿಕಿತ್ಸೆ ಗೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಪ್ರಕರಣ ಸಂಬಂಧ ಆರೋಪಿ ವಿರುದ್ದ ಪೋಕ್ಸ್ ಅಡಿ ಪ್ರಕರಣ ದಾಖಲಿಸಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

RELATED ARTICLES

Latest News