Friday, May 3, 2024
Homeರಾಷ್ಟ್ರೀಯಚಿರತೆ ಜತೆ ಹೋರಾಡಿ ಹೊಸ ಹೀರೋ ಎನಿಸಿಕೊಂಡ ಅಧಿಕಾರಿ

ಚಿರತೆ ಜತೆ ಹೋರಾಡಿ ಹೊಸ ಹೀರೋ ಎನಿಸಿಕೊಂಡ ಅಧಿಕಾರಿ

ಜಮ್ಮು,ಏ.4- ನಮ್ಮ ಹೊಯ್ಸಳ ದೊರೆ ಹುಲಿಯೊಂದಿಗೆ ಕುಸ್ತಿ ಮಾಡಿದ ರೀತಿಯಲ್ಲೇ ಚಿರತೆಯೊಂದಿಗೆ ಹೋರಾಡಿ ಗೆದ್ದಿರುವ ಕಾಶ್ಮೀರದ ವನ್ಯಜೀವಿ ಇಲಾಖೆ ಅಧಿಕಾರಿಯೊಬ್ಬರು ರಾತ್ರೋರಾತ್ರಿ ಹೊಸ ಹೀರೋ ಆಗಿ ಹೊರಹೊಮ್ಮಿದ್ದಾರೆ.

ವನ್ಯಜೀವಿ ಅಧಿಕಾರಿ ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಂಚರಿಸುತ್ತಿದ್ದ ಚಿರತೆಯನ್ನು ಕೇವಲ ಒಂದು ಕೋಲಿನಿಂದ ಹೆದರಿಸಿ ಬಂಧಿಸಿರುವ 50 ಸೆಕೆಂಡ್ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

50 ಸೆಕೆಂಡ್ಗಳ ವೀಡಿಯೊದಲ್ಲಿ ಆತ ಚಿರತೆಯನ್ನು ಜೀವಂತವಾಗಿ ಸೆರೆಹಿಡಿಯಲು ಪ್ರಯತ್ನಿಸುತ್ತಿರುವಾಗ ವ್ಯಕ್ತಿ ಕೇವಲ ತನ್ನ ಕೈಗಳನ್ನು ಬಳಸಿ ಚಿರತೆಯೊಂದಿಗೆ ಸೆಣಸಾಡುತ್ತಿರುವುದನ್ನು ಕಾಣಬಹುದಾಗಿದೆ. ಅವನು ಕೋಲನ್ನು ತೆಗೆದುಕೊಳ್ಳಲು ಬಗ್ಗುವವರೆಗೆ ಪ್ರಾಣಿಯಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ನಂತರ ಚಿರತೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾನೆ.

ಇದ್ದಕ್ಕಿದ್ದಂತೆ, ಚಿರತೆ ಅವನ ಮೇಲೆ ಧಾವಿಸುತ್ತದೆ, ಶಕ್ತಿಯುತ ಪ್ರಾಣಿಯ ವಿರುದ್ಧ ಹೋರಾಟವನ್ನು ಮುಂದುವರೆಸಿದಾಗಲೂ ಅವನ ಕೈಯನ್ನು ಅದರ ಬಾಯಿಯಲ್ಲಿ ಹಿಡಿಯುತ್ತದೆ. ಅಂತಿಮವಾಗಿ, ಚಿರತೆಯ ಹಿಡಿತದಿಂದ ತನ್ನ ಕೈಯನ್ನು ಬಿಡಿಸಿಕೊಂಡು ಅದನ್ನು ಸದೆಬಡಿಯುವಲ್ಲಿ ಮನುಷ್ಯ ಯಶಸ್ವಿಯಾಗುತ್ತಾನೆ ನಂತರ ಸ್ಥಳೀಯರ ನೆರವಿನೊಂದಿಗೆ ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿಯುತ್ತಾನೆ.

ಗಂದರ್ಬಾಲ್ನ ಫತೇಪೊರಾ ಗ್ರಾಮದಲ್ಲಿ ಚಿರತೆ ಸ್ವಚ್ಛಂದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ನಿವಾಸಿಗಳು ವನ್ಯಜೀವಿ ಅಧಿಕಾರಿಗಳಿಗೆ ಸೂಚನೆ ದೂರು ನೀಡುತ್ತಾರೆ. ರಕ್ಷಣಾ ಕಾರ್ಯಾಚರಣೆ ಆಗಮಿಸುವ ವನ್ಯಜೀವಿ ಅಧಿಕಾರಿಯ ಈ ಸಾಹಸಮಯ ದೃಶ್ಯ ಇದೀಗ ಭಾರಿ ವೈರಲ್ ಆಗಿದೆ.

RELATED ARTICLES

Latest News