Friday, May 3, 2024
Homeಬೆಂಗಳೂರುವಿವಾಹಿತ ಮಹಿಳೆಗೆ ವಂಚನೆ: ಅಮ್ಮ- ಮಗನ ವಿರುದ್ಧ ದೂರು ದಾಖಲು

ವಿವಾಹಿತ ಮಹಿಳೆಗೆ ವಂಚನೆ: ಅಮ್ಮ- ಮಗನ ವಿರುದ್ಧ ದೂರು ದಾಖಲು

ಬೆಂಗಳೂರು, ಏ.4- ದೋಷದ ನೆಪವೊಡ್ಡಿ ವಿವಾಹಿತ ಮಹಿಳೆಯಿಂದ 4 ಲಕ್ಷ ಹಣ, 27 ಗ್ರಾಂ ಆಭರಣ ಪಡೆದು ವಂಚಿಸಿರುವ ಅಮ್ಮ-ಮಗನ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಂಚನೆಗೊಳಗಾದ 23 ವರ್ಷದ ವಿವಾಹಿತ ಮಹಿಳೆ ನೀಡಿದ ದೂರಿನನ್ವಯ ಅಮ್ಮ-ಮಗನಿಗೆ ಪೊಲೀಸರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ತನಿಖೆ ಮುಂದುವರೆಸಿದ್ದಾರೆ.

ವಿವಾಹಿತ ಮಹಿಳೆ ಆರು ತಿಂಗಳ ಹಿಂದೆ ಕೆಲಸಕ್ಕೆ ಹುಡುಕಾಟ ನಡೆಸುತ್ತಿದ್ದಾಗ ಮಹೇಶ್ ಎಂಬಾತ ಕರೆ ಮಾಡಿ ನೌಕರಿ ಕೊಡುವುದಾಗಿ ಹೇಳಿ ಬಿಟಿಎಂ ಲೇಔಟ್ನಲ್ಲಿರುವ ಕಚೇರಿಗೆ ಬಂದು ಸಂದರ್ಶನ ಕೊಡಿ ಎಂದು ಹೇಳಿದಾಗ ಅದರಂತೆ ಆ ಮಹಿಳೆ ಹೋದಾಗ ಬಾಡಿ ಮಸಾಜ್ ಮಾಡುತ್ತಿರುವುದು ಗಮನಿಸಿ ತನಗೆ ಸ್ಪಾದಲ್ಲಿ ಕೆಲಸ ಮಾಡಲು ಇಷ್ಟವಿಲ್ಲವೆಂದು ವಾಪಸ್ ಆಗಿದ್ದರು.

ಆದರೆ ಇಷ್ಟಕ್ಕೆ ಸುಮ್ಮನಾಗದ ಆರೋಪಿ ಮಹೇಶ್ ಕೆಲ ತಿಂಗಳ ನಂತರ ಆ ವಿವಾಹಿತ ಮಹಿಳೆಗೆ ಕರೆ ಮಾಡಿ ನೀವು ಸ್ಪಾಗೆ ಬಂದಿದ್ದ ವಿಷಯ ಯಾರಿಗೂ ಹೇಳಬಾರದೆಂದರೆ ನನ್ನೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಕೆಂದು ಹೆದರಿಸಿದ್ದಾನೆ.

ಈ ನಡುವೆ ಆರೋಪಿಯ ತಾಯಿಯೂ ಆ ಮಹಿಳೆಗೆ ಕರೆ ಮಾಡಿ ನೀನು ನನ್ನ ಮಗನ ಜೀವನದಲ್ಲಿ ಬಂದಿದ್ದೀಯ ಆಗಾಗಿ ನಿನ್ನಿಂದ ಆತ ದೂರವಾಗಬೇಕಾದರೇ ಪೂಜೆ ಮಾಡಿಸಬೇಕು. ಅದಕ್ಕಾಗಿ ನೀನೇ ಹಣ ಹಾಗೂ ನಿನ್ನ ಮಾಂಗಲ್ಯ ಸರ ಕೊಡಬೇಕು, ನಂತರ ಪೂಜೆ ಮಾಡಿಸಿ ವಾಪಸ್ ಕೊಡುತ್ತೇನೆ, ಇಲ್ಲದಿದ್ದರೇ ನಿನ್ನ ಮನೆಯವರಿಗೆ ವಿಷಯ ತಿಳಿಸುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ.

ಅಮ್ಮ-ಮಗನ ವರ್ತನೆಯಿಂದ ಗಾಬರಿಯಾದ ಆ ಮಹಿಳೆ 4 ಲಕ್ಷ ಹಣ, 25 ಗ್ರಾಂ ಚಿನ್ನದ ತಾಳಿ ಸರ, 2 ಗ್ರಾಂ ಉಂಗುರ ನೀಡಿದ್ದಾರೆ.
ತದನಂತರ ಹಲವು ತಿಂಗಳಾದರೂ ಹಣ, ಆಭರಣ ಹಿಂದಿರುಗಿಸಿದ್ದಾಗ ನೊಂದ ಮಹಿಳೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು , ಅಮ್ಮ-ಮಗನಿಗೆ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News