ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ದೂರು : ಶೀಘ್ರ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ

ಬೆಂಗಳೂರು, ಜ.27- ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ನೀಡಿದ್ದ ಸುಳ್ಳು ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಈಗಾಗಲೇ ಪ್ರಕರಣದಲ್ಲಿ ಆರೋಪ ಹೊತ್ತಿರುವ ಕಾಟನ್‍ಪೇಟೆ ಇನ್ಸ್ ಪೆಕ್ಟರ್ ಪ್ರವೀಣ್ ಅವರನ್ನು ಅಮಾನತುಗೊಳಿಸಿ ಹೇಳಿಕೆ ಕೂಡ ದಾಖಲಿಸಿಕೊಂಡಿದ್ದು, ಈ ಸಂಬಂಧ ತನಿಖೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು. ನಕಲಿ ಅಂಕಪಟ್ಟಿ ದಂಧೆ: ಕಾಲೇಜು, ಶಿಕ್ಷಣ […]
ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ದೂರು ದಾಖಲು

ಮೈಸೂರು, ಜ.17- ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ದೂರನ್ನು ಆತನ ಪತ್ನಿ ನೀಡಿದ್ದು ಇನ್ನೊಂದು ಕೇಸು ದಾಖಲಾಗಿದೆ. ಮೈಸೂರಿನ ದೇವರಾಜ ಪೋಲಿಸ್ ಠಾಣೆಯಲ್ಲಿ ಸ್ಯಾಂಟ್ರೊ ರವಿ ವಿರುದ್ಧ ಸಂತ್ರಸ್ತ ಪತ್ನಿ ಪೋಲಿಸರಿಗೆ ದೂರು ನೀಡಿದ್ದಾರೆ. 2022ರ ಸೆಪ್ಟೆಂಬರ್ 22 ರಂದು ನಾನು ಮೈಸೂರಿನ ದೇವರಾಜ ಮಾರುಕಟ್ಟೆಗೆ ಹೋಗಿದ್ದೆ. ಆಗ ನನ್ನ ಸ್ಕೂಟರ್ ಡಿಕ್ಕಿಯಲ್ಲಿ ಚೆಕ್ ಬುಕ್ ಇಟ್ಟಿದ್ದೆ, ಸ್ಯಾಂಟ್ರೊ ರವಿ ಮತ್ತು ಪ್ರಕಾಶ್ ಸ್ಕೂಟರ್ ಡಿಕ್ಕಿ ಹೊಡೆದು ಚೆಕ್ ಬುಕ್ ಕಳುವು ಮಾಡಿದ್ದಾರೆ ಎಂದು ಆಕೆ ದೂರಿನಲ್ಲಿ […]
ಲೋನ್ ಕೊಡುವುದಾಗಿ ಹಣ ಪಡೆದು ವಂಚನೆ : 6 ಮಂದಿ ವಿರುದ್ಧ ದೂರು

ಬೆಂಗಳೂರು, ಡಿ.28- ಆಸ್ತಿ ಖರೀದಿಗಾಗಿ ಲೋನ್ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರಿಂದ ಲಕ್ಷಾಂತರ ಹಣ ಪಡೆದು ವಂಚಿಸಿರುವ ಬಗ್ಗೆ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಆರು ಮಂದಿಯ ವಿರುದ್ಧ ದೂರು ದಾಖಲಾಗಿದೆ. ಸಹಕಾರ ನಗರದ ನಿವಾಸಿ ಶ್ರೀದೇವಿ ಎಂಬುವರು ಆಸ್ತಿ ಖರೀದಿಗಾಗಿ 10 ಕೋಟಿ ಲೋನ್ ಪಡೆಯಲು ನಿರ್ಧರಿಸಿ ಪತ್ರಿಕೆಗಳಲ್ಲಿ ಬಂದಂತಹ ಜಾಹೀರಾತು ನೋಡಿ ವೈಯಾಲಿಕಾವಲ್‍ನ ವಿನಾಯಕ ಸರ್ಕಲ್ ಬಳಿ ಇರುವ ಸಾಮಿನಾಥ್ ಫೈನಾನ್ಸಿಯಲ್ ಸರ್ವೀಸಸ್ ಎಂಬ ಕಂಪೆನಿಗೆ ತೆರಳಿ ಲೋನ್ ಬಗ್ಗೆ ವಿಚಾರಿಸಿದ್ದಾರೆ. ಕಂಪೆನಿಯ ಕಚೇರಿಯಲ್ಲಿದ್ದ ಸುಗುಣಾ ಎಂಬುವವರು […]
ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ದೂರು ದಾಖಲು

ಬೆಂಗಳೂರು,ಅ.16- ಸಾರ್ವಜನಿಕವಾಗಿ ಹಾವಿನ ಪ್ರದರ್ಶನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಧಾರ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರ ವಿರುದ್ಧ ದೂರು ದಾಖಲಾಗಿದೆ. ಇತ್ತೀಚೆಗೆ ನಡೆದ ನಾಗಮಂಟಪ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಜಗ್ಗಿ ವಾಸುದೇವ್ ಅವರು ಜೀವಂತ ಹಾವನ್ನು ಹಿಡಿದು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದರು. ಈ ಚಿತ್ರ ಜಾಲತಾಣದಲ್ಲಿ ವೈರಲ್ ಆಗಿತ್ತು. ವನ್ಯಜೀವಿಗಳನ್ನು ಹಿಡಿದು ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶನ ಮಾಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸ್ಪಷ್ಟ ಉಲ್ಲಂಘನೆ ಆಗುತ್ತದೆ ಎಂದು ಆಕ್ಷೇಪಿಸಿ ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ […]
ಊಟದ ವಿಷಯಕ್ಕೆ ಹಾದಿರಂಪ ಬೀದಿರಂಪ ಮಾಡಿದ ಪೊಲೀಸ್ ಕಾನ್ಸ್‌ಟೇಬಲ್
ಫಿರೋಜಾಬಾದ್,ಆ.11- ಪೊಲೀಸ್ ಮೆಸ್‍ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಪೊಲೀಸ್ ಕಾನ್ಸ್‍ಟೇಬಲ್ ವೊಬ್ಬರು ಬೀದಿಗಿಳಿದು ಪ್ರತಿಭಟನೆ ನಡೆಸಿರುವ ವಿಡಿಯೋ ವೈರಲ್ಲಾಗಿದೆ. ಫಿರೋಜಾಬಾದ್‍ನ ಪೊಲೀಸ್ ಹೆಡ್‍ಕ್ವಾಟ್ರ್ರಸ್‍ನ ಮೆಸ್‍ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ರೊಟ್ಟಿ ದಾಲ್ ಮತ್ತು ಚಟ್ನಿ ಇರುವ ಆಹಾರದ ಪ್ಲೇಟ್‍ನ್ನು ಹಿಡಿದುಕೊಂಡು ಪೊಲೀಸ್ ಕಾನ್ಸ್‍ಟೇಬಲ್ ಸ್ಟೆಬಲ್ ಮನೋಜ್‍ಕುಮಾರ್ ರಸ್ತೆಗೆ ಬಂದಿದ್ದಾರೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮುಂದೆ ಹೋಗಿ ನಾಯಿಯೂ ತಿನ್ನದಂತಹ ಕೆಟ್ಟ ಆಹಾರವನ್ನು ನಮಗೆ ನೀಡಲಾಗುತ್ತಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ […]
BIG NEWS : ನಟ ದರ್ಶನ್ ವಿರುದ್ಧ ದೂರು ದಾಖಲು
ಬೆಂಗಳೂರು,ಆ.9- ಹಣಕಾಸಿನ ತೊಂದರೆಯಿಂದಾಗಿ ಚಿತ್ರೀಕರಣ ತಡವಾಗಿದ್ದಕ್ಕೆ ನಿರ್ಮಾಪಕನಿಗೆ ಖ್ಯಾತ ನಟರೊಬ್ಬರು ಬೆದರಿಕೆ ಹಾಕಿದ್ದು, ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎನ್‍ಸಿಆರ್ ದಾಖಲಾಗಿದೆ. ನಿರ್ಮಾಪಕ ಭರತ್ ವಿಷ್ಣುಕಾಂತ್ ಎಂಬುವರು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಎಂಬ ಚಿತ್ರ ನಿರ್ಮಿಸುತ್ತಿದ್ದು, ಈ ಚಿತ್ರದಲ್ಲಿ ಧ್ರುವನ್ ಎಂಬುವರು ನಾಯಕ ನಟನಾಗಿ ನಟಿಸುತ್ತಿದ್ದಾರೆ. ಹಣಕಾಸಿನ ತೊಂದರೆಯಿಂದಾಗಿ ಭರತ್ ಅವರು ಈ ಚಿತ್ರದ ಚಿತ್ರೀಕರಣವನ್ನು ತಡವಾಗಿ ಮಾಡುತ್ತಿರುವುದರಿಂದ ಬೇಸರಗೊಂಡ ಧ್ರುವನ್ ಈ ಬಗ್ಗೆ ನಟ ದರ್ಶನ್ ಅವರ ಬಳಿ ಹೋಗಿ ಹೇಳಿಕೊಂಡು ಅವರಿಂದ […]