Saturday, July 27, 2024
Homeರಾಜ್ಯ400 ಮಹಿಳೆಯರ ಅತ್ಯಾಚಾರ ಹೇಳಿಕೆ : ರಾಹುಲ್‌ ಗಾಂಧಿ ವಿರುದ್ಧ ಪೊಲೀಸರಿಗೆ ಜೆಡಿಎಸ್‌‍ ದೂರು

400 ಮಹಿಳೆಯರ ಅತ್ಯಾಚಾರ ಹೇಳಿಕೆ : ರಾಹುಲ್‌ ಗಾಂಧಿ ವಿರುದ್ಧ ಪೊಲೀಸರಿಗೆ ಜೆಡಿಎಸ್‌‍ ದೂರು

ಬೆಂಗಳೂರು, ಮೇ 22- ಶಿವಮೊಗ್ಗ ಮತ್ತು ರಾಯಚೂರಿನ ಚುನಾವಣಾ ರ್ಯಾಲಿಗಳಲ್ಲಿ ಸಂಸದ ರಾಹುಲ್‌ಗಾಂಧಿಯವರು ಪ್ರಜ್ವಲ್‌ ರೇವಣ್ಣ ಅವರು 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದಾರೆ ಎಂಬ ಆರೋಪದ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ರಾಜ್ಯ ಪೊಲೀಸ್‌‍ ಮಹಾ ನಿರ್ದೇಶಕ ಅಲೋಕ್‌ ಮೋಹನ್‌ ಅವರಿಗೆ ಜೆಡಿಎಸ್‌‍ ನಿಯೋಗ ಮನವಿ ಸಲ್ಲಿಸಿದೆ.

ವಿಧಾನಪರಿಷತ್‌ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಮಂಜೇಗೌಡ, ಜೆಡಿಎಸ್‌‍ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್‌.ಎಂ.ರಮೇಶ್‌ ಗೌಡ ಹಾಗೂ ವಿಧಾನಪರಿಷತ್‌ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಅವರು, ಈ ಸಂಬಂಧ ಪೊಲೀಸ್‌‍ ಮಹಾ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ರಾಹುಲ್‌ಗಾಂಧಿಯವರು ಚುನಾವಣಾ ರ್ಯಾಲಿಗಳಲ್ಲಿ ನೀಡಿರುವ ಹೇಳಿಕೆ ಪತ್ರಿಕೆಗಳಲ್ಲಿ ವರದಿಯಾಗಿದ್ದು, ವಿದ್ಯುನಾನ ಮಾಧ್ಯಮದಲ್ಲಿ ಪ್ರಸಾರವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ರಾಹುಲ್‌ಗಾಂಧಿಯವರು ಇದೊಂದು ಲೈಂಗಿಕ ಹಗರಣವಲ್ಲ, ಸಾಮೂಹಿಕ ಅತ್ಯಾಚಾರ ಎಂದು ಆಪಾದಿಸಿದ್ದರು. ಆದರೂ ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಇದುವರೆಗೂ ರಾಹುಲ್‌ಗಾಂಧಿಯವರಿಗೆ ನೋಟೀಸ್‌‍ ನೀಡಿಲ್ಲ ಹಾಗೂ ಅವರಿಂದ ಮಾಹಿತಿಯನ್ನು ಪಡೆದಿಲ್ಲ ಎಂದು ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.

ರಾಹುಲ್‌ಗಾಂಧಿಯವರು ನಿರ್ದಿಷ್ಟ ಹೇಳಿಕೆ ನೀಡಿರುವುದರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ 400 ಮಹಿಳೆಯರ ಮಾಹಿತಿ ವಿವರಗಳನ್ನು ಅವರು ತಿಳಿದಿದ್ದಾರೆ ಎಂದು ಆಪಾದಿಸಲಾಗಿದೆ.ರಾಹುಲ್‌ಗಾಂಧಿ ಅವರು ಹೇಳಿದಂತೆ ಸಂತ್ರಸ್ತ 400 ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಪತ್ರದಲ್ಲಿ ಅವರು ಕೋರಿದ್ದಾರೆ.

RELATED ARTICLES

Latest News