Thursday, January 16, 2025
Homeಬೆಂಗಳೂರುಸ್ನೇಹಿತನ ಜೊತೆ ಸಹಕರಿಸುವಂತೆ ಪೀಡಿಸುತ್ತಿದ್ದ ಪತಿ ವಿರುದ್ಧ ದೂರು

ಸ್ನೇಹಿತನ ಜೊತೆ ಸಹಕರಿಸುವಂತೆ ಪೀಡಿಸುತ್ತಿದ್ದ ಪತಿ ವಿರುದ್ಧ ದೂರು

ಬೆಂಗಳೂರು, ಡಿ.13- ಸ್ನೇಹಿತನ ಜೊತೆ ಕಾಲ ಕಳೆಯುವಂತೆ ಪತ್ನಿಗೆ ಪೀಡಿಸುತ್ತಿದ್ದ ಪತಿ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೇರಳದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದ ವೈಫ್ ಸ್ಟಾಪಿಂಗ್ ಪ್ರಕರಣ ಇದೀಗ ನಗರದಲ್ಲೂ ಕೇಳಿಬರುತ್ತಿರುವುದು ನಮ್ಮ ಸಂಸ್ಕøತಿಯಲ್ಲಿ ದಾಂಪತ್ಯ ಜೀವನ ಎತ್ತ ಸಾಗುತ್ತಿದೆ ಎಂಬುದು ಕಳವಳಕಾರಿಯಾಗಿದೆ.

ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಸುಂಕದಕಟ್ಟೆ ಸಮೀಪದ ಎಚ್ವಿಆರ್ ಲೇಔಟ್ನ ನಿವಾಸಿಯೊಬ್ಬ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೇ ಇದೀಗ ಸ್ನೇಹಿತರೊಂದಿಗೆ ಕಾಲ ಕಳೆಯಲು ಪೀಡಿಸಿದ್ದಾನೆ.ಅಶ್ಲೀಲ ವಿಡಿಯೋ ತೋರಿಸಿ ಅಸಹಜ ಲೈಂಗಿಕ ಕ್ರಿಯೆಗೆ ಪೀಡಿಸುತ್ತಿದ್ದನು. ಅಲ್ಲದೆ ತಾನು ಕೆಲಸ ಮಾಡುವ ಕಂಪನಿಯಲ್ಲಿ ವೈಫ್ ಸ್ಟಾಫಿಂಗ್ ಪದ್ಧತಿ ಇದೆ. ಸ್ನೇಹಿತನ ಜೊತೆ ಮಲಗು ಎಂದು ಒತ್ತಾಯಪಡಿಸಿದ್ದಾನೆ.

ರಾಜಭವನಕ್ಕೆ ತಮಾಷೆಗಾಗಿ ಬಾಂಬ್ ಕರೆ ಮಾಡಿದ್ದ ಆರೋಪಿ ಸೆರೆ

ಪತಿಯ ವಿಕೃತ ಮನಃಸ್ಥಿತಿಯನ್ನು ಒಪ್ಪದಿದ್ದಾಗ ಬೆಲ್ಟ್ನಿಂದ ಹೊಡೆದಿದ್ದಾನೆ. ಅಲ್ಲದೆ ಇತ್ತೀಚೆಗೆ ಮದ್ಯಪಾನ ಸೇವಿಸಿ ಮನೆಗೆ ಬಂದು ಕೊಲೆ ಮಾಡು ಉದ್ದೇಶದಿಂದ ಪತ್ನಿ ಮುಖವನ್ನು ದಿಬ್ಬಿನಿಂದ ಮುಚ್ಚಿ , ಉಸಿರು ಕಟ್ಟಿಸಿ ಕೊಲೆ ಮಾಡಲು ಪ್ರಯತ್ನಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾನೆ.

ಪತಿಯ ಮನಃಸ್ಥಿತಿಯ ಬಗ್ಗೆ ಅಸಮಾಧಾನಗೊಂಡಿರುವ ಪತ್ನಿ ಇದೀಗ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿ ಪತಿ ವಿರುದ್ಧ ಬಸವಗುಡಿ ಮಹಿಳಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News