ತಿರುವನಂತಪುರಂ, ಡಿ.18 (ಪಿಟಿಐ)- ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕ ಎಸ್‍ಎಫ್‍ಐ ಇಂದಿನಿಂದ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಬ್ಯಾನರ್‍ಗಳನ್ನು ಹಾಕುವ ಮೂಲಕ ಅವರ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದೆ. ರಾಜ್ಯ ರಾಜಧಾನಿಯ ಸರ್ಕಾರಿ ಸಂಸ್ಕøತ ಕಾಲೇಜಿನ ಹೊರಗಿನ ಅಂತಹ ಬ್ಯಾನರ್‍ನಲ್ಲಿ ಖಾನ್ ಕುಲಪತಿಯಾಗಿ ವಿಶ್ವವಿದ್ಯಾಲಯಗಳಿಗೆ ಕೆಲಸ ಮಾಡಬೇಕೇ ಹೊರತು ಸಂಘಪರಿವಾರಕ್ಕಲ್ಲ ಎಂದು ಬರೆಯಲಾಗಿದೆ.
ಮಲಪ್ಪುರಂ ಜಿಲ್ಲೆಯ ಕ್ಯಾಲಿಕಟ್ ವಿಶ್ವವಿದ್ಯಾನಿಲಯ ಮತ್ತು ರಾಜ್ಯಾದ್ಯಂತ ಕಾಲೇಜುಗಳಲ್ಲಿ ಖಾನ್ ವಿರುದ್ಧ ನೂರಾರು ಪೋಸ್ಟರ್ ಮತ್ತು ಬ್ಯಾನರ್‍ಗಳನ್ನು ಹಾಕುವುದಾಗಿ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‍ಎಫ್‍ಐ) ತಡರಾತ್ರಿ ಘೋಷಿಸಿತ್ತು. ರಾಜ್ಯಪಾಲರು ತಂಗಿರುವ ವಿಶ್ವವಿದ್ಯಾನಿಲಯದ ಅತಿಥಿ ಗೃಹದ ಹೊರಗಿನ ಕೆಲವು ಬ್ಯಾನರ್‍ಗಳನ್ನು ಖಾನ್ ಅವರ ನಿರ್ದೇಶನದ ಮೇರೆಗೆ ಪೋಲೀಸರು ಕೆಳಗಿಳಿಸಿದ ನಂತರ ವಿದ್ಯಾರ್ಥಿಗಳ ತಂಡ ಈ ರೀತಿಯ ಹೋರಾಟಕ್ಕೆ ಮುಂದಾಗಿದೆ.
ಹೈಫೈ ಸೌಲಭ್ಯ ಹೊಂದಿರುವ ವಂದೇ ಭಾರತ್ ರೈಲಿಗೆ ಇಂದು ಮೋದಿ ಚಾಲನೆ
ಭಾನುವಾರ ಮಧ್ಯಾಹ್ನವೇ ಬ್ಯಾನರ್‍ಗಳ ಗಮನಸೆಳೆದರೂ ತೆಗೆದಿಲ್ಲ ಎಂದು ರಾಜ್ಯಪಾಲರು ಕಿಡಿ ಕಾರಿದರು ಹಾಗೂ ಯಾವುದೇ ಕ್ರಮ ಕೈಗೊಳ್ಳದ ಪೋಲೀಸರ ವಿರುದ್ಧ ವಾಗ್ದಾಳಿ ನಡೆಸಿದರು. ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಅತಿಥಿ ಗೃಹದ ಹೊರಗೆ ಎಸ್‍ಎಫ್‍ಐ ಬ್ಯಾನರ್‍ಗಳು ಅವರನ್ನು ಸಂಘಿ ಎಂದು ಕರೆದು ಹಿಂತಿರುಗಿ ಎಂದು ಒತ್ತಾಯಿಸಿದ್ದರಿಂದ ಆಕ್ರೋಶಗೊಂಡ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿರ್ದೇಶನದ ಮೇರೆಗೆ ರಾಜ್ಯ ಪೊಲೀಸರು ಇವುಗಳನ್ನು ಹಾಕಿದ್ದಾರೆ ಎಂದು ಆರೋಪಿಸಿದರು.
ರಾಜಭವನ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ಆರೋಪ ಮಾಡಲಾಗಿದೆ. ವಿಶ್ವವಿದ್ಯಾಲಯದಲ್ಲಿ ಸಿಎಂ ತಂಗಿದ್ದರೆ ಇಂತಹ ಬ್ಯಾನರ್‍ಗಳಿಗೆ ಅವಕಾಶ ನೀಡಲಾಗುತ್ತಿತ್ತೇ ಎಂದು ಖಾನ್ ಅವರು ವಿಶ್ವವಿದ್ಯಾಲಯದಲ್ಲಿ ನಿಯೋಜಿಸಲಾಗಿದ್ದ ಪೊಲೀಸರನ್ನು ಪ್ರಶ್ನಿಸಿದ್ದರು.