Monday, February 26, 2024
Homeರಾಷ್ಟ್ರೀಯಕೇರಳದ ಕೃಷ್ಣ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೋದಿ

ಕೇರಳದ ಕೃಷ್ಣ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೋದಿ

ತ್ರಿಶೂರ್, ಜ 17 (ಪಿಟಿಐ) : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಕೇರಳದ ಗುರುವಾಯೂರಿನಲ್ಲಿರುವ ಪ್ರಸಿದ್ಧ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ನಟ-ರಾಜಕಾರಣಿ ಸುರೇಶ್ ಗೋಪಿ ಅವರ ಕುಟುಂಬ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡರು, ಇದರಲ್ಲಿ ಮಲಯಾಳಂ ಚಿತ್ರರಂಗದ ಟಾಪ್ ಸ್ಟಾರ್‍ಗಳು ಭಾಗವಹಿಸಿದ್ದರು.

ಪ್ರಧಾನಮಂತ್ರಿಯವರು ಮುಂಡು (ಧೋತಿ)ಯ ಸಾಂಪ್ರದಾಯಿಕ ಉಡುಗೆ ಮತ್ತು ಬಿಳಿ ಶಾಲನ್ನು ಧರಿಸಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ, ಅವರು ತಮ್ಮ ಉಡುಗೆಯನ್ನು ಬದಲಾಯಿಸಿದರು ಮತ್ತು ನಟ ಕಮ್ ರಾಜಕಾರಣಿ ಸುರೇಶ್ ಗೋಪಿ ಅವರ ಮಗಳ ಮದುವೆಯಲ್ಲಿ ಭಾಗವಹಿಸಿದರು ಎಂದು ಭದ್ರತಾ ವ್ಯವಸ್ಥೆಗಳ ಭಾಗವಾಗಿ ದೇವಾಲಯದಲ್ಲಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಲಯಾಳಂ ಚಿತ್ರರಂಗದ ಖ್ಯಾತ ನಟರಾದ ಮಮ್ಮುಟ್ಟಿ, ಮೋಹನ್‍ಲಾಲ್ ಮತ್ತು ದಿಲೀಪ್ ಸೇರಿದಂತೆ ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್‌ಗಳು ಅಲ್ಲಿ ಉಪಸ್ಥಿತರಿದ್ದರು ಮತ್ತು ಪ್ರಧಾನಿ ಅವರು ಪ್ರತಿಯೊಬ್ಬರೊಂದಿಗೂ ಮಾತನಾಡಿದರು ಎಂದು ಅಕಾರಿ ಹೇಳಿದರು. ಗೋಪಿ ಅವರ ಮಗಳ ಮದುವೆಗೂ ಮುನ್ನ ದೇವಸ್ಥಾನದಲ್ಲಿ ವಿವಾಹವಾದ ದಂಪತಿಗಳಿಗೆ ಸಿಹಿ ತಿಂಡಿ ನೀಡಿ ಆಶೀರ್ವಾದ ಮಾಡಿದರು ಎಂದು ಅಧಿಕಾರಿ ತಿಳಿಸಿದರು. ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ಇಲ್ಲಿನ ಪ್ರಸಿದ್ಧ ಶ್ರೀಕೃಷ್ಣ ದೇಗುಲಕ್ಕೆ ಮುಂಜಾನೆಯಿಂದಲೇ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

ಅವರಿವರನ್ನು ಛೂ ಬಿಡುವ ಬದಲು ನನ್ನೆದುರು ಬಂದು ಮಾತಾಡಿ : ಸಿಎಂ ಸಿದ್ದುಗೆ ಹೆಗಡೆ ಸವಾಲ್

ಬೆಳಗ್ಗೆ 7.35ರ ಸುಮಾರಿಗೆ ಗುರುವಾಯೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಮೋದಿ ಶ್ರೀ ಕೃಷ್ಣ ಕಾಲೇಜು ಮೈದಾನದಲ್ಲಿ ಬಂದಿಳಿದಿದ್ದು, ನೂರಾರು ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ಅವರನ್ನು ಸ್ವಾಗತಿಸಲು ಗಂಟೆಗಟ್ಟಲೆ ಜಮಾಯಿಸಿದ್ದರು. ಎಲ್ಲಾ ವಯಸ್ಸಿನ ಜನರು ಹೆಲಿಪ್ಯಾಡ್‍ನಲ್ಲಿ ಬಿಜೆಪಿ ಧ್ವಜಗಳನ್ನು ಬೀಸುತ್ತಾ ಮತ್ತು ಪಕ್ಷದ ಬಣ್ಣಗಳಲ್ಲಿ ಟೋಪಿಗಳು ಮತ್ತು ಕ್ಯಾಪ್ಗ್‍ಳನ್ನು ಧರಿಸಿ ಪ್ರಧಾನಿಯನ್ನು ಸ್ವಾಗತಿಸಿದರು. ಹೆಲಿಪ್ಯಾಡ್‍ನಿಂದ ಶ್ರೀ ವಲ್ಸಮ್ ಗೆಸ್ಟ್ ಹೌಸ್‍ಗೆ ತೆರಳಿದ ಮೋದಿ ಅಲ್ಲಿ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ತೆರಳುವ ಮೊದಲು ಕೇರಳದ ಸಾಂಪ್ರದಾಯಿಕ ಉಡುಗೆಯನ್ನು ಬದಲಾಯಿಸಿಕೊಂಡರು.

ನಂತರ ಅವರು ತ್ರಿಶ್ಶೂರ್ ಜಿಲ್ಲೆಯ ತ್ರಿಪ್ರಯಾರ್ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಕೊಚ್ಚಿಗೆ ಹಿಂದಿರುಗುವ ಮೊದಲು ಅಲ್ಲಿ ಕೇಂದ್ರ ಸರ್ಕಾರ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಿನ್ನೆ ಮೋದಿ ಅವರು ಕೊಚ್ಚಿಯಲ್ಲಿ ಬೃಹತ್ ರೋಡ್‍ಶೋ ನಡೆಸಿದರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿಯವರ ಜನಪ್ರಿಯತೆಯ ಮೇಲೆ ಸಾಗುವ ಬಿಜೆಪಿಯು ದಕ್ಷಿಣ ರಾಜ್ಯದಲ್ಲಿ ಕಾಲಿಡಲು ಗಮನಹರಿಸಲಾಗುತ್ತಿದೆ.

RELATED ARTICLES

Latest News