Sunday, September 15, 2024
Homeಮನರಂಜನೆಲೈಂಗಿಕ ಕಿರುಕುಳ ಆರೋಪ : ಮಲಯಾಳಂ ನಿರ್ದೇಶಕ ರಂಜಿತ್ ವಿರುದ್ಧ ಎಫ್ಐಆರ್

ಲೈಂಗಿಕ ಕಿರುಕುಳ ಆರೋಪ : ಮಲಯಾಳಂ ನಿರ್ದೇಶಕ ರಂಜಿತ್ ವಿರುದ್ಧ ಎಫ್ಐಆರ್

Kerala Police registers FIR against Malayalam director Ranjith

ತಿರುವಂತನಪುರಂ,ಆ.27– ಬಂಗಾಳಿ ನಟಿಯೊಬ್ಬರ ದೂರಿನ ಆಧಾರದ ಮೇಲೆ ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಎರ್ನಾಕುಲಂ ನಾರ್ತ್ ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರ ಜಸ್ಟಿಸ್ ಹೇಮಾ ಸಮಿತಿಯ ವರದಿಯ ಬಿಡುಗಡೆಯಿಂದ ಮಲಯಾಳಂ ಚಲನಚಿತ್ರೋದ್ಯಮದ ಮೀಟೂ ಆಂದೋಲನದಲ್ಲಿ ಹಿಂದಿನ ಲೈಂಗಿಕ ದೌರ್ಜನ್ಯದ ಹೆಚ್ಚಿನ ಆರೋಪಗಳು ಹೊರಹೊಮಿದ್ದರಿಂದ ಕೇರಳದ ಮಹಿಳಾ ನಟಿಯರು ಕನಿಷ್ಠ ಐದು ನಟರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಂಜಿತ್ ವಿರುದ್ಧದ ಆರೋಪದ ಮೇಲೆ ಕಾಂಗ್ರೆಸ್ ಯುವ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪ್ರತಿಕತಿ ದಹಿಸಿದ್ದರು.ಏತನಧ್ಯೆ, ಬಂಗಾಳಿ ನಟಿಯೊಬ್ಬರ ದೂರಿನ ಮೇರೆಗೆ ರಂಜಿತ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ರ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಗಿದೆ ಎಂದು ಎರ್ನಾಕುಲಂ ನಾರ್ತ್ ಪೊಲೀಸರು ತಿಳಿಸಿದ್ದಾರೆ.

2009 ರ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿರುವ ಕಾರಣ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೇಮಾ ಸಮಿತಿಯ ವರದಿಯು ಮಹಿಳಾ ಕಲಾವಿದರು ಮತ್ತು ತಂತ್ರಜ್ಞರ ಮೇಲಿನ ವ್ಯವಸ್ಥಿತ ಲೈಂಗಿಕ ಕಿರುಕುಳ ಮತ್ತು ನಿಂದನೆಗಳ ಮೇಲೆ ಮಾತ್ರವಲ್ಲದೆ, ಮಹಿಳೆಯರಿಗೆ ಶೌಚಾಲಯಗಳು ಮತ್ತು ಬಟ್ಟೆ ಬದಲಾಯಿಸುವ ಕೋಣೆಗಳಲ್ಲೂ ಕಿರುಕುಳ ನೀಡಿರುವುದರ ಮೇಲೆ ಬೆಳಕು ಚೆಲ್ಲಿದೆ.

RELATED ARTICLES

Latest News