Thursday, April 3, 2025
Homeಅಂತಾರಾಷ್ಟ್ರೀಯ | Internationalಭಾರತೀಯ ರಾಯಭಾರಿಯನ್ನು ತಡೆದ ಖಲಿಸ್ತಾನಿಗಳು

ಭಾರತೀಯ ರಾಯಭಾರಿಯನ್ನು ತಡೆದ ಖಲಿಸ್ತಾನಿಗಳು

ನ್ಯೂಯಾರ್ಕ್,ನ.27- ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರನ್ನು ಖಾಲಿಸ್ತಾನಿ ಪ್ರತಿಭಟನಾಕಾರರ ಗುಂಪೊಂದು ನಿನ್ನೆ ನ್ಯೂಯಾರ್ಕ್ ಗುರುದ್ವಾರದಲ್ಲಿ ತಡೆದು ವಾದ ವಿವಾದ ನಡೆಸಿರುವ ಘಟನೆ ಎಂದು ವರದಿಯಾಗಿದೆ.

ಸಂಧು ಅವರನ್ನು ಗುರುಪುರಬ್ ಸಂದರ್ಭದಲ್ಲಿ ಲಾಂಗ್ ಐಲ್ಯಾಂಡ್‍ನ ಹಿಕ್ಸ್‍ವಿಲ್ಲೆ ಗುರುದ್ವಾರಕ್ಕೆ ಭೇಟಿ ನೀಡಿದಾಗ ಪ್ರತಿಭಟನಾಕಾರರು ಅವರನ್ನು ಸುತ್ತುವರೆದು ಕೂಗಲು ಪ್ರಾರಂಭಿಸಿದರು. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಚು ರೂಪಿಸಿದ್ದು ಮತ್ತು ಮತ್ತೊಬ್ಬ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ್ದು ನೀವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.

ಭಾರತೀಯರ ಯೋಗಕ್ಷೇಮಕ್ಕೆ ತಿಮ್ಮಪ್ಪನ ಮೊರೆ ಹೋದ ಮೋದಿ

ಸಂಧು ಮತ್ತು ಖಲಿಸ್ತಾನಿ ಪ್ರತಿಭಟನಾಕಾರರ ನಡುವಿನ ಮಾತಿನ ವಿನಿಮಯದ ವೀಡಿಯೊ ಈಗ ವೈರಲ್ ಆಗಿದೆ. ರಾಯಭಾರಿಯು ತಾನು ಸೇವೆಗಾಗಿ (ಸೇವೆ) ಗುರುದ್ವಾರಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ಪ್ರತಿಭಟನಾಕಾರರಿಗೆ ಹೇಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ನೀನೇ ಹೊಣೆ. ಪನ್ನುನ್‍ನನ್ನು ಕೊಲ್ಲಲು ಸಂಚು ರೂಪಿಸಿದ್ದೀಯ ಎಂದು ಪಂಜಾಬಿ ಭಾಷೆಯಲ್ಲಿ ಪ್ರತಿಭಟನಾಕಾರರೊಬ್ಬರು ಕೂಗುತ್ತಿರುವುದು ಕೇಳಿಬರುತ್ತಿದೆ.

ವೀಡಿಯೊದಲ್ಲಿ ಇತರರು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಭಟನಾಕಾರರು ಸಂಧು ಅವರನ್ನು ಹಿಂಬಾಲಿಸುತ್ತಾರೆ ಮತ್ತು ನೀವು ಏಕೆ ಉತ್ತರಿಸುವುದಿಲ್ಲ ಎಂದು ಪ್ರಶ್ನಿಸುತ್ತಾರೆ.

ಭಾರತೀಯ ಮೂಲದ ಲೇಖಕಿ ಕೈ ತಪ್ಪಿದ ಬೂಕರ್ ಪ್ರಶಸ್ತಿ

ಗುರ್ಪತ್‍ವಂತ್ ಮತ್ತು ಖಲಿಸ್ತಾನ್ ಜನಾಭಿಪ್ರಾಯ ಅಭಿಯಾನದ ವಿಫಲ ಸಂಚಿನಲ್ಲಿ ಅವರ ಪಾತ್ರಕ್ಕಾಗಿ ಖಲಿಸ್ತಾನಿಗಳು ಭಾರತೀಯ ರಾಯಭಾರಿ ಅವರನ್ನು ಬೇಸ್‍ಲೆಸ್ ಪ್ರಶ್ನೆಗಳನ್ನು ಕೇಳಲು ಪ್ರಯತ್ನಿಸಿದರು.
ನ್ಯೂಯಾರ್ಕ್‍ನ ಹಿಕ್ಸ್‍ವಿಲ್ಲೆ ಗುರುದ್ವಾರದಲ್ಲಿ ಖಲಿಸ್ತಾನಿಗಳ ಪರ ನಾಯಕತ್ವ ವಹಿಸಿದ್ದ ಹಿಮ್ಮತ್ ಸಿಂಗ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು ಎನ್ನಲಾಗಿದೆ.

RELATED ARTICLES

Latest News