Tuesday, February 27, 2024
Homeರಾಷ್ಟ್ರೀಯಭಾರತೀಯರ ಯೋಗಕ್ಷೇಮಕ್ಕೆ ತಿಮ್ಮಪ್ಪನ ಮೊರೆ ಹೋದ ಮೋದಿ

ಭಾರತೀಯರ ಯೋಗಕ್ಷೇಮಕ್ಕೆ ತಿಮ್ಮಪ್ಪನ ಮೊರೆ ಹೋದ ಮೋದಿ

ತಿರುಪತಿ, ನ.27 (ಪಿಟಿಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ತಿರುಮಲದಲ್ಲಿರುವ ಪ್ರಸಿದ್ಧ ವೆಂಕಟೇಶ್ವರನ ಬೆಟ್ಟಕ್ಕೆ ಭೇಟಿ ನೀಡಿ ಎಲ್ಲಾ ಭಾರತೀಯರ ಉತ್ತಮ ಆರೋಗ್ಯ, ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಬೆಳಗ್ಗೆ 8 ಗಂಟೆ ಸುಮಾರಿಗೆ ಪ್ರಧಾನಿ ದೇವಸ್ಥಾನಕ್ಕೆ ಭೇಟಿ ನೀಡಿದರು. ತಿರುಮಲದ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ, 140 ಕೋಟಿ ಭಾರತೀಯರ ಉತ್ತಮ ಆರೋಗ್ಯ, ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಲಾಗಿದೆ ಎಂದು ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂತರಾಜು ಆಯೋಗದ ವರದಿಯಲ್ಲಿ ಲೋಪ, ನೈಜ ವರದಿ ತಯಾರಿಕೆಗೆ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹ

ಭಾನುವಾರ ರಾತ್ರಿಯೇ ಪ್ರಧಾನಿ ತಿರುಮಲಕ್ಕೆ ಆಗಮಿಸಿದ ಮೋದಿ ಅವರಿಗೆ ದೇವಸ್ಥಾನದ ಅರ್ಚಕರು ವೈದಿಕ ಆಶೀರ್ವಾದವನ್ನು ನೀಡಿದರು. ಆಂಧ್ರಪ್ರದೇಶದ ರಾಜ್ಯಪಾಲ ಎಸ್ ಅಬ್ದುಲ್ ನಜೀರ್ ಮತ್ತು ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ರೆನಿಗಿಂಟಾ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಬರಮಾಡಿಕೊಂಡರು. ದೇವಾಲಯ ದರ್ಶನದ ನಂತರ ಪ್ರಧಾನಿ ತೆಲಂಗಾಣಕ್ಕೆ ತೆರಳಿದರು.

RELATED ARTICLES

Latest News