Saturday, July 27, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-11-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-11-2023)

ನಿತ್ಯ ನೀತಿ : ಟೀಕೆಯಲ್ಲಿ ಅಡಗಿರುವ ಸತ್ಯ, ಹೊಗಳಿಕೆ ಯಲ್ಲಿ ಅಡಗಿರುವ ಸುಳ್ಳು ಇವೆರಡನ್ನೂ ಜನರು ಅರ್ಥ ಮಾಡಿಕೊಂಡರೆ ಬಹುಶಃ ಅರ್ಧದಷ್ಟು ಸಮಸ್ಯೆಗಳು ತಾನಾಗಿಯೇ ಬಗೆಹರಿಯುತ್ತವೆ.

ಪಂಚಾಂಗ ಸೋಮವಾರ 27-11-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ / ನಕ್ಷತ್ರ: ಕೃತ್ತಿಕಾ / ಯೋಗ: ಶಿವ / ಕರಣ: ಬಾಲವ

ಸೂರ್ಯೋದಯ : ಬೆ.06.24
ಸೂರ್ಯಾಸ್ತ : 05.51
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಕೌಟುಂಬಿಕ ಕಲಹಗಳು ಬೀದಿಗೆ ಬರುವ ಸಾಧ್ಯತೆಗಳಿವೆ. ಸಹೋದ್ಯೋಗಿಗಳೇ ಶತ್ರುಗಳಾಗುವರು.
ವೃಷಭ: ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಸಂತಸದಿಂದ ಕೆಲಕಾಲ ಕಳೆಯುವಿರಿ.
ಮಿಥುನ: ಸಾಂಸಾರಿಕ ಜೀವನ ತೃಪ್ತಿಕರವಾಗಿರಲಿದೆ. ನೌಕರರಿಗೆ ಹೊಸ ವಸತಿ ವ್ಯವಸ್ಥೆಯಾಗಲಿದೆ.

ಕಟಕ: ಸಮಾಧಾನದಿಂದ ಕಾರ್ಯನಿರ್ವಹಿಸಿದಲ್ಲಿ ಕೆಲಸ-ಕಾರ್ಯಗಳಲ್ಲಿ ಜಯ ಕಟ್ಟಿಟ್ಟ ಬುತ್ತಿ.
ಸಿಂಹ: ವೈದ್ಯರಿಗೆ ವಿಶೇಷ ರೀತಿಯ ಅನುಭವ ಸಿಗಲಿದೆ. ಮೇಲಕಾರಿಗಳೊಂದಿಗೆ ಮೆಚ್ಚುಗೆ ಪಡೆಯಲು ಹೆಚ್ಚಿನ ಪ್ರಯತ್ನ ನಡೆಸಿ.
ಕನ್ಯಾ: ಕೆಲಸ-ಕಾರ್ಯ ಗಳು ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗಿಗಳು ಅಲ್ಪ ಪ್ರಗತಿ ಕಾಣುವರು.

ತುಲಾ: ಲೇವಾದೇವಿ ವ್ಯವಹಾರಗಳು ನಿರಂತರ ವಾಗಿ ಮುಂದುವರೆಯಲಿವೆ. ಸದುದ್ದೇಶದಿಂದ ಕೆಲವು ಕೆಲಸಗಳನ್ನು ಗೌಪ್ಯವಾಗಿ ನಿರ್ವಹಿಸಿ.
ವೃಶ್ಚಿಕ: ದೂರ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು. ಮಕ್ಕಳಿಂದ ಸಂತೋಷ ಸಿಗಲಿದೆ.
ಧನುಸ್ಸು: ಉದ್ಯೋಗ ನಿಮಿತ್ತ ಪ್ರಯಾಣ ಮಾಡು ವಿರಿ. ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಿ.

ಮಕರ: ಹೊಸದಾಗಿ ಪರಿಚಯವಾಗುವ ಉದ್ಯಮಿ ಯೊಂದಿಗೆ ವ್ಯವಹಾರ ಆರಂಭಿಸಲು ಯೋಚಿಸುವಿರಿ.
ಕುಂಭ: ಹೊಸ ಕೆಲಸ ಆರಂಭಿಸಲು ಕುಟುಂಬ ದವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.
ಮೀನ: ದಾಯಾದಿ ಕಲಹವಾಗಬಹುದು. ದೂರ ಪ್ರಯಾಣ ಮಾಡದಿರುವುದು ಒಳಿತು.

RELATED ARTICLES

Latest News