Monday, December 2, 2024
Homeಮನರಂಜನೆಬೆಂಗಳೂರು ಬುಲ್ಸ್ ಪರ ಜಾಹೀರಾತಿನಲ್ಲಿ ನಟ ಕಿಚ್ಚ ಸುದೀಪ್

ಬೆಂಗಳೂರು ಬುಲ್ಸ್ ಪರ ಜಾಹೀರಾತಿನಲ್ಲಿ ನಟ ಕಿಚ್ಚ ಸುದೀಪ್

Kiccha Sudeep Leads Bengaluru Bulls in Star Sports

ಬೆಂಗಳೂರು,ಅ.15– ಪ್ರೊ ಕಬ್ಬಡಿ ಲೀಗ್ ಸೀಸನ್ 11 ಜಾಹೀರಾತು ಅಭಿಯಾನದಲ್ಲಿ ಬೆಂಗಳೂರು ಬುಲ್ಸ್ ತಂಡದ ಅದ್ಭುತ ಸಾಮರ್ಥ್ಯವನ್ನು ನಟ ಕಿಚ್ಚ ಸುದೀಪ್ ಕೊಂಡಾಡಿದ್ದಾರೆ. ಪ್ರೊ ಕಬಡ್ಡಿ ಲೀಗ್ (ಪಿಕೆಎಲ್ ) ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ನ ಪಿಕೆಎಲ್ ಸೀಸನ್ 11ರ ಜಾಹೀರಾತಿನಲ್ಲಿ ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅವರು ಕಾಣಿಸಿಕೊಂಡಿದ್ದು, ಅತಿ ಹುಮ್ಮಸ್ಸಿನ ಮಾತುಗಳನ್ನಾಡಿದಾರೆ.

ಪಿಕೆಎಲ್‌ನ ಜನಪ್ರಿಯ ಮತ್ತು ಅತ್ಯುತ್ತಮ ತಂಡಗಳಲ್ಲಿ ಒಂದಾಗಿರುವ ಬೆಂಗಳೂರು ಬುಲ್ಸ್ ತಂಡದ ಶಕ್ತಿ, ದೃಢತೆ ಮತ್ತು ತಂಡದ ಸಾಮರ್ಥ್ಯವನ್ನು ಈ ಜಾಹೀರಾತಿನ ಮೂಲಕ ತಿಳಿಸಿದ್ದಾರೆ. ಸುದೀಪ್ ಅವರು ತಮ್ಮ ದೃಢವಾದ ಧ್ವನಿಯಲ್ಲಿ ಕಬಡ್ಡಿ, ಕಬಡ್ಡಿ, ಕಬಡ್ಡಿ ಎನ್ನುತ್ತಿದ್ದರೆ ಆ ಧ್ವನಿ ಹಿನ್ನೆಲೆಯಲ್ಲಿ ಅನುರಣಿಸುತ್ತಿರುತ್ತದೆ. ಆ ಧ್ವನಿಯೇ ಶಕ್ತಿ ಮತ್ತು ಹುಮ್ಮಸ್ಸನ್ನು ತುಂಬುತ್ತಿರುತ್ತದೆ. ಆ ಧ್ವನಿ ಶಕ್ತಿಯ ನೆರವಿನಿಂದ ಅವರು ಬಲಶಾಲಿ ಆನೆಯನ್ನು ಹಿಮ್ಮೆಟ್ಟಿಸಲು ಯಶಸ್ಸುಗಳಿಸುತ್ತಾರೆ. ಈ ಕಬಡ್ಡಿ ಕಬಡ್ಡಿ ಎಂಬ ಅದ್ಭುತ ಶಕ್ತಿ ಮಂತ್ರ ಪಠಣವು ಈ ತೀವ್ರವಾದ ಉಸಿರಿನ ಯುದ್ಧದ ವಿಜಯವನ್ನು ಪ್ರತಿನಿಧಿಸುತ್ತದೆ.

ಜೊತೆಗೆ ಕನ್ನಡಿಗರಿಗೆ ಸೂರ್ತಿ ನೀಡುವ ಪ್ರತ್ನವಾಗಿ ಮತ್ತು ತವರಿನ ತಂಡದ ಶಕ್ತಿಯ ಸಂಕೇತವಾಗಿ ಮೂಡಿಬಂದಿದೆ. ಮತ್ತೊಮ್ಮೆ ಈ ಪ್ರಯಾಣದ ಭಾಗವಾಗಲು ನಾನು ಉತ್ಸುಕನಾಗಿದ್ದೇನೆ ಮತ್ತು ಈ ಋತುವಿನಲ್ಲಿ ಅದ್ಭುತ ಶಕ್ತಿಯೊಂದಿಗೆ ನಮ್ಮ ಬುಲ್ಸ್ ಚಂಡಮಾರುತವನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಹೇಳಿದರು.

RELATED ARTICLES

Latest News