Thursday, May 2, 2024
Homeರಾಜ್ಯಗೃಹಸಚಿವ ಪರಮೇಶ್ವರ್ ಅವರನ್ನು ಭೇಟಿಯಾದ ಕಿಚ್ಚ ಸುದೀಪ್

ಗೃಹಸಚಿವ ಪರಮೇಶ್ವರ್ ಅವರನ್ನು ಭೇಟಿಯಾದ ಕಿಚ್ಚ ಸುದೀಪ್

ಬೆಂಗಳೂರು,ಡಿ.21- ನಟ ಸುದೀಪ್ ಇಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಇಂದು ಬೆಳಿಗ್ಗೆ ಗೃಹಸಚಿವರ ಮನೆಗೆ ಆಗಮಿಸಿದ ಸುದೀಪ್, ಸುದೀರ್ಘ ಕಾಲ ಚರ್ಚೆ ನಡೆಸಿದರು. ಭೇಟಿಯ ಕುರಿತು ಮಾಹಿತಿ ನೀಡಲು ನಿರಾಕರಿಸಿದ ಸುದೀಪ್, ಪ್ರೀತಿ ವಿಶ್ವಾಸಕ್ಕೆ ತಾವು ಗೃಹಸಚಿವರನ್ನು ಭೇಟಿ ಮಾಡಿದ್ದಾಗಿ ಸುದೀಪ್ ಹೇಳಿದರು.

ಗೃಹಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿ, ಚಿತ್ರರಂಗದಲ್ಲಿರುವ ಎಲ್ಲರೂ ಸೇರಿ ಪ್ರತಿವರ್ಷ ಸಿಸಿಎಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡುತ್ತಾರೆ. ಈ ವರ್ಷವೂ 23, 24 ಹಾಗೂ 25 ರಂದು ಪಂದ್ಯಾವಳಿಗಳು ನಡೆಯಲಿವೆ. ಅದರಲ್ಲಿ ಅಂತರರಾಷ್ಟ್ರೀಯ ಕ್ರಿಕಟಿಗರು ಭಾಗವಹಿಸುತ್ತಿದ್ದಾರೆ. ಆ ವಿಚಾರವಾಗಿ ಆಹ್ವಾನ ನೀಡಲು ಸುದೀಪ್ ತಮ್ಮನ್ನು ಭೇಟಿ ಮಾಡಿದ್ದರು ಎಂದು ತಿಳಿಸಿದರು.

ಕಾಂಗ್ರೆಸ್‍ನಲ್ಲಿ ಸಕ್ರಿಯರಾಗಿರಲು ನವಜೋತ್ ಸಿಂಗ್ ಸಿಧುಗೆ ಕರೆ

ಮಾಜಿ ಶಾಸಕರ ಗದ್ದಲ :
ಪರಮೇಶ್ವರ್ ಅವರ ಮನೆಯ ಮುಂದೆ ಇತ್ತೀಚೆಗೆ ಜನಜಂಗುಳಿ ಹೆಚ್ಚಾಗುತ್ತಿದೆ. ಹಲವಾರು ಮಾಜಿ ಸಚಿವರು ಇಂದು ಬೆಳಿಗ್ಗೆ ಅವರ ಮನೆಯ ಮುಂದೆ ಕಾಣಿಸಿಕೊಂಡಿದ್ದರು. ಕೆಲವು ಮಾಜಿ ಶಾಸಕರು ಹಾಗೂ ಮಾಜಿ ಸಚಿವರು ಪರಮೇಶ್ವರ್ ಅವರ ಭೇಟಿಗೆ ಕಚೇರಿ ಸಿಬ್ಬಂದಿಗಳು ಸಮಯ ನಿಗದಿ ಮಾಡಿದ್ದರು. ಆದರೆ ಕೆಲವು ಮಾಜಿ ಶಾಸಕರು ಬೆಳಿಗ್ಗೆ 8 ಗಂಟೆಗೆ ಬಂದು ಕಾದು ಕುಳಿತಿದ್ದರು. 10 ಗಂಟೆಯಾದರೂ ಮನೆಯೊಳಗೆ ಬಿಡದೇ ಇದ್ದುದ್ದರಿಂದ ಸಿಟ್ಟಾದ ಮಾಜಿ ಶಾಸಕರು ಪೊಲೀಸರ ಜೊತೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆಸಿದರು.

ಗದ್ದಲ ಜೋರಾದಾಗ ಪೊಲೀಸರು ಕಚೇರಿ ಸಿಬ್ಬಂದಿಗಳನ್ನು ಸಂಪರ್ಕಿಸಿ ಮಾಜಿ ಶಾಸಕರನ್ನು ಮಾತ್ರ ಒಳಗೆ ಕರೆದುಕೊಂಡರು. ಮೂರ್ನಾಲ್ಕು ಮಂದಿ ಮಾಜಿ ಶಾಸಕರು ಪರಮೇಶ್ವರ್ ಮನೆಯ ಮುಂದೆ ಅಡ್ಡಾಡುತ್ತಿದ್ದುದು ಕಂಡುಬಂತು.

RELATED ARTICLES

Latest News