Friday, April 18, 2025
Homeರಾಷ್ಟ್ರೀಯ | Nationalಹಿಂದೂಗಳ ಪವಿತ್ರ ಕ್ಷೇತ್ರ ವಾರಣಾಸಿಯಲ್ಲೇ ಯುವತಿ ಮೇಲೆ 22 ಜನರಿಂದ ಒಂದು ವಾರ ನಿರಂತರ ಗ್ಯಾಂಗ್...

ಹಿಂದೂಗಳ ಪವಿತ್ರ ಕ್ಷೇತ್ರ ವಾರಣಾಸಿಯಲ್ಲೇ ಯುವತಿ ಮೇಲೆ 22 ಜನರಿಂದ ಒಂದು ವಾರ ನಿರಂತರ ಗ್ಯಾಂಗ್ ರೇಪ್..!

Kidnapped, Gang-Raped For Days By 22 In Varanasi, Claims 19-Year-Old

ವಾರಣಾಸಿ,ಎ.9 – ಹಿಂದೂಗಳ ಪವಿತ್ರ ಧಾರ್ಮಿಕ ಶ್ರದ್ದಾ ಕೇಂದ್ರವೆಂದೇ ಹೇಳುವ ಉತ್ತರಪ್ರದೇಶದ ವಾರಣಾಸಿಯಲ್ಲಿ 19 ವರ್ಷದ ಯುವತಿಯನ್ನು ಒಂದು ವಾರದಲ್ಲಿ 22 ಜನರು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಲ್ಲಾ ಆರೋಪಿಗಳ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 70(1) (ಸಾಮೂಹಿಕ ಅತ್ಯಾಚಾರ), 74 (ಮಾನಸಿಕ ದೌರ್ಜನ್ಯ), 123 (ವಿಷ ಅಥವಾ ಹಾನಿಕಾರಕ ವಸ್ತು ನೀಡುವುದು), 126(2) (ಚಲನೆಗೆ ಅಡ್ಡಿಪಡಿಸುವುದು), 127(2) (ಅಕ್ರಮ ಬಂಧನ), ಮತ್ತು 351(2) (ಕ್ರಿಮಿನಲ್ ಬೆದರಿಕೆ) ಅಡಿ ದೂರು ದಾಖಲಿಸಿದ್ದಾರೆ.

ಉತ್ತರ ವಾರಣಾಸಿಯ ಲಾಲ್‌ಪುರ ಪ್ರದೇಶದ ನಿವಾಸಿಯಾಗಿರುವ ಹದಿಹರೆಯದ ಬಾಲಕಿ ಮಾರ್ಚ್ 29ರಂದು ಸ್ನೇಹಿತನನ್ನು ಭೇಟಿ ಮಾಡಲು ಮನೆಯಿಂದ ಹೊರಟಿದ್ದಳು. ಅದೇ ದಿನ, ಆಕೆಯನ್ನು ಅಪಹರಿಸಿದವರು ಪಾಂಡೆಪುರ ಛೇದಕದಲ್ಲಿ ಮಾದಕದ್ರವ್ಯ ಸೇವಿಸಿ ಬಿಡುಗಡೆ ಮಾಡಿದ್ದರು.

ಸಂತ್ರಸ್ಥೆಯೂ ಹೇಗೋ ಹತ್ತಿರದ ಸ್ನೇಹಿತನ ಮನೆಗೆ ಹೋಗಿದ್ದರು. ನಂತರ ಅವಳು ತನ್ನ ತಂದೆಗೆ ನಡೆದ ಘಟನೆಯನ್ನು ವಿವರಿಸಿದ್ದಳು. ಬಳಿಕ ಪೊಲೀಸರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈಘಟನೆಯೂ ಹುಕ್ಕಾ ಬಾರ್, ಹೋಟೆಲ್, ಲಾಡ್ಜ್ ಮತ್ತು ಅತಿಥಿ ಗೃಹದಲ್ಲಿ ನಡೆದಿವೆ ಎಂದು ವರದಿಯಾಗಿದೆ. ಇದರಲ್ಲಿ ವಿವಿಧ ಜನರು ಭಾಗಿಯಾಗಿದ್ದರು.

22 ಜನರು ಅವಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರಲ್ಲಿ ಕೆಲವರು ಹುಕುಲ್‌ಗಂಜ್ ಮತ್ತು ಲಲ್ಲಾಪುರ ಪ್ರದೇಶಗಳವರಾಗಿದ್ದು, ಅದೇ ರಾತ್ರಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಅವರಲ್ಲಿ ಕೆಲವರು ಅಪ್ರಾಪ್ತ ವಯಸ್ಕರಾಗಿರಬಹುದು ಎಂಬ ಕಾರಣಕ್ಕೆ ಪೊಲೀಸರು ಯಾವುದೇ ವಿವರ ನೀಡಲು
ಹಿಂಜರಿಯುತ್ತಿದ್ದಾರೆ.ಸ್ಥಳೀಯ ಪೊಲೀಸರ ಹಿರಿಯ ಅಧಿಕಾರಿ ಚಂದ್ರಕಾಂತ್ ಮೀನಾ, ಸಂತ್ರಸ್ತ ಅಥವಾ ಆಕೆಯ ಕುಟುಂಬ ಆರಂಭದಲ್ಲಿ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿರಲಿಲ್ಲ.. ಅತ್ಯಾಚಾರ ದೂರು ಏಪ್ರಿಲ್ 6 ರಂದು ಮಾತ್ರ ದಾಖಲಾಗಿದೆ..

ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಂತ್ರಸ್ತೆಯ ತಾಯಿ, ಅಮಾರ್ಚ್ 29 ರಂದು ತನ್ನ ಮಗಳು ಸ್ನೇಹಿತನ ಮನೆಗೆ ಹೋಗಿದ್ದಳು. ಹಿಂತಿರುಗುವಾಗ ಅವಳಿಗೆ ಆರೋಪಿಗಳಲ್ಲಿ ಒಬ್ಬ ಎದುರು ಸಿಕ್ಕಿದ್ದ. ಅವನು ಅವಳನ್ನು ಲಂಕಾದಲ್ಲಿರುವ ತನ್ನ ಕೆಫೆಗೆ ಕರೆದೊಯ್ದು ರಾತ್ರಿಯಿಡೀ ಅತ್ಯಾಚಾರ ಮಾಡಿದ್ದಾನೆ. ಮಾರ್ಚ್ 30ರಂದು, ಅವಳು ರಸ್ತೆಯಲ್ಲಿ ಬರುವಾಗ ಇನ್ನೊಬ್ಬ ಆರೋಪಿ ಮತ್ತು ಅವನ ಸ್ನೇಹಿತ ಸಿಕ್ಕಿದ್ದಾರೆ. ಅವರು ಅವಳನ್ನು ಬಲವಂತವಾಗಿ ತಮ್ಮ ಮೋಟಾರ್ ಸೈಕಲ್‌ನಲ್ಲಿ ಹೆದ್ದಾರಿಯ ಕಡೆಗೆ ಕರೆದೊಯ್ದು ಅತ್ಯಾಚಾರ ಮಾಡಿ ನಂತರ ನಾಡೇಸರ್ನನಲ್ಲಿ ಬಿಟ್ಟು ಹೋಗಿದ್ದಾರೆಂದು ಉಲ್ಲೇಖಿಸಿದ್ದಾರೆ.

ಮಾರ್ಚ್ 31ರಂದು, ಅವಳನ್ನು ಇನ್ನೂ ಐದು ಜನ ಮಾಲಹಿಯಾದ ಕೆಫೆಯೊಂದಕ್ಕೆ ಕರೆದೊಯ್ದು ಅಲ್ಲಿ ಮಾದಕ ದ್ರವ್ಯ ನೀಡಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಏಪ್ರಿಲ್ 1ರಂದು ಆರೋಪಿಗಳಲ್ಲಿ ಒಬ್ಬ ಮತ್ತು ಅವನ ಸ್ನೇಹಿತ ಹೋಟೆಲ್‌ಗೆ ಕರೆದೊಯ್ದಿದ್ದು ಅಲ್ಲಿ ಅದಾಗಲೇ ಮೂವರು ಇದ್ದರು. ಆಗ ಅಲ್ಲಿ ಅವಳನ್ನು ಫ್ರೆಂಟ್ಗೆ ಮಸಾಜ್ ಮಾಡಲು ಹೇಳಿದ್ದಾರೆ. ಈ ಸಮಯದಲ್ಲಿ ಅಪರಿಚಿತ ವ್ಯಕ್ತಿ ಅವಳ ಮೇಲೆ ಅತ್ಯಾಚಾರ ಮಾಡಿದ. ಹೋಟೆಲ್‌ನಿಂದ ಹೊರಬಂದ ನಂತರ, ಅವಳಿಗೆ ಇನ್ನೊಬ್ಬ ವ್ಯಕ್ತಿ ಸಿಕ್ಕಿದ್ದಾನೆ. ಅವನು ಅವಳನ್ನು ಬಲವಂತವಾಗಿ ಮತ್ತೊಂದು ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿ ನಂತರ ಹೊರಗೆ ಬಿಟ್ಟು ಹೋಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ದೂರಿನಲ್ಲಿ, ಜನಂತರ, ಆರೋಪಿಗಳಲ್ಲಿ ಒಬ್ಬ ಮತ್ತು ಅವನ ಇಬ್ಬರು ಸ್ನೇಹಿತರು ಅವಳನ್ನು ಔರಂಗಾಬಾದ್‌ನ ಗೋದಾಮಿಗೆ ಕರೆದೊಯ್ದು ಅಲ್ಲಿ ಅವನು ಅವಳ ಮೇಲೆ ಅತ್ಯಾಚಾರ ಮಾಡಿದನು. ನಂತರ ಅಲ್ಲಿಂದ ಅವಳನ್ನು ಒಂದು ಕೋಣೆಗೆ ಕರೆದೊಯ್ದು ಇತರ ಇಬ್ಬರು ಅವಳ ಮೇಲೆ ಅತ್ಯಾಚಾರ ಮಾಡಿದರು. ಅಲ್ಲಿಂದ ಅವಳು ತಪ್ಪಿಸಿಕೊಂಡು ಸಿಗ್ರಾದಲ್ಲಿರುವ ಮಾಲ್‌ನ ಮುಂದೆ ಬಂದು ಕುಳಿತಿದ್ದಾಳೆ. ಅಲ್ಲಿ ಒಬ್ಬ ವ್ಯಕ್ತಿ ಮತ್ತು ಅವನ ಸ್ನೇಹಿತ ಏಪ್ರಿಲ್ 2 ರಂದು ಅವಳನ್ನು ಮಾದಕ ದ್ರವ್ಯ ಸೇವಿಸಿದ್ದ ವ್ಯಕ್ತಿಗಳಿಗೆ ನೀಡಿದರು. ಅಲ್ಲಿಯೂ ಅವಳ ಮೇಲೆ ಅತ್ಯಾಚಾರ ಮಾಡಿ ಬಳಿಕ ಆಕೆಯನ್ನು ಅಸ್ತಿ ಫಾಟ್‌ನಲ್ಲಿ ಬಿಟ್ಟು ಹೋದರು ಎಂದು ಹೇಳಿದ್ದಾರೆ.

ನಂತರ, ಏ.3ರಂದು ಅವಳು ತನ್ನ ಸ್ನೇಹಿತನ ಮನೆಗೆ ಹೋಗಿ ಮಾದಕ ದ್ರವ್ಯದ ನಶೆಯಿಂದ ನಿದ್ರಿಸಿದಳು. ಸಂಜೆ ಅವಳನ್ನು ಹೋಟೆಲ್‌ಗೆ ಕರೆದೊಯ್ದು ಅವಳಿಗೆ ಮಾದಕ ದ್ರವ್ಯ ನೀಡಿ ಐದು ಜನ ಸ್ನೇಹಿತರು ಪುನ ಅತ್ಯಾಚಾರ ಮಾಡಿದರು. ಬಳಿಕ ಚೌಕಾಘಾಟ್‌ ನಲ್ಲಿ ಅವಳನ್ನು ಬಿಟ್ಟು ಹೋದರು. ನಂತರ ಅವಳು ಏ.4ರಂದು ಮನೆಗೆ ಹಿಂತಿರುಗಿದಳು. ನಮಗೆ ಮನೆಯಲ್ಲಿ ತನ್ನ ಮೇಲೆ ನಡೆದ ಕೃತ್ಯವನ್ನು ವಿವರಿಸಿದಳು ಎಂದು ತಾಯಿ ದೂರಿನಲ್ಲಿ ಹೇಳಿದ್ದಾರೆ

RELATED ARTICLES

Latest News