ಮಾಘ ಹುಣ್ಣಿಮೆಯಂದು ಗಂಗಾ ಸ್ನಾನ ಮಾಡಿ ಪುನಿತರಾದ ಭಕ್ತ ಸಾಗರ

ವಾರಾಣಾಸಿ,ಫೆ.5- ಮಾಘ ಹುಣ್ಣಿಮೆಯ ಅಂಗವಾಗಿ ಇಂದು ಲಕ್ಷಾಂತರ ಮಂದಿ ಗಂಗಾ ನದಿಯಲ್ಲಿ ಮಿಂದು ಪವಿತ್ರ ಸ್ನಾನ ಮಾಡಿ ಪುನಿತರಾದರು. ದೇಶದ ನಾನಾ ಮೂಲೆಗಳ ಲಕ್ಷಾಂತರ ಭಕ್ತರು, ಸಾಧು,ಸಂತರುಗಳು ಉತ್ತರ ಪ್ರದೇಶದ ವಾರಾಣಾಸಿಯ ಪ್ರಯಾಗ ಘಾಟ್‍ಗೆ ಆಗಮಿಸಿ ಪವಿತ್ರ ಗಂಗೆಯಲ್ಲಿ ಮಿಂದು ತಮ್ಮ ಪಾಪ ಕರ್ಮಗಳನ್ನು ಕಳೆದುಕೊಂಡರು. ಮಾಘ ಹುಣ್ಣಿಮೆಯ ಸಂದರ್ಭದಲ್ಲಿ ಪವಿತ್ರ ಗಂಗಾ ಸ್ನಾನ ಮಾಡಲು ಆಗಮಿಸಿರುವ ಪ್ರವಾಸಿಗರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯ ಯೋಗಿನಾಥ್ ಅವರು ಟ್ವಿಟರ್‍ನಲ್ಲಿ ಶುಭ ಕೋರಿದ್ದಾರೆ. ಪವಿತ್ರ ಗಂಗಾಸ್ನಾನ ಮಾಡಿ ವಿಷ್ಣುವಿಗೆ ಪ್ರಾರ್ಥನೆ […]

ಅತಿ ಉದ್ದದ ನದಿ ವಿಹಾರಕ್ಕೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ,ಜ.13- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ ಎಂವಿ ಗಂಗಾ ವಿಲಾಸ್‍ಗೆ ವಿಡಿಯೋ ಕಾನರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಗಂಗಾ ನದಿಯಲ್ಲಿ ಕ್ರೂಸ್ ಸೇವೆಯ ಪ್ರಾರಂಭವು ಒಂದು ಹೆಗ್ಗುರುತಿನ ಕ್ಷಣವಾಗಿದೆ. ಇದು ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದರು. ಪ್ರಪಂಚದ ವಿವಿಧ ಭಾಗಗಳಲ್ಲಿರುವ ನಮ್ಮ ಎಲ್ಲಾ ಪ್ರವಾಸಿ ಸ್ನೇಹಿತರನ್ನು ಭಾರತ ಸ್ವಾಗತಿಸುತ್ತದೆ. ಭಾರತವು ನೀವು […]

ವಿಶ್ವದ ಅತಿ ಉದ್ದದ ನದಿ ವಿಹಾರಕ್ಕೆ ಗಂಗಾ ವಿಲಾಸ್ ಐಷಾರಾಮಿ ಕ್ರೂಸ್ ರೆಡಿ

ಲಕ್ನೋ,ಜ.11- ಕಳೆದ ಡಿಸಂಬರ್ 22 ರಂದು ಕೋಲ್ಕತ್ತಾದಿಂದ ಹೊರಟ್ಟಿದ್ದ ಗಂಗಾ ವಿಲಾಸ ಐಷರಾಮಿ ಕ್ರೂಸ್ ವಾರಣಾಸಿ ತಲುಪಿದೆ. ವಾರಣಾಸಿಯ ರಾಮನಗರ ಬಂದರಿಗೆ ಜ.7 ರಂದು ಆಗಮಿಸಬೇಕಿದ್ದ ಕ್ರೂಸ್ ಹವಾಮಾನ ವೈಪರೀತ್ಯದಿಂದಾಗಿ 4 ದಿನಗಳ ಕಾಲ ತಡವಾಗಿ ಬಂದರು ತಲುಪಿದೆ. ರಾಮನಗರ ಬಂದರಿಗೆ ಆಗಮಿಸಿದ ಕ್ರೂಸ್‍ಗೆ ಭವ್ಯ ಸ್ವಾಗತ ಕೋರಲಾಯಿತು. ಐಷಾರಾಮಿ ಕ್ರೂಸ್ ಯಾತ್ರೆಗೆ ಜ. 13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. 80 ಪ್ರಯಾಣಿಕರ ಸಾಮಥ್ರ್ಯದ 18 ಸೂಟ್‍ಗಳನ್ನು ಹೊಂದಿರುವ ಈ ಕ್ರೂಸ್ […]

ವಂದೇ ಭಾರತ್ ಎಕ್ಸ್ ಪ್ರೆಸ್‍ಗೆ ಎದುರಾಗುತ್ತಲೇ ಇದೆ ವಿಘ್ನಗಳು

ನವದೆಹಲಿ,ಅ.9-ಹೊಸದಾಗಿ ಪ್ರಾರಂಭವಾದ ವಂದೇ ಭಾರತ್ ಎಕ್ಸ್‍ಪ್ರೆಸ್‍ಗೆ ನಿರಂತರ ವಿಘ್ನಗಳು ಎದುರಾಗುತ್ತಲೇ ಇದೆ. ವಂದೇ ಭಾರತ್ ಹೈಸ್ಪೀಡ್ ರೈಲು ಎಮ್ಮೆಗಳ ಹಿಂಡಿಗೆ ಗುದ್ದಿ ಸುದ್ದಿಯಾಗಿತ್ತು. ಈಗ ಬೇರಿಂಗ್ ಜ್ಯಾಮ್ ಆಗಿ ಪ್ರಯಾಣಿಕರನ್ನು ಬೇರೆ ರೈಲಿಗೆ ಕಳುಹಿಸಿದ ಘಟನೆ ನಡೆದಿದೆ.ನಿನ್ನೆ ಬೇರಿಂಗ್ ದೋಷ ಉಂಟಾಗಿ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಬೇರೆ ರೈಲಿಗೆ ಕಳುಹಿಸಿದ ಪರಿಸ್ಥಿತಿ ನಿರ್ಮಾಣವಾಯಿತು. ಗಾಂಧಿನಗರ ಮುಂಬೈ ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ರೈಲು ಎಮ್ಮೆಗಳ ಹಿಂಡಿಗೆ ಗುದ್ದಿದ ಪರಿಣಾಮ ಮೂರು ಎಮ್ಮೆಗಳು ಮೃತಪಟ್ಟಿದ್ದಲ್ಲದೆ ರೈಲು ಮುಂಭಾಗ […]

ಬೆಂಗಳೂರಿನಿಂದ ಕಾಶಿಗೆ ವಿಶೇಷ ರೈಲು ಸೇವೆ ಆರಂಭ

ಬೆಂಗಳೂರು, ಜು.11- ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಕೈಗೊಳ್ಳುವ ಬಹುಜನರ ಆಸೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಬೆಂಗಳೂರಿನಿಂದ ಕಾಶಿಗೆ ನೇರ ರೈಲು ಸೇವೆ ಆರಂಭಿಸುತ್ತಿದೆ. ಬಯ್ಯಪ್ಪನಹಳ್ಳಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ವಾರಣಾಸಿಗೆ ಭಾರತ್ ಗೌರವ್ ವಿಶೇಷ ರೈಲು ಯಾತ್ರೆ ಸೇವೆಯ ಕುರಿತು ಪರಿಶೀಲನೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಇದರ ಬಗ್ಗೆ ಮಾಹಿತಿ ನೀಡಿದರು. ಬರುವ ಶ್ರಾವಣ ಮಾಸದ ಅಂತ್ಯದವೇಳೆಗೆ ಕಾಶಿಗೆ ವಿಶೇಷ ರೈಲು ಚಾಲನೆಗೊಳ್ಳಲಿದೆ ಎಂದು ಘೋಷಿಸಿದ ಅವರು, ಇದಕ್ಕಾಗಿ […]