Saturday, July 27, 2024
Homeರಾಷ್ಟ್ರೀಯದಶಾಶ್ವಮೇಧದಲ್ಲಿ ಪ್ರಾರ್ಥನೆ ಮಾಡಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

ದಶಾಶ್ವಮೇಧದಲ್ಲಿ ಪ್ರಾರ್ಥನೆ ಮಾಡಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

ವಾರಣಾಸಿ, ಮೇ 14 (ಪಿಟಿಐ) ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಗಂಗಾ ತೀರದಲ್ಲಿರುವ ದಶಾಶ್ವಮೇಧ ಘಾಟ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು.ಮಾತ್ರವಲ್ಲ, ಅವರು ವೇದ ಮಂತ್ರಗಳ ಪಠಣದ ನಡುವೆ ಘಾಟ್‌ನಲ್ಲಿ ಆರತಿಯನ್ನೂ ಮಾಡಿದರು.

ಅಮಿತ್‌ ಶಾ ಮತ್ತು ರಾಜನಾಥ್‌ ಸಿಂಗ್‌ ಸೇರಿದಂತೆ ಹಲವಾರು ಕೇಂದ್ರ ಸಚಿವರು, ಬಿಜೆಪಿ ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಜಮಾಯಿಸಿದ್ದ ಜನ ಸಾಗರದ ನಡುವೆ ಮೋದಿ ನಾಮಪತ್ರ ಸಲ್ಲಿಸಿದರು.

ಬಿಜೆಪಿಯ ಎನ್‌ಡಿಎ ಪಾಲುದಾರರಾದ ಲೋಕದಳ ಅಧ್ಯಕ್ಷ ಜಯಂತ್‌ ಚೌಧರಿ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌, ಅಪ್ನಾ ದಳ (ಎಸ್‌‍) ಅಧ್ಯಕ್ಷೆ ಅನುಪ್ರಿಯಾ ಪಟೇಲ್‌ ಮತ್ತು ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂಪ್ರಕಾಶ್‌ ರಾಜ್‌ಭರ್‌ ಮತ್ತಿತರರು ಬಂದಿದ್ದರು.

ಯೋಗಿ ಆದಿತ್ಯನಾಥ್‌ ಜೊತೆಗೆ ಮುಖ್ಯಮಂತ್ರಿಗಳಾದ ನಿತೀಶ್‌ ಕುಮಾರ್‌ (ಬಿಹಾರ), ಪುಷ್ಕರ್‌ ಸಿಂಗ್‌ ಧಾಮಿ (ಉತ್ತರಾಖಂಡ), ಮೋಹನ್‌ ಯಾದವ್‌ (ಮಧ್ಯಪ್ರದೇಶ), ವಿಷ್ಣು ದೇವ್‌ ಸಾಯಿ (ಛತ್ತೀಸ್‌‍ಗಢ), ಏಕನಾಥ್‌ ಶಿಂಧೆ (ಮಹಾರಾಷ್ಟ್ರ), ಭಜನ್‌ ಲಾಲ್‌ ಶರ್ಮಾ (ರಾಜಸ್ಥಾನ), ಹಿಮಂತ ಬಿಸ್ವಾ ಶರ್ಮಾ (ಅಸ್ಸಾಂ) ), ನಯಾಬ್‌ ಸಿಂಗ್‌ ಸೈನಿ (ಹರಿಯಾಣ), ಪ್ರಮೋದ್‌ ಸಾವಂತ್‌ (ಗೋವಾ), ಪ್ರೇಮ್‌ ಸಿಂಗ್‌ ತಮಾಂಗ್‌ (ಸಿಕ್ಕಿಂ) ಮತ್ತು ಮಾಣಿಕ್‌ ಸಹಾ (ತ್ರಿಪುರ) ಕೂಡ ಪ್ರಧಾನಿ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾದರು.

ನಾಮಪತ್ರ ಸಲ್ಲಿಕೆ ಬಳಿಕ ರುದ್ರಾಕ್ಷ ಕನ್ವೆನ್ಷನ್‌ ಸೆಂಟರ್‌ನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮೋದಿ ಸಭೆ ನಡೆಸಿದರು. ವಾರಣಾಸಿಯಲ್ಲಿ ಜೂನ್‌ 1 ರಂದು ಏಳನೇ ಹಂತದಲ್ಲಿ ಮತದಾನ ನಡೆಯಲಿದೆ

RELATED ARTICLES

Latest News