Saturday, April 19, 2025
Homeರಾಷ್ಟ್ರೀಯ | Nationalಕಾಶಿ ಕುರಿತು ಪ್ರಧಾನಿ ಮೋದಿ ಭಾವನಾತ್ಮಕ ಪೋಸ್ಟ್‌

ಕಾಶಿ ಕುರಿತು ಪ್ರಧಾನಿ ಮೋದಿ ಭಾವನಾತ್ಮಕ ಪೋಸ್ಟ್‌

ಲಕ್ನೋ,ಮೇ14-ನಾನೇನೂ ಇಲ್ಲಿಗೆ ಬಂದಿಲ್ಲ, ಯಾರೂ ನನ್ನನ್ನು ಕಳುಹಿಸಿಲ್ಲ, ಗಂಗಾಮಾತೆ ನನ್ನನ್ನು ಕರೆದಿದ್ದಾರೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ಹಿಂದಿಯಲ್ಲಿ ಭಾವನಾತ್ಮಕ ಪೋಸ್ಟ್‌ ಮಾಡಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ನಾ ಮೈ ಯಹ ಆಯಾ ಹೂಂ, ನಾ ಮುಝೆ ಕಿಸಿ ನೇ ಭೇಜಾ ಹೈ, ಮುಜೇ ತೋ ಮಾ ಗಂಗಾ ನೇ ಬುಲಾಯಾ ಹೈ ಎಂದು ಹೇಳಿದ್ದಾರೆ. ಕಾಶಿಯೊಂದಿಗಿನ ತಮ್ಮ ಸಂಬಂಧವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಈ ಸಂಬಂಧ ಕೇವಲ ಒಬ್ಬ ಜನಪ್ರತಿನಿಧಿಯದ್ದಲ್ಲ. ಇದು ಆಧ್ಯಾತಿಕ ಮತ್ತು ನಾನು. ಇದನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.

2014ರಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮೋದಿ ನಾಮಪತ್ರ ಸಲ್ಲಿಸಿದರು. ವಾರಣಾಸಿಯಿಂದ ಮೂರನೇ ಬಾರಿಗೆ ನಾಮಪತ್ರ ಸಲ್ಲಿಸಲು ಸಜ್ಜಾಗುತ್ತಿರುವಂತೆಯೇ ಇಂದು ಅದೇ ಹೇಳಿಕೆಯನ್ನು ನೆನಪಿಸಿಕೊಂಡ ಮೋದಿ, ಗಂಗಾ ಮಾತೆ ತನ್ನನ್ನು ದತ್ತು ಪಡೆದಿದ್ದಾಳೆ ಮತ್ತು ಕಾಶಿಯೊಂದಿಗಿನ ಅವರ ಬಂಧವು ತಾಯಿಯಂತೆಯೇ ಇದೆ ಎಂದು ಹೇಳಿದ್ದಾರೆ.

ಕಾಶಿಯ ಜನರ ಪ್ರೀತಿ ಮತ್ತು ವಾತ್ಸಲ್ಯವೇ ಅವರನ್ನು ಬನಾರಸ್‌‍ ಆಗಿ ಪರಿವರ್ತಿಸಿದೆ. ಗಂಗಾಮಾತೆ ನನ್ನನ್ನು ಕರೆದಿದ್ದಾಳೆ. ನಾನು ಪ್ರತಿಯೊಂದು ಕೆಲಸವನ್ನು ದೇವರ ಪೂಜೆ ಎಂದು ಪರಿಗಣಿಸಿ ಮಾಡುತ್ತೇನೆ. ಜನರ ಪ್ರೀತಿಯನ್ನು ನೋಡಿದಾಗ ನನ್ನ ಜವಾಬ್ದಾರಿಗಳು ಹೆಚ್ಚಾಗುತ್ತಿದೆ ಎಂದು ಪ್ರಧಾನಿ ಅವರು ಹೇಳಿದ್ದಾರೆ.

RELATED ARTICLES

Latest News