ಅಹಮದಾಬಾದ್, ಅ. 3 (ಪಿಟಿಐ) ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಶತಕ ಬಾರಿಸಿದ್ದಾರೆ. ರಾಹುಲ್ ಶತಕದಾಟದ ನೆರವಿನಿಂದ ಟೆಸ್ಟ್ನ ಎರಡನೇ ದಿನದಾಟದಲ್ಲಿ ಭಾರತ ಮೂರು ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿ ಪಂದ್ಯವಾಡುತ್ತಿದೆ. ಆರಂಭಿಕ ಆಟಗಾರ ಕೆಎಲ್ ರಾಹುಲ್ ಅದ್ಭುತ ಶತಕ ಬಾರಿಸಿದ್ದಾರೆ. ಧ್ರುವ್ ಜುರೆಲ್ (14) ಅವರಿಗೆ ಸಾಥ್ ನೀಡುತ್ತಿರುವುದರಿಂದ ಭಾರತ ತಂಡವು ವಿರಾಮದ ವೇಳೆಗೆ ಪ್ರವಾಸಿ ತಂಡವನ್ನು 56 ರನ್ಗಳಿಂದ ಮುನ್ನಡೆಸಿದೆ.
121-2 ರನ್ಗಳಿಂದ ದಿನದಾಟ ಆರಂಭಿಸಿದ ಭಾರತ, ಆರಂಭಿಕ ಅವಧಿಯಲ್ಲಿ ನಾಯಕ ಶುಭ್ಮನ್ ಗಿಲ್ (50) ವಿಕೆಟ್ ಕಳೆದುಕೊಂಡಿತು. ಆತಿಥೇಯ ತಂಡವು ಮೊದಲ ದಿನದಾಟದಲ್ಲಿ ವೆಸ್ಟ್ ಇಂಡೀಸ್ ಅನ್ನು 162 ರನ್ಗಳಿಗೆ ಆಲೌಟ್ ಮಾಡಿತ್ತು. ಸಂಕ್ಷಿಪ್ತ ಸ್ಕೋರ್ಗಳು: ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್್ಸ : 162 ಆಲ್ ಔಟ್. ಭಾರತ ಮೊದಲ ಇನ್ನಿಂಗ್್ಸನಲ್ಲಿ 67 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿ ಆಟ ಮುಂದುವರೆಸಿದೆ.