Wednesday, October 23, 2024
Homeಇದೀಗ ಬಂದ ಸುದ್ದಿಲಖನೌ ಸೂಪರ್ ಜಯಂಟ್ಸ್ ಫ್ರಾಂಚೈಸಿಯಿಂದ ಕನ್ನಡಿಗ ಕೆ.ಎಲ್.ರಾಹುಲ್ ಔಟ್..?

ಲಖನೌ ಸೂಪರ್ ಜಯಂಟ್ಸ್ ಫ್ರಾಂಚೈಸಿಯಿಂದ ಕನ್ನಡಿಗ ಕೆ.ಎಲ್.ರಾಹುಲ್ ಔಟ್..?

KL Rahul to be released after Zaheer, Langer find out LSG lost whenever he batted long and scored runs

ಬೆಂಗಳೂರು, ಅ. 23- ಹದಿನೇಳನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬ್ಯಾಟರ್ ಆಗಿ ಯಶಸ್ಸು ಕಂಡರೂ ನಾಯಕನಾಗಿ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸುವಲ್ಲಿ ಎಡವಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು 2025ರ ಐಪಿಎಲ್ ಹರಾಜಿಗೆ ಲಖನೌ ಸೂಪರ್ ಜಯಂಟ್ಸ್ ಫ್ರಾಂಚೈಸಿ ಬಿಟ್ಟುಕೊಡುವ ಸೂಚನೆಗಳು ದಟ್ಟವಾಗಿವೆ.

2022ರಲ್ಲಿ ಐಪಿಎಲ್ ಟೂರ್ನಿಯಲ್ಲಿ ಹೊಸ ತಂಡವಾಗಿ ಗುರುತಿಸಿಕೊಂಡಿದ್ದ ಎಲ್ಎಸ್ಜಿ ಮಾಲೀಕರು ಹರಾಜಿಗೂ ಮುನ್ನವೇ ಕೆಎಲ್ ರಾಹುಲ್ರನ್ನು ಖರೀದಿಸಿ ತಂಡದ ಕ್ಯಾಪ್ಟನ್ಸಿ ನೀಡಿದ್ದರು. ಮೊದಲೆರಡು ಆವೃತ್ತಿಗಳಲ್ಲಿ ತಮ ನಾಯಕತ್ವದ ಕೌಶಲ್ಯದಿಂದ ತಂಡವನ್ನು ಪ್ಲೇ ಆಫ್‌ ತಲುಪಿಸಿದ್ದರು. ಆದರೆ 2024ರಲ್ಲಿ ತಂಡವು ಲೀಗ್ ಹಂತದಲ್ಲೇ ತಮ ಆಟವನ್ನು ಮುಗಿಸಿತ್ತು. ಇದರಿಂದ ಮಾಲೀಕರು ರಾಹುಲ್ ಮೇಲೆ ಮುನಿಸಿಕೊಂಡಿದ್ದರು.

ನಾವು ಹಲವು ಬಾರಿ ಕೆಎಲ್ ರಾಹುಲ್ ಕುರಿತು ಮ್ಯಾನೇಜ್ಮೆಂಟ್ನೊಂದಿಗೆ ಚರ್ಚಿಸಿದ್ದೇವೆ. ಆದರೆ ಅವರನ್ನು ಹರಾಜಿಗೆ ಬಿಟ್ಟುಕೊಡುವುದೇ ಒಳಿತು ಎಂಬ ಅಭಿಪ್ರಾಯಗಳು ಕೇಳಿಬಂದಿವೆ ಎಂದು ಫ್ರಾಂಚೈಸಿ ತಿಳಿಸಿದೆ. 2025ರ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಅವರು ಮುಂಚೂಣಿ ಆಟಗಾರರಾಗಿದ್ದಾರೆ. ಆದರೆ ಇತ್ತೀಚೆಗೆ ಅವರ ಬ್ಯಾಟಿಂಗ್ ಸ್ಟ್ರೈಕ್ರೇಟ್ ಚರ್ಚೆಗೆ ಗ್ರಾಸವಾಗಿದೆ. 2022ರಲ್ಲಿ 135.38 ಸ್ಟ್ರೈಕ್ರೇಟ್ನಲ್ಲಿ 616 ರನ್ ಗಳಿಸಿದ್ದ ರಾಹುಲ್, 2023ರಲ್ಲಿ 520 ರನ್ ಹಾಗೂ 2024ರಲ್ಲಿ 136.13 ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದಾರೆ.

ಎಲ್ಎಸ್ಜಿ ತಂಡದ ಪರ ಕೆ.ಎಲ್.ರಾಹುಲ್ ಅವರು ರನ್ಗಳ ಹೊಳೆ ಹರಿಸಿದ್ದರೂ ಕೂಡ ಆ ಪಂದ್ಯಗಳಲ್ಲಿ ಕನ್ನಡಿಗನ ಕಡಿಮೆ ಸ್ಟ್ರೈಕ್ರೇಟ್ನಿಂದಲೇ ಪಂದ್ಯಗಳನ್ನು ಸೋತಿರುವುದು ಫ್ರಾಂಚೈಸಿ ಹಾಗೂ ಮ್ಯಾನೇಜ್ಮೆಂಟ್ನ ಕೋಪಕ್ಕೆ ಕಾರಣವಾಗಿದೆ. ಕೆ.ಎಲ್.ರಾಹುಲ್ ಅವರು ಇದುವರೆಗೂ 132 ಪಂದ್ಯಗಳಿಂದ 134.61 ಸ್ಟ್ರೈಕ್ರೇಟ್ನಲ್ಲಿ 4 ಶತಕ ಹಾಗೂ 37 ಅರ್ಧಶತಕ ಸೇರಿದಂತೆ 4683 ರನ್ ಗಳಿಸಿದ್ದಾರೆ. ಲಖನೌ ಸೂಪರ್ ಜಯಂಟ್‌ ತಂಡವು 2025ರ ಮೆಗಾ ಹರಾಜಿಗೂ ಮುನ್ನ ವೆಸ್ಟ್ಇಂಡೀಸ್ನ ದೈತ್ಯ ಆಟಗಾರ ನಿಕೋಲಸ್ ಪೂರನ್, ಭಾರತದ ವೇಗಿ ಮಯಾಂಕ್ ಯಾದವ್ ಹಾಗೂ ಸ್ಪಿನ್ನರ್ ರವಿಬಿಸ್ನೋಯ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

RELATED ARTICLES

Latest News