ಪರ್ತ್, ನ.15 (ಪಿಟಿಐ)- ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ಕನ್ನಡಿಗ ಕೆ.ಎಲ್.ರಾಹುಲ್ ಮೊಣಕೈಗೆ ಪೆಟ್ಟು ಮಾಡಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ತರಬೇತಿ ಸಂದರ್ಭದಲ್ಲಿ ಬೌಲರ್ ಪ್ರಸಿದ್ಧ ಕೃಷ್ಣ ಅವರ ಎಸೆತದಲ್ಲಿ ರಾಹುಲ್ ಕೈಗೆ ಪೆಟ್ಟು ಮಾಡಿಕೊಂಡಿರುವುದರಿಂದ ನ.22ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಆಡಲು ಸಾಧ್ಯವೇ ಎಂಬ ಅನುಮಾನ ಕಾಡುತ್ತಿದೆ.
ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್ನಲ್ಲಿ ನಾಯಕ ರೋಹಿತ್ ಶರ್ಮಾ ಆಡದಿದ್ದರೆ 32 ವರ್ಷ ವಯಸ್ಸಿನ ರಾಹುಲ್ ಇನ್ನಿಂಗ್್ಸ ಆರಂಭಿಸುವ ಸಾಧ್ಯತೆ ಇತ್ತು.
ರಾಹುಲ್ ಅವರಿಗೆ ಈಗಷ್ಟೇ ಮೊಣಕೈಗೆ ಗಾಯ ಆಗಿರುವುದರಿಂದ ಅದರ ಬಗ್ಗೆ ನಿರ್ಣಯಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.
ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧದ ಬೆಂಗಳೂರು ಪಂದ್ಯದ ನಂತರ ಆರಂಭಿಕ ಇಲೆವೆನ್ನಲ್ಲಿ ಆಯ್ಕೆಯಾಗದ ಕಾರಣ ರಾಹುಲ್ ಟೆಸ್ಟ್ ಪುನರಾಗಮನವನ್ನು ಬಯಸುತ್ತಿದ್ದಾರೆ.
2023ರ ಡಿಸೆಂಬರ್ನಲ್ಲಿ ಸೆಂಚೂರಿಯನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೆಂಗಳೂರಿನ ಆಟಗಾರನ ಕೊನೆಯ ಟೆಸ್ಟ್ ಶತಕ ಮತ್ತು ಅಂದಿನಿಂದ ಒಂಬತ್ತು ಇನ್ನಿಂಗ್್ಸಗಳಲ್ಲಿ ಕೇವಲ ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ.