Monday, February 26, 2024
Homeಮನರಂಜನೆಕಾಡಿನ ಮೋಹದ ಜಾಲಕ್ಕೆ ಸಿಕ್ಕ ಯವ ಪ್ರೇಮಿಗಳ ಕಥನ ಕ್ಲಾಂತ(ಚಿತ್ರವಿಮರ್ಶೆ)

ಕಾಡಿನ ಮೋಹದ ಜಾಲಕ್ಕೆ ಸಿಕ್ಕ ಯವ ಪ್ರೇಮಿಗಳ ಕಥನ ಕ್ಲಾಂತ(ಚಿತ್ರವಿಮರ್ಶೆ)

ಒಂದು ಸಿನಿಮಾ ತೆರೆ ಮೇಲೆ ಬಂದಾಗ, ಅದು ಪ್ರೇಕ್ಷಕರನ್ನ ನಗಿಸಬಹುದು, ಅಳಿಸಬಹುದು, ಭಯಪಡಿಸಬಹುದು ಇಲ್ಲ ಕುತೂಹಲವನ್ನು ಮೂಡಿಸುತ್ತಾ ರೊಮ್ಯಾಂಟಿಕ್ ಮೂಡಿಗೂ ಕರೆದೊಯ್ಯಬಹುದು.ಇಲ್ಲವೇ ಈ ಎಲ್ಲಾ ಅಂಶಗಳನ್ನು ಒಟ್ಟುಗೂಡಿಸಿ ಮರಂಜನೆ ನೀಡಬಹುದು. ಒಟ್ಟಾರೆ ಅಲ್ಲಿ ಪ್ರೇಕ್ಷಕ ಎರಡು ಎರಡುವರೆ ಗಂಟೆ ಯಾವುದೋ ಒಂದು ರಸಭಾವದಲ್ಲಿ ಮಿಂದು ಹೊರಗೆ ಬರುತ್ತಾನೆ.ಅದು ನರ್ದೇಶಕನ ಯೋಚನಾ ಲಹರಿಯ ತಾಕತ್ತಿಗೆ ಬಿಟ್ಟ ವಿಚಾರ.ಇಂತಹ ಪ್ರಯತ್ನಕ್ಕೆ ಈ ವಾರ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಕ್ಲಾಂತ ಚಿತ್ರ ಉದಾಹರಣೆಯಾಗಿ ನಿಲ್ಲುತ್ತದೆ.

ಮಂಗಳೂರು ಭಾಗದ ಆರಾಧ್ಯ ದೈವ ಕೊರಗಜ್ಜ,ಇಬ್ನರು ಯುವ ಪ್ರೇಮಿಗಳ ಲಾಂಗ್ ಡ್ರೈವ್ ಮೂಲಕ ಮೋಜುಮಸ್ತಿಗಾಗಿ ದಟ್ಟಾರಣ್ಯ ಪ್ರವೇಶ ಮಾಡುವುದು. ಇವೆರಡು ಕ್ಲಾಂತ ಸಿನಿಮಾದ ಕಥೆಯನ್ನ ಆವರಿಸಿ ಒಂದಕ್ಕೊಂದು ಬೆಸೆದುಕೊಂಡು, ಈಗಾಗಲೆ ಹೇಳಿದಾಗೆ ಪ್ರೇಕ್ಷಕರಲ್ಲಿ ಭಯ,ಕುತೂಹಲ ಮೂಡಿಸುತ್ತ ಯುವ ಮನಗಳಲ್ಲಿ ಅಲ್ಲಲ್ಲಿ ರೊಮಾಂಟಿಕ್ ಮೂಡಿಗೆ ತಳ್ಳುತ್ತವೆ.ಅಂದರೆ ನಿರ್ದೇಶಕ ವೈಭವ್ ಪ್ರಶಾಂತ್ ಕೆಲವು ವಿಷಯ ವಸ್ತಗಳ ಮೇಲೆ ಚಿತ್ರ ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದು ಅದರಲ್ಲಿ ಯಶಸ್ಸನ್ನು ಕಂಡಿದ್ದಾರೆ.

ನಾಳೆ ರಜೆ ಘೋಷಣೆ ಬಿಜೆಪಿ ನಾಯಕರು ಒತ್ತಾಯ

ಯುವ ಪ್ರೇಮಿಗಳಾಗಿ ವಿಜ್ಞೇಶ್ ಮತ್ತು ಸಂಗೀತ ಭಟ್ ಸ್ಕ್ರೀನ್ ತಂಬಾ ಆವರಿಸಿದ್ದು ಪ್ರೇಕ್ಷಕರ ಮನದಲ್ಲಿ ಉಳಿಯತ್ತಾರೆ.ಮನೆಯಲ್ಲಿ ಒಂದೊಂದು ಕಾರಣ ಕೊಟ್ಟು ಅಪ್ಪ ಅಮ್ಮನಿಗೆ ಸುಳ್ಳು ಹೇಳಿ ಇಬ್ಬರೇ ಕಾಡಿಗೆ ಒಂದು ಪುಂಡರ ಗ್ಯಾಂಗ್ ಗೆ ತಗಲಾಕಿಕೊಳ್ಳುವ ಇವರು, ಅವರಿಂದ ಬಚಾವ್ ಆಗ್ತಾರ ಇಲ್ಲ ಅವರ ಕೈಲಿ ಸಿಲುಕಿ ಸಾಯ್ತಾರ ಅನ್ನೋದು ಕಥೆಯ ತಿರಳು.ಈ ಘಟನೆಗಳಿಗೂ ಕೊರಗಜ್ಜನಿಗೂ ಇರವ ಸಂಬಂಧ ಅದು ಸಸ್ಪೆನ್ಸ್.

ನಿರ್ದೇಶಕರು ಕಥೆಯನ್ನು ಪ್ರೇಕ್ಷಕರಿಗೆ ಕಟ್ಟಿಕೊಡುತ್ತಾ, ದೈವ ಪ್ರಾಮುಖ್ಯತೆಯನ್ನು ಹೇಳುತ್ತಾ, ಇಂದಿನ ಯುವ ಪೀಳಿಗೆ ಮೋಜು ಮಸ್ತಿ ಮಾಡಲು ಪೋಷಕರನ್ನೂ ಲೆಕ್ಕಿಸದೆ ಗೊತ್ತಿಲ್ಲದ ಜಾಗಗಳಿಗೆ ಅದರಲ್ಲೂ ಕಾಣದ ಕಾಡಿನ ಪ್ರದೇಶಗಳಿಗೆ ಹೋದಾಗ ಆಗುವ ಅನಾಹುತಗಳ ಬಗ್ಗೆ ಸೂಕ್ಷ್ಮವಾಗಿ ಎಚ್ಚರಿಸುವ ಕಾರ್ಯ ಮಾಡಿದ್ದಾರೆ. ಇಂತಹ ಸದಭಿರುಚಿ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕರಾದ ಅಮ್ಮಣ್ಣಾಯ ಕೆ. ಅವರ ಧೈರ್ಯ ಮೆಚ್ಚಲೇಬೇಕು

ನಾಯಕಿ ಸಂಗೀತಾ ಭಟ್‌ ತಂದೆ ತಾಯಿಯಾಗಿ ಶೋಭರಾಜ್‌, ವೀಣಾ ಸುಂದರ್‌ ಹಾಗೂ ನಾಯಕನ ತಾಯಿಯಾಗಿ ಸಂಗೀತಾ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದು, ಸ್ವಪ್ನಾ ಶೆಟ್ಟಿಗಾರ್‌ ಮಹಿಳಾ ವಿಲನ್ ಪಾತ್ರದಲ್ಲಿ ಗಮನಾ ಸೆಳೆಯುತ್ತಾರೆ.ಹಾಗೆ ಕಥೆಗೆ ಪೂರಕವಾಗಿ ಸಂಗೀತ ಸದ್ದು ಮಾಡಿದ್ದು ಎಲ್ಲಾ ವರ್ಗದವರು ನೋಡುವಂತಹ ಚಿತ್ರ ಕ್ಲಾಂತ.ಕ್ಲಾಂತ ಅಂದರೆ ಸಂಸ್ಕೃತದಲ್ಲಿ ಆಯಾಸ ದಣಿವು ಎಂಬರ್ಥ. ಇದರಂತೆ ನಾಯಕ ನಾಯಕಿ ದಣಿವನ್ನ ತೀರಿಸಲಾಗದೆ ಆಯಾಸ ಪಡುತ್ತಾ ಸಾಗುತ್ತಾರೆ ಅದೇನು ಎಂಬುದನ್ನು ಚಿತ್ರ ನೋಡಿದಾಗ ಗೊತ್ತಾಗುತ್ತದೆ

RELATED ARTICLES

Latest News