Thursday, September 19, 2024
Homeಜಿಲ್ಲಾ ಸುದ್ದಿಗಳು | District Newsಮಧ್ಯ ರಾತ್ರಿ ಏಕಾಏಕಿ ಕುಸಿದ ಕಾರವಾರ ಬಳಿಯ ಕೋಡಿಭಾಗ್‌ ಸೇತುವೆ, ಲಾರಿ ಚಾಲಕ ಬಚಾವ್

ಮಧ್ಯ ರಾತ್ರಿ ಏಕಾಏಕಿ ಕುಸಿದ ಕಾರವಾರ ಬಳಿಯ ಕೋಡಿಭಾಗ್‌ ಸೇತುವೆ, ಲಾರಿ ಚಾಲಕ ಬಚಾವ್

ಬೆಳಗಾವಿ, ಆ.7-ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕೋಡಿಭಾಗ್‌ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಿರ್ಮಿಸಿದ್ದ ಸೇತುವೆ ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಕುಸಿದು ಬಿದ್ದಿದೆ.

ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ 41 ವರ್ಷಗಳ ಹಳೆ ಸೇತುವೆ ಏಕಾಏಕಿ ಕುಸಿದು ಬಿದ್ದ ಹಿನ್ನಲೆಲ್ಲಿ ಕಾರವಾರ ಹಾಗೂ ಗೋವಾ ನಡುವಿನ ಸಂಪರ್ಕ ಕಡಿತಗೊಂಡಿದೆ.ಭಾರಿ ಮಳೆಯ ಕಾರಣ ಶಿಥಿಲಗೊಂಡು ಸೇವೆ ಕುಸಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸೇತುವೆ ಮೇಲೆ ತಮಿಳುನಾಡು ಮೂಲದ ಲಾರಿ ಚಲಿಸುವಾಗ ಘಟನೆ ಸಂಭವಿಸಿದ್ದು ಲಾರಿ ಸಮೇತ ಚಾಲಕ ಬಾಲ್‌ ಮುರುಗನ್‌(37) ಕಾಳಿ ನದಿಗೆ ಬಿದ್ದಿದ್ದಾನೆ. ಕಾಳಿ ನದಿಯಲ್ಲಿ ಬಿದ್ದ ಲಾರಿಯ ಮುಂಭಾಗದ ಗ್ಲಾಸ್‌‍ ಒಡೆದು ಕ್ಯಾಬಿನ್‌ ಮೇಲೆ ನಿಂತು ಚಾಲಕ ಬಾಲ ಮುರುಗನ್‌ ರಕ್ಷಣೆಗೆ ಕೂಗಿದ್ದರು.

ಇದನ್ನು ಕಂಡ ಬೀಟ್‌ ಪೊಲೀಸರು ಮಾಹಿತಿ ನೀಡಿದ್ದಾರೆ.ವಿಚಾರ ತಿಳಿದ ತಕ್ಷಣವೇ ಹೆಚ್ಚಿನ ಪೊಲೀಸ್‌‍ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಚಾಲಕನನ್ನು ರಕ್ಷಿಸಿದ್ದಾರೆ.ಅದೃಷ್ಠವಶಾತ್‌ ಲಾರಿ ಚಾಲಕನ ಪ್ರಾಣ ಉಳಿದಿದೆ. ಗಾಯಗೊಂಡಿರುವ ಆತನಿಗೆ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌‍ ವರಿಷ್ಟಾಧಿಕಾರಿ ನಾರಯಣ ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ದಿ ಮಾಡುವಾಗ ಒಂದು ಮಾರ್ಗದಲ್ಲಿ ಮಾತ್ರ ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು.ಇನ್ನೊಂದು ಮಾರ್ಗಕ್ಕೆ ಹಳೆ ಸೇತುವೆಯನ್ನೇ ಬಳಸಲಾಗುತ್ತತ್ತು ಈಗ ಅದು ಕುಸಿದಿದೆ.

ತಮಿಳುನಾಡು ಮೂಲದ ಟ್ರಾನ್ಸಪೋರ್ಟ್‌ ಕಂಪನಿಯ ಈ ಲಾರಿ ಸರಕು ಇಳಿಸಿ ವಾಪಸ್‌‍ ಹುಬ್ಬಳಿ ಕಡೆ ಹೊರಟಿತ್ತು,ಸದ್ಯ ಇನ್ನು ಹಲವು ವಾಹನ ಬಿದ್ದಿರು ಸಾಧ್ಯತೆ ಇದು ಅಗ್ನಿ ಶಾಮಕ ಸಿಬ್ಬಂಧಿ ಹುಡುಕಾಟ ನಡೆಸಿದ್ದಾರೆ.

ಬೆಳಗ್ಗೆ ಈ ಘಟನೆ ನಡೆದಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು ಆದರೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.ಈ ಭಾಗದಲ್ಲಿ ಭಾರಿ ಮಾಳೆಯಿಂದು ನದಿಗಳು ಉಕ್ಕಿಹರಿಯುತ್ತಿದೆ.

ಕಳೆದ 10 ವರ್ಷದ ಹಿಂದೆ ಈ ರಾಷ್ಟ್ರೀಯ ಹೆದಾರಿಯನ್ನು ನಿರ್ಮಿಸಲಾಗಿತ್ತು.ಇನ್ನೊಂದು ಏಕೆ ನಿರ್ಮಿಸಲಿಲ್ಲ ಎಂಬ ಪ್ರಶ್ನೆ ಎದ್ದಿದೆ .ಈ ಭಾಗದಲ್ಲಿ ಬಾರಿ ವಾಹನ ಸಂಚರಿಸುವುದರಿಂದ ಹಿಚ್ಚಿನ ಮುತುವರ್ಜಿ ವಹಿಸಬೇಕು ಎಂದು ಒತ್ತಾಯ ಕೇಳಿಬಂದಿದೆ.

RELATED ARTICLES

Latest News