Friday, October 4, 2024
Homeರಾಜ್ಯರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕೋಡಿಶ್ರೀಗಳಿಗೆ ಆಹ್ವಾನ

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕೋಡಿಶ್ರೀಗಳಿಗೆ ಆಹ್ವಾನ

ಅರಸೀಕೆರೆ, ಡಿ.16- ಮುಂದಿನ ವರ್ಷದ ಜ.22ರಂದು ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭಗೃಹದಲ್ಲಿ ಜರುಗಲಿರುವ ಪವಿತ್ರ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಅಭಿಜಿನ್ ಮುಹೂರ್ತದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಪುಣ್ಯ ಹಾಗೂ ಐತಿಹಾಸಿಕ ಕ್ಷಣಕ್ಕೆ ಪೂಜ್ಯರು ಹಾಜರಿರಬೇಕು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿ ಆಹ್ವಾನಿಸಿದೆ.

ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ ಇಬ್ಬರು ಭಾರತೀಯರ ಬಂಧನ

ಜ.21ರೊಳಗೆ ತಾವು ಅಯೋಧ್ಯೆಗೆ ಭೇಟಿ ನೀಡುವಂತೆ ಕೋರಲಾಗಿದ್ದು, ವಾಸ್ತವ್ಯಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ತಡವಾದರೆ ಬೇರೆ ಬೇರೆ ತೊಂದರೆ ಎದುರಾಗಲಿವೆ. ಹಾಗಾಗಿ ಮುಂಚಿತವಾಗಿ ಪೂಜ್ಯರು ಉಪಸ್ಥಿತರಿರುವಂತೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂಪಲ್ ರೈ ವಿನಂತಿಸಿದ್ದಾರೆ.

ಉದ್ಘಾಟನೆಗೆ ಸಜ್ಜಾಗಿರುವ ಅಯೋಧ್ಯಾ ಶ್ರೀರಾಮ ಮಂದಿರ ಹತ್ತು-ಹಲವು ವಿಶೇಷತೆ ಹೊಂದಿರುವುದರ ಜೊತೆಗೆ ಇಲ್ಲಿನ ಪೂಜೆ-ಪುನಸ್ಕಾರಗಳೂ ವಿಶಿಷ್ಟವಾಗಿ ನಡೆಯಲಿವೆ. ಆದರೆ, ರಾಮ ಮಂದಿರದಲ್ಲಿ ಭಕ್ತರಿಗೆ ಹರಕೆ ಸೇವೆಗಳೇ ಇರುವುದಿಲ್ಲವಂತೆ. ಭಾರತ ದೇಶ ಮಾತ್ರವಲ್ಲ, ವಿಶ್ವದೆಲ್ಲೇಡೆ ಹಿಂದೂಗಳಿಗೆ ಜ.22 ಅತ್ಯಂತ ಮಹತ್ವದ ದಿನ. ಶತಮಾನಗಳ ಕಾಲ ಹಿಂದೂ ಸಮುದಾಯ ಕಾದು ಕುಳಿತಿದ್ದ ಮಹತ್ವದ ಕಾರ್ಯಕ್ರಮವೊಂದು ಆ ದಿನ ನಡೆಯಲಿದೆ. ಶ್ರೀರಾಮ ಮಂದಿರ ಇನ್ನೇನು ಮುಕ್ತಾಯ ಹಂತದಲ್ಲಿದೆ. ಮಂದಿರದ ಗರ್ಭ ಗೃಹದಲ್ಲಿ ರಾಮಲಲ್ಲಾ ಮೂರ್ತಿ, ಅಂದರೆ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಜ.22ರಂದು ಮುಹೂರ್ತ ನಿಗದಿ ಆಗಿದೆ.

ಪ್ರಧಾನಿ ಮೋದಿ ಅವರು ರಾಮ ಮಂದಿರದಿಂದ 500 ಮೀಟರ್ ದೂರದಲ್ಲಿ ಇರುವ ತಾತ್ಕಾಲಿಕ ನೆಲೆಯಿಂದ ಬಾಲ ರಾಮನ ಮೂರ್ತಿಯನ್ನು ತಮ್ಮ ಕೈಗಳಲ್ಲಿ ಹೊತ್ತು ತಂದು ಕಾಲ್ನಡಿಗೆ ಮೂಲಕವೇ ಶ್ರೀರಾಮ ಮಂದಿರದ ಗರ್ಭ ಗೃಹ ತಲುಪಲಿದ್ದಾರೆ. ಅಭಿಜಿನ್ ಮುಹೂರ್ತದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಈ ಮೂಲಕ ಶ್ರೀರಾಮನ ಭವ್ಯ ಮಂದಿರವನ್ನು ಪ್ರಧಾನಮಂತ್ರಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

12 ಕೋಟಿ ಮೌಲ್ಯದ ಕೊಕೇನ್ ವಶ

ಗರ್ಭಗೃಹದಲ್ಲಿ ಮೂರ್ತಿ ಪ್ರತಿಷ್ಠಾಪನೆಯಾದ ಬೆನ್ನಲ್ಲೇ ಬ್ರಹ್ಮ ಕಳಶೋತ್ಸವ ಕೂಡ ಶುರುವಾಗಲಿದೆ. ಜ.22 ರಿಂದ ಮಾರ್ಚ್ 10ರ ವರೆಗೆ 48 ದಿನಗಳ ಕಾಲ ಬ್ರಹ್ಮ ಕಳಶೋತ್ಸವ ನಡೆಯಲಿದೆ.

RELATED ARTICLES

Latest News