Friday, September 20, 2024
Homeರಾಷ್ಟ್ರೀಯ | Nationalಕೋಲ್ಕತ್ತಾ ವೈದ್ಯೆ ಪ್ರಕರಣ : ಸಂದೀಪ್ ಘೋಷ್ ಮತ್ತು ಇತರ ನಾಲ್ವರಿಗೆ ಸುಳ್ಳು ಪತ್ತೆ ಪರೀಕ್ಷೆ

ಕೋಲ್ಕತ್ತಾ ವೈದ್ಯೆ ಪ್ರಕರಣ : ಸಂದೀಪ್ ಘೋಷ್ ಮತ್ತು ಇತರ ನಾಲ್ವರಿಗೆ ಸುಳ್ಳು ಪತ್ತೆ ಪರೀಕ್ಷೆ

Kolkata doctor rape and murder: CBI allowed to conduct polygraph test on Sandip Ghosh and 4 other doctors

ನವದೆಹಲಿ,ಆ.23- ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ಆರ್ಜಿಕಾರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಇತರ ನಾಲ್ವರು ವೈದ್ಯರ ಮೇಲೆ, ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಕೇಂದ್ರೆಯ ತನಿಖಾ ದಳ ನ್ಯಾಯಾಲಯದಿಂದ ಒಪ್ಪಿಗೆ ಪಡೆದಿದೆ.

ವೈದ್ಯೆ ಮೇಲೆ ಅತ್ಯಾಚಾರ ನಡೆದು ಕೊಲೆಯಾದ ದಿನ ಕರ್ತವ್ಯದಲ್ಲಿದ್ದ ಸಂದೀಪ್ ಘೋಷ್ ಮತ್ತು ಇತರ ನಾಲ್ವರು ವೈದ್ಯರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕರೆದೊಯ್ದು ಅವರ ಮೇಲೆ ಸುಳ್ಳು ಪತ್ತೆ ಪರೀಕ್ಷೆಯನ್ನು ನಡೆಸಲು ಅನುಮತಿ ಕೋರಿತು.

ನ್ಯಾಯಾಲಯದ ಅನುಮತಿ ಮತ್ತು ಶಂಕಿತನ ಒಪ್ಪಿಗೆ ಪಡೆದ ನಂತರವಷ್ಟೇ ಸುಳ್ಳು ಪತ್ತೆ ಪರೀಕ್ಷೆ ನಡೆಸಬಹುದಾಗಿದೆ. ಅಪರಾಧದ ಸ್ಥಳವನ್ನು ಬದಲಾಯಿಸಿದ್ದರಿಂದ ಸ್ನಾತಕೋತ್ತರ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಮುಚ್ಚಿಹಾಕಲು ಸ್ಥಳೀಯ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಸಿಬಿಐ ಸುಪ್ರೆಂಕೋಟ್ ಗೆ ಸಲ್ಲಿಸಿದ ವರದಿಯಲ್ಲಿ ಆರೋಪಿಸಿದೆ.

ಆ.9ರಂದು ಕೋಲ್ಕತ್ತಾದ ಆರ್ಜಿಕಾರ್ ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವುದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಮರುದಿನ ನಾಗರಿಕ ಸ್ವಯಂಸೇವಕನನ್ನು ಬಂಧಿಸಲಾಗಿತ್ತು.
ಆ.13ರಂದು ಕೋಲ್ಕತ್ತಾ ಹೈಕೋರ್ಟ್ ತನಿಖೆಯನ್ನು ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲು ಆದೇಶಿಸಿತು. ಆಗಸ್ಟ್ 14ರಂದು ಸಿಬಿಐ ತನಿಖೆ ಕೈಗೆತ್ತಿಕೊಂಡಿತು.

RELATED ARTICLES

Latest News