Saturday, September 21, 2024
Homeರಾಜ್ಯಅತ್ಯಾಚಾರ ಪ್ರಕರಣ : ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ತರಾಟೆ

ಅತ್ಯಾಚಾರ ಪ್ರಕರಣ : ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ತರಾಟೆ

ನವದೆಹಲಿ,ಆ.20- ಕೋಲ್ಕತ್ತಾದ ಆರ್ಜಿಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸ್ನಾತ ಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪ.ಬಂಗಾಳದ ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡ ಸುಪ್ರೀಂಕೋರ್ಟ್, ಇಂತಹ ಹೇಯ ಕೃತ್ಯಕ್ಕೆ ಕಡಿವಾಣ ಹಾಕಲು ಮತ್ತೊಂದು ಅತ್ಯಾಚಾರ ನಡೆಯುವವರೆಗೂ ಕಾಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಜೆ.ಬಿ.ಪರ್ದಿವಾಲ ಹಾಗೂ ಮನೋಜ್ ಮಿಶ್ರ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ದಾಖಲಿಸಿಕೊಂಡಿದ್ದ ಸ್ವಯಂ ದೂರು ಅರ್ಜಿ ವಿಚಾರಣೆ ವೇಳೆ ಅಕ್ಷರಶಃ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಘಟನೆಗೆ ಸಂಬಂ„ಸಿದಂತೆ FIR ದಾಖಲು ಮತ್ತು ಇತರ ಪ್ರಕ್ರಿಯೆ ನಡೆಸುವಲ್ಲಿ ಪೊಲೀಸ್ ಇಲಾಖೆ, ಆಸ್ಪತ್ರೆ ಆಡಳಿತ ಮಂಡಳಿ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

ತರಬೇತಿ ವೈದ್ಯೆಯ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕೆ ಕಳುಹಿಸಿದ ಮೂರು ಗಂಟೆಗಳ ನಂತರ FIR ಏಕೆ ದಾಖಲಾಗಿದೆ? ಕಾಲೇಜು ಪ್ರಾಂಶುಪಾಲ ಏನು ಮಾಡುತ್ತಿದ್ದರು? ಎ-ïಐಆರ್ ದಾಖಲಾಗದೇ ಯುವತಿಯ ಮೃತದೇಹವನ್ನು ಪೆÇೀಷಕರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಏನು ಮಾಡುತ್ತಿದ್ದರು? ಇಷ್ಟು ಪ್ರಕರಣವೊಂದು ನಡೆದಿರುವಾಗ ಘಟನಾ ಸ್ಥಳದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಹೇಗೆ ಅವಕಾಶ ಮಾಡಿಕೊಟ್ಟೀರಿ ಎಂದು ಪ್ರಶ್ನಸಿತು.

ಪೀಠದ ಪ್ರಶ್ನೆಗಳಿಗೆ ಉತ್ತರವಾಗಿ, ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಆಸ್ಪತ್ರೆಯಲ್ಲಿ ಜನರು ಫೋಟೋಗಳನ್ನು ತೆಗೆದುಕೊಂಡಿದ್ದಾರೆ, ಅಸಹಜ ಸಾವಿನ ಪ್ರಕರಣವನ್ನು ತಕ್ಷಣವೇ ಪ್ರಾರಂಭಿಸಲಾಯಿತು ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಇರುವ ಮಂಡಳಿಯನ್ನು ಸ್ಥಾಪಿಸಲಾಯಿತು ಎಂದು ಪ್ರತಿವಾದಿಸಿದರು. ಆದರೆ, ವಿಶೇಷವಾಗಿ ಸಂತ್ರಸ್ತೆಯ ಪೋಷಕರ ಅನುಪಸ್ಥಿತಿಯಲ್ಲಿ FIR ದಾಖಲಿಸುವುದು ಆಸ್ಪತ್ರೆಯ ಕರ್ತವ್ಯ ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

FIR ದಾಖಲಿಸಿದ ಸಮಯವನ್ನು ಪ್ರಶ್ನೆ ಮಾಡಿದ ನ್ಯಾಯಮೂರ್ತಿ ಪಾರ್ದಿವಾಲಾ, FIR ದಾಖಲಿಸಿದ ಮೊದಲ ಮಾಹಿತಿದಾರರು ಯಾರು? FIR ಸಮಯ ಎಷ್ಟು? ಮೊದಲ ಮಾಹಿತಿದಾರ ಸಂತ್ರಸ್ತೆಯ ತಂದೆಯಾಗಿದ್ದು, ರಾತ್ರಿ 11:45ಕ್ಕೆ FIR ದಾಖಲಿಸಿದ್ದಾರೆ ಎಂದು ಸಿಬಲ್ ಪ್ರತಿಕ್ರಿಯಿಸಿದರು. ವೈದ್ಯಕೀಯ ವೃತ್ತಿಗಳು ಹಿಂಸೆಗೆ ಗುರಿಯಾಗುತ್ತಿವೆ. ಸಮಾಜದಲ್ಲಿ ಬೇರೂರಿರುವ ಪಿತೃಪ್ರಭುತ್ವದ ಪಕ್ಷಪಾತದಿಂದಾಗಿ, ಮಹಿಳಾ ವೈದ್ಯರು ಹಿಂಸಾಚಾರಕ್ಕೆ ಹೆಚ್ಚು ಗುರಿಯಾಗುತ್ತಿದ್ದಾರೆ. ಉದ್ಯೋಗ ಸ್ಥಳದಲ್ಲೇ ಅವರ ಮೇಲಿನ ಶೋಷಣೆ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಮಹಿಳೆಯರು ಕೆಲಸಕ್ಕೆ ತೆರಳಲು ಸಾಧ್ಯವಾಗದಿದ್ದರೆ ಅಥವಾ ಕೆಲಸದ ಸ್ಥಳದಲ್ಲಿ ಸುರಕ್ಷತೆ ಇಲ್ಲದಿದ್ದರೆ, ನಾವು ಅವರನ್ನು ಸಮಾನವಾಗಿ ಕಾಣುತ್ತಿಲ್ಲ ಎನ್ನುವ ಅರ್ಥ ಮೂಡುತ್ತದೆ. ಪಶ್ಚಿಮ ಬಂಗಾಳ ಸರ್ಕಾರ ತನ್ನ ಅಧಿಕಾರವನ್ನು ಪ್ರತಿಭಟನಕಾರರ ಮೇಲೆ ತೋರಿಸುವುದು ತರವಲ್ಲ, ದೇಶದಲ್ಲಿ ಭಯ, ಆತಂಕವನ್ನು ತೊಡೆದು ಹಾಕುವ ಸಮಯ ಇದಾಗಿದೆ. ದೇಶವು ಇನ್ನೊಂದು ಅತ್ಯಾಚಾರವನ್ನು ಬಯಸುವುದಿಲ್ಲ ಎಂದು ಹೇಳಿದರು.

ಕೋರ್ಟ್, ವಿದ್ಯಾರ್ಥಿನಿಯ ಹತ್ಯೆ, ಅತ್ಯಾಚಾರ ಮತ್ತು ಆರ್ಜಿಕರ್ ಆಸ್ಪತ್ರೆ ಮೇಲಿನ ಗುಂಪು ದಾಳಿ ತನಿಖೆಯ ಪ್ರಗತಿಯ ಕುರಿತು ಆ.22ರೊಳಗೆ ತನಿಖೆಯ ಸ್ಥಿತಿಗತಿಯ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳಕ್ಕೆ ನಿರ್ದೇಶನ ನೀಡಿದೆ.

ಪೊಲೀಸರಿಗೆ ತರಾಟೆ: ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಪೊಲೀಸರ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲ ಅವರು ಎ-ïಐಆರ್ ದಾಖಲಿಸಿದವರು ಯಾರು? ಯಾವ ಸಮಯದಲ್ಲಿ ಹಾಕಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ವಕೀಲರು, ವೈದ್ಯೆಯ ತಂದೆ ದೂರು ನೀಡಿದ್ದಾರೆ. ಅಸಂವಿಧಾನಿಕ ಸಾವು ಪ್ರಕರಣ ದಾಖಲಾಗಿದೆ. ಬಳಿಕ ಆಸ್ಪತ್ರೆಯ ಉಪಪ್ರಾಂಶುಪಾಲ ದೂರು ನೀಡಿದ್ದಾರೆ. FIR ದಾಖಲಿಸುವಾಗ ಸಮಯ ರಾತ್ರಿ 11:45 ಆಗಿತ್ತು ಎಂದು ಉತ್ತರಿಸಿದರು.

‘ವೆಟ್ಟೈಯನ್’ ಎಂಟ್ರಿಗೆ ಡೇಟ್ ಫಿಕ್ಸ್..ಅಕ್ಟೋಬರ್ 10ಕ್ಕೆ ತೆರೆಗೆ ಬರ್ತಿದೆ ರಜನಿ ಸಿನಿಮಾ

ಬಳಿಕ ಸಿಜೆಐ ಚಂದ್ರಚೂಡ್ ಅವರು, ಶವವನ್ನು ಅಂತ್ಯಸಂಸ್ಕಾರಕ್ಕೆ ಯಾವಾಗ ಹಸ್ತಾಂತರಿಸಲಾಯಿತು ಎಂದು ಪ್ರಶ್ನಿಸಿದರು. ಇದಕ್ಕೆ ವಕೀಲ ತುಷಾರ್ ಮೆಹ್ತಾ ಸುಮಾರು ರಾತ್ರಿ 8:30 ಎಂದು ಉತ್ತರಿಸಿದರು. ಈ ವೇಳೆ ಸಿಜೆಐ, FIR ರಾತ್ರಿ 11:45ಕ್ಕೆ ಆಗಿದೆ ಅದು ಕೂಡ ಹಸ್ತಾಂತರವಾದ 3 ಗಂಟೆಗಳ ನಂತರ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.

ವಿಚಾರಣೆ ವೇಳೆ, ನ್ಯಾಯಾಲಯ ಆಸ್ಪತ್ರೆಯ ಮಹಿಳಾ ವೈದ್ಯರು, ಸಿಬ್ಬಂದಿಗಳ ಸುರಕ್ಷತೆ ಬಗ್ಗೆ ನಮಗೆ ಕಳವಳವಿದೆ. ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು ಇರಬೇಕು. ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಸುರಕ್ಷಿತವಾಗಿರಬೇಕು. ಸುರಕ್ಷಿತ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು. ಸುರಕ್ಷಿತವಾಗಿಲ್ಲ ಎಂದಾದರೆ ಸಂವಿಧಾನಕ್ಕೆ ಅರ್ಥವೇನು ಎಂದು ಪ್ರಶ್ನಿಸಿದರು.
ಇನ್ನೂ ಕಾಲೇಜಿನ ಪ್ರಾಂಶುಪಾಲರ ನೇಮಕ ವಿಚಾರವಾಗಿ, ಪ್ರಾಂಶುಪಾಲರ ಕಾರ್ಯವೈಖರಿ ಪರಿಶೀಲನೆಯಲ್ಲಿರುವಾಗ ತಕ್ಷಣವೇ ಬೇರೆ ಕಾಲೇಜಿನ ಪ್ರಾಂಶುಪಾಲರನ್ನಾಗಿ ಹೇಗೆ ನೇಮಿಸಲಾಯಿತು? ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರದಂದು ಪ್ರಸುತ್ತ ಸ್ಥಿತಿ ವರದಿಯನ್ನು ಸಲ್ಲಿಸಬೇಕು. ಇದು ಸೂಕ್ಷ್ಮ ಹಂತವಾಗಿರುವುದರಿಂದ ಮಾಹಿತಿ ಗೌಪ್ಯವಾಗಿ ನೀಡಲಿ. ನಾವು ಅದನ್ನು ಆದೇಶವಾಗಿ ರವಾನಿಸುತ್ತೇವೆ ಎಂದು ಸಿಜೆಐ ಸೂಚಿಸಿದರು.

ರಾಷ್ಟ್ರೀಯ ಕಾರ್ಯಪಡೆ ರಚಿಸಿ: ವೈದ್ಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂಕೋರ್ಟ್ ಇಂದು ರಾಷ್ಟ್ರೀಯ ಕಾರ್ಯಪಡೆ (ಎನ್‍ಟಿಎ-ï) ರಚಿಸುವಂತೆ ಸೂಚಿಸಿದ್ದು, ಮೂರು ವಾರಗಳಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ.
ದೇಶವನ್ನೇ ಬೆಚ್ಚಿಬೀಳಿಸಿದ ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನ್ಯಾಯಾಲಯ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ಹೊರಬಿದ್ದಿದೆ.

ಕಾರ್ಯಪಡೆಯು ತನ್ನ ಅಂತಿಮ ವರದಿಯನ್ನು ಎರಡು ತಿಂಗಳೊಳಗೆ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ತಿಳಿಸಿದೆ. ಕಾರ್ಯಪಡೆ ಶಸಚಿಕಿತ್ಸಕ ವೈಸ್ ಅಡ್ಮಿರಲ್ ಆರ್ ಸರಿನ್, ಡಾ ಡಿ ನಾಗೇಶ್ವರ್ ರೆಡ್ಡಿ, ಡಾ ಎಂ ಶ್ರೀನಿವಾಸ್, ಡಾ ಪ್ರತಿಮಾ ಮೂರ್ತಿ, ಡಾ.ಗೋವರ್ಧನ್ ದತ್ ಪುರಿ, ಡಾ ಸೌಮಿತ್ರಾ ರಾವತ್, ಪೆÇ್ರ ಅನಿತಾ ಸಕ್ಸೇನಾ, ಕಾರ್ಡಿಯಾಲಜಿ ಮುಖ್ಯಸ್ಥೆ, ಏಮ್ಸ್ ದೆಹಲಿ, ಪೆÇ್ರ.ಪಲ್ಲವಿ ಸಪ್ರೆ, ಡೀನ್ ಗ್ರಾಂಟ್ ಮೆಡಿಕಲ್ ಗ್ರಾಂಟ್‍ನ್ನು ಒಳಗೊಂಡಿರುತ್ತದೆ. ಕಾಲೇಜು ಮುಂಬೈ, ಡಾ ಪದ್ಮಾ ಶ್ರೀವಾಸ್ತವ, ನರವಿಜ್ಞಾನ ವಿಭಾಗ ಒಳಗೊಂಡಿರುತ್ತದೆ.

ಎಚ್‍ಡಿಕೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ ರಾಜ್ಯಪಾಲರಿಗೆ ಎಸ್‍ಐಟಿ ಮನವಿ

ಈ ಕಾರ್ಯಪಡೆಯು ಕೆಲಸದ ಸ್ಥಳಗಳಲ್ಲಿ ಸುರಕ್ಷತೆ ಹೆಚ್ಚಿಸಲು ರಾಷ್ಟ್ರದಾದ್ಯಂತ ನೈತಿಕ ಮಾನದಂಡಗಳನ್ನು ಜಾರಿಗೊಳಿಸುವ ಗುರಿ ಹೊಂದಿರುತ್ತವೆ. ಕಾರ್ಯಪಡೆಯ ಪದನಿಮಿತ್ತ ಸದಸ್ಯರು ಕೇಂದ್ರ ಸಂಪುಟ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರು ಮತ್ತು ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಅಧ್ಯಕ್ಷರನ್ನು ಒಳಗೊಂಡಿರುತ್ತದೆ.
ಕಾರ್ಯಪಡೆಯು ಸುರಕ್ಷತೆ, ಕೆಲಸದ ಪರಿಸ್ಥಿತಿಗಳು ಮತ್ತು ವೈದ್ಯಕೀಯ ವೃತ್ತಿಪರರ ಯೋಗಕ್ಷೇಮ ಮತ್ತು ಇತರ ಸಂಬಂ„ತ ವಿಷಯಗಳಿಗೆ ಸಂಬಂ„ಸಿದಂತೆ ಶಿಫರಸುಗಳನ್ನು ಮಾಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

RELATED ARTICLES

Latest News