Thursday, September 19, 2024
Homeರಾಷ್ಟ್ರೀಯ | Nationalದೀದಿ ವಿರುದ್ಧ ಹತ್ಯೆಗೀಡಾದ ವೈದ್ಯೆಯ ಪೋಷಕರ ಆಕ್ರೋಶ

ದೀದಿ ವಿರುದ್ಧ ಹತ್ಯೆಗೀಡಾದ ವೈದ್ಯೆಯ ಪೋಷಕರ ಆಕ್ರೋಶ

ನವದೆಹಲಿ,ಆ.19- ಕೋಲ್ಕತ್ತಾದ ಆರ್‌ಜಿ ಕರ್‌ ಮೆಡಿಕಲ್‌ ಕಾಲೇಜಿನಲ್ಲಿ ಅತ್ಯಾಚಾರವೆಸಗಿ ಹತ್ಯೆಗೀಡಾದ ಯುವ ವೈದ್ಯೆಯ ಪೋಷಕರು ಪ್ರಕರಣವನ್ನು ಪೊಲೀಸರು ನಿಭಾಯಿಸಿದ ರೀತಿಯನ್ನು ನೋಡಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲಿನ ನಂಬಿಕೆ ಕಳೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಕೇಂದ್ರೀಯ ತನಿಖಾ ದಳ ಕನಿಷ್ಠ ಪ್ರಯತ್ನ ಮಾಡುತ್ತಿದೆ ಎಂದು ಆಕೆಯ ತಂದೆ ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅವರು ತಮ ಮಗಳ ಡೈರಿಯ ಪುಟವನ್ನು ಸಿಬಿಐಗೆ ಹಸ್ತಾಂತರಿಸಿರುವುದಾಗಿ ಹೇಳಿದರು, ಆದರೆ ಅದರ ವಿಷಯಗಳನ್ನು ಚರ್ಚಿಸಲು ನಿರಾಕರಿಸಿದರು.

ಆರಂಭದಲ್ಲಿ ನನಗೆ ಅವರ (ಮಮತಾ ಬ್ಯಾನರ್ಜಿ) ಮೇಲೆ ಸಂಪೂರ್ಣ ನಂಬಿಕೆ ಇತ್ತು, ಆದರೆ ಈಗ ಇಲ್ಲ.ಅವರು ಪ್ರಕರಣದ ತನಿಖೆ ನಡೆಸುತ್ತಿರುವ ರೀತಿ ತೃಪ್ತಿಕರವಾಗಿಲ್ಲ ಎಂದಿದ್ದಾರೆ.

ಮಮತಾ ಬ್ಯಾನರ್ಜಿಯವರ ಎಲ್ಲಾ ಯೋಜನೆಗಳು – ಕನ್ಯಾಶ್ರೀ ಯೋಜನೆ- ಲಕ್ಷಿ ಯೋಜನೆ –ಎಲ್ಲಾ ಹುಸಿ. ಅವುಗಳನ್ನು ಪಡೆಯುವ ಮೊದಲು ದಯವಿಟ್ಟು ನಿಮ ಮನೆಯಲ್ಲಿ ನಿಮ ಲಕ್ಷಿಯರನ್ನು ಸುರಕ್ಷಿತವಾಗಿರಿಸಿಕೊಳ್ಳಿ ಎಂದು ಸಂತ್ರಸ್ಥೆಯ ತಾಯಿ ಕರೆ ನೀಡಿದ್ದಾರೆ.

ಪ್ರಮುಖ ಶಂಕಿತ ಸಂಜೋಯ್‌ ರಾಯ್‌‍, ಕೋಲ್ಕತ್ತಾ ಪೋಲೀಸ್‌‍ನ ನಾಗರಿಕ ಸ್ವಯಂಸೇವಕ, ಅವರು ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪೊಲೀಸ್‌‍ ಔಟ್‌ಪೋಸ್ಟ್‌ನಲ್ಲಿ ನೆಲೆಸಿದ್ದರು ಮತ್ತು ಎಲ್ಲಾ ವಿಭಾಗಗಳಿಗೆ ಪ್ರವೇಶವನ್ನು ಹೊಂದಿದ್ದರು. ಆತ ವೈದ್ಯೆಯನ್ನು ಹತ್ಯೆಗೈದಿರುವ ಕಟ್ಟಡಕ್ಕೆ ಆತ ಪ್ರವೇಶಿಸಿದ ಸಿಸಿಟಿವಿ ದಶ್ಯಾವಳಿಗಳ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ.

ಸಂತ್ರಸ್ತೆಯ ಶವದ ಪಕ್ಕದಲ್ಲಿ ಬ್ಲೂಟೂತ್‌ ಹೆಡ್‌ಸೆಟ್‌ ಪತ್ತೆಯಾಗಿದ್ದು, ಸಿಸಿಟಿವಿ ಫೂಟೇಜ್‌ನಲ್ಲಿ ಆತನ ಕುತ್ತಿಗೆಯಲ್ಲಿ ಕಾಣಿಸಿಕೊಂಡಿದೆ. ಇದು ಅವರ ಫೋನ್‌ನೊಂದಿಗೆ ಜೋಡಿಸಲ್ಪಟ್ಟಿರುವುದು ಕಂಡುಬಂದಿದೆ.

ಪೊಲೀಸರು ವಿಚಾರಣೆ ಆರಂಭಿಸಿದ ಬೆನ್ನಲ್ಲೇ ರಾಯ್‌ ಅಪರಾಧ ಒಪ್ಪಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬೇಕಿದ್ದರೆ ನನ್ನನ್ನು ನೇಣಿಗೇರಿಸಿ ಎಂದು ಪೊಲೀಸರಿಗೆ ನಿರ್ಲಿಪ್ತವಾಗಿ ಹೇಳಿದ್ದ ಎಂದು ವರದಿಗಳು ತಿಳಿಸಿವೆ.

RELATED ARTICLES

Latest News