ಬೆಂಗಳೂರು,ಫೆ.11- ತೊಂದರೆಯಲ್ಲಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈತನಕ 33 ಲಕ್ಷ ರೈತರಿಗೆ 628 ಕೋಟಿ ಹಣ ನೀಡಿದ್ದೇವೆ. 66 ಸಾವಿರ ರೈತರಿಗೆ ಹಣ ಸಂದಾಯ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೆಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ರೈತರಿಗೆ ಕೊಡುವ ಬರಪರಿಹಾರದಲ್ಲಿ ದೊಡ್ಡ ಮಟ್ಟದ ಲೂಟಿಯಾಗಿದೆ. ಲೂಟಿ ಮಾಡುತ್ತಿರುವುದು ಕಂಡುಬಂದರೂ ಆಗಿನ ಸರ್ಕಾರ ತಡೆಗಟ್ಟುವ ಕೆಲಸ ಮಾಡಿಲ್ಲ. ತನಿಖಾ ವರದಿ ಬಂದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಹಣ ದುರುಪಯೋಗ ಆಗದಂತೆ ನೇರವಾಗಿ ರೈತರಿಗೆ ತಲುಪಲು ನಾವು ಕ್ರಮ ಕೈಗೊಂಡಿದ್ದೇವೆ. ಆದರೆ ಹಿಂದೆ ಗ್ರಾಮ ಲೆಕ್ಕಿಗರು ಯಾರದ್ದೋ ಜಮೀನಿಗೆ ಇನ್ನಾರಿಗೋ ಪರಿಹಾರ ಕೊಡುವಂತೆ ಮಾಡಿದ್ದಾರೆ. ವ್ಯಾಪಕವಾಗಿ ಬರ ಪರಿಹಾರ ಹಣ ದುರುಪಯೋಗ ಆಗಿದೆ. ಬೆಳೆ ಬೆಳೆಯದವರಿಗೇ ಪರಿಹಾರ ಸಿಕ್ಕಿದೆ. ಬೆಳೆ ಬೆಳದವರಿಗೆ ಪರಿಹಾರ ಸಿಕ್ಕಿಲ್ಲ. ಆದರೆ ನಮ್ಮ ಸರ್ಕಾರದಲ್ಲಿ ನಮಗೆ ಪರಿಹಾರ ಸಿಕ್ಕಿಲ್ಲ ಎಂಬ ಮಾತು ಕೇಳದಂತೆ ನಿಗಾ ವಹಿಸಿದ್ದೇವೆ ಎಂದು ಹೇಳಿದರು.
ನೇರವಾಗಿ ಬೆಳೆ ಸಮೀಕ್ಷೆ ಮಾಹಿತಿ ಪಡೆದು ರೈತರ ಖಾತೆಗೆ ಪರಿಹಾರದ ಹಣ ಜಮೆ ಮಾಡಲಾಗುತ್ತಿದೆ. ರಾಜ್ಯದ 223 ತಾಲೂಕುಗಳಲ್ಲಿ ಬರ ಘೋಷಣೆ ಆಗಿದೆ. 870 ಕೋಟಿ ರೂ.ಗಳನ್ನು ಜಿಲ್ಲಾಕಾರಿ, ತಹಶೀಲ್ದಾರ್‍ಗೆ ಒದಗಿಸಿದ್ದೇವೆ. ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಅಗತ್ಯ ಇವರೆಡೆ ಬಳಸಿಕೊಳ್ಳಲು ಹೇಳಿದ್ದೇವೆ ಎಂದು ಮಾಹಿತಿ ನೀಡಿದರು.
ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೆÇೀರ್ಸ್‍ಗಳನ್ನ ರಚನೆ ಮಾಡಿದ್ದೇವೆ. 431 ಟಾಸ್ಕ್ ಫೆÇೀರ್ಸ್ ಸಭೆಗಳನ್ನು ಶಾಸಕರು ನಡೆಸಿದ್ದಾರೆ. ಜಿಲ್ಲಾಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ಪ್ರಾಕಾರಗಳಿವೆ. ಮುಂಗಾರು ನಂತರ 236 ಸಭೆಗಳನ್ನು ಮಾಡಿದ್ದಾರೆ. 156 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಖಾಸಗಿ ಬೋರ್ ವೆಲ್ ಬಾಡಿಗೆ ಪಡೆದು ನೀರು ಒದಗಿಸಿದ್ದೇವೆ 46 ಗ್ರಾಮಗಳಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಪೂರೈಸಲಾಗುತ್ತಿದೆ. 202 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ವಿವರಿಸಿದರು.
ತಾಕತ್ತಿದ್ದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಗ್ಯಾರಂಟಿ ನಿಲ್ಲಿಸಿ : ಸಿದ್ದರಾಮಯ್ಯ ಸವಾಲು
ನಗರಪ್ರದೇಶದ 46 ವಾರ್ಡ್‍ಗಳಲ್ಲಿ 12 ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 7082 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬರಬಹುದೆಂದು ಅಂದಾಜು ಮಾಡಲಾಗಿದೆ. 1193 ವಾರ್ಡ್ ಗಳಲ್ಲೂ ಸಮಸ್ಯೆ ಬರಬಹುದು ಅಂತಾ ಪಟ್ಟಿ ಮಾಡಲಾಗಿದೆ. ಪರಿಹಾರ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಡಲಾಗಿದೆ. ಟ್ಯಾಂಕರ್ ಮೂಲಕ ನೀರು ಒಸಗಿಸಲು ಟೆಂಡರ್ ಕರೆದು ಬಾಡಿಗೆ ಮೂಲಕ ಒದಗಿಸಲು ಸೂಚನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
2654 ಖಾಸಗಿ ಬೋರ್‍ವೆಲ್‍ಗಳನ್ನು ಒಪ್ಪಂದ ಮಾಡಿಕೊಳ್ಳಲು ಗುರುತಿಸಿದ್ದೇವೆ. ಕೆಲವು ರೈತರ ಜೊತೆ ಒಪ್ಪಂಧ ಮಾಡಿಕೊಳ್ಳಲಾಗಿದೆ. ತೀರಾ ಅನಿವಾರ್ಯ ಬಂದರೆ ಆರ್ ಡಿಪಿಆರ್ ಮೂಲಕ ಬೋರ್‍ವೆಲ್‍ಗಳನ್ನು ಕೊರೆಸಲು ಸೂಚನೆ ನೀಡಲಾಗಿದೆ. ಮೂರು ಕಡೆ ಗೋಶಾಲೆ ತೆರೆದಿದ್ದೇವೆ. ಫೆಬ್ರವರಿಯಿಂದ ಮೇವು ಸಮಸ್ಯೆ ಆಗಬಹುದೆಂದು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಏಳು ಲಕ್ಷ ಮೇವಿನ ಬಿತ್ತನೆ ಬೀಜ ಕಿಟ್ ಕೊಟ್ಟಿದ್ದೇವೆ. ಏಪ್ರಿಲ್‍ವರೆಗೆ ಮೇವಿನ ಕೊರತೆ ನೀಗಿಸಲು ಎರಡು ಲಕ್ಷ ಮೇವಿನ ಕಿಟ್ ಕೊಡುತ್ತೇವೆ. ಮೇವು ಖರೀದಿಸಲು, ಶೇಖರಿಸಲು ಟಾಸ್ಕ್ ಫೆÇೀರ್ಸ್‍ಗೆ ಸಂಪೂರ್ಣ ಅಕಾರ ನೀಡಲಾಗಿದೆ ಎಂದರು.
ಸೆ.23ರಂದು ರಾಜ್ಯದ ಬರ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. 18172 ಸಾವಿರ ಕೋಟಿ ರೂ. ಎನ್‍ಡಿಆರ್‍ಎಫ್‍ನಡಿ ಪರಿಹಾರ ಕೋರಿದ್ದು, ಅದರಲ್ಲಿ 4663 ಕೋಟಿ ರೂ. ರೈತರಿಗೆ ಕೊಡಬೇಕಾಗುತ್ತದೆ. ನಾಲ್ಕೂವರೆ ತಿಂಗಳು ಕಳೆದರೂ ಕೇಂದ್ರ ಸರ್ಕಾರ ಸಭೆ ನಡೆಸಿ ಪರಿಹಾರ ನೀಡುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಆರೋಪಿಸಿದರು.
ಎನ್ ಡಿಆರ್ ಎಫ್ ನಡಿ ಒಂದು ಪೈಸೆಯೂ ಬಂದಿಲ್ಲ. ಕೇಂದ್ರ ಗೃಹ ಸಚಿವರ ಹೈ ಲೆವೆಲ್ ಕಮಿಟಿ ಅಧ್ಯಕ್ಷರು ಎನ್‍ಡಿಆರ್ ಎಫ್ ಕೂಡ ಗೃಹ ಇಲಾಖೆಯಡಿ ಬರುತ್ತದೆ. ದೆಹಲಿಗೆ ಹೋಗೋವ ಮೊದಲು ಅವರು ಪರಿಹಾರ ಘೋಷಣೆ ಮಾಡಬೇಕು ಎಂದು ರಾಜ್ಯದ ಜನರ ಪರ ಕೇಳಿಕೊಳ್ಳುತ್ತೇವೆ ಎಂದರು.