Thursday, December 5, 2024
Homeಜಿಲ್ಲಾ ಸುದ್ದಿಗಳು | District Newsಅಳಿಯನಿಂದಲೇ ಅತ್ತೆ ಕೊಲೆ

ಅಳಿಯನಿಂದಲೇ ಅತ್ತೆ ಕೊಲೆ

ಮಧುಗಿರಿ, ಫೆ.11- ಮಗಳ ಸಂಸಾರದಲ್ಲಿ ಎದ್ದಿದ್ದ ವಿವಾದ ಬಗೆಹರಿಸಲು ಬಂದಿದ್ದ ಅತ್ತೆಯನ್ನು ದೊಣ್ಣೆಯಿಂದ ಹೊಡೆದು ಅಳಿಯ ಕೊಲೆ ಮಾಡಿರುವ ಘಟನೆ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದಿದೆ. ಅಶ್ವಿತ್ ಉನ್ನಿಸಾ (58) ಕೊಲೆಯಾದ ಅತ್ತೆಯಾಗಿದ್ದು, ಸೈಯದ್ ಸುಹೇಲ್ ಕೊಲೆಗೈದ ಆರೋಪಿಯಾಗಿದ್ದಾನೆ.

ಮಗಳು -ಅಳಿಯನ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು ಇದರಿಂದಾಗಿ ತುಮಕೂರು ತಾಲೂಕಿನ ಬೆಳಗುಂಬದಲ್ಲಿ ವಾಸವಾಗಿದ್ದ ಅಶ್ವಿತ್ ಉನ್ನಿಸಾ ಹೇಗಾದರೂ ಮಾಡಿ ಸಂಸಾರ ಸರಿ ಮಾಡಬೇಕೆಂದು ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಗೆ ಬಂದಿದ್ದರು. ನೆನ್ನೆ ಕೂಡ ಸೈಯದ್ ಸುಹೇಲ್ ಮತ್ತು ಪತ್ನಿಯ ನಡುವೆ ಜಗಳ ನಡೆದಿದ್ದು ಇದನ್ನು ಕಂಡ ಉನ್ನಿಸಾ ಬಿಡಿಸಲು ಹೋದಾಗ ಎಲ್ಲಾ ನಿನ್ನಿಂದಲೆ ಆಗಿದ್ದು ಎಂದು ಅಳಿಯ ದೊಣ್ಣೆಯಿಂದ ಮನಬಂದಂತೆ ದಳಿಸಿ ಹಲ್ಲೆ ನಡೆಸಿದ್ದಾನೆ.

ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ತೀರ್ಮಾನ : ಅನಗತ್ಯ ಗೊಂದಲಕ್ಕೆ ಕಡಿವಾಣ

ಮನೆಯಲ್ಲಿ ಗಲಾಟೆ ಸದ್ದು ಕೇಳಿ ಅಕ್ಕ ಪಕ್ಕದವರು ಬಂದು ನೆಲದಲ್ಲಿ ಬಿದ್ದು ನೋವಿನಿಂದ ನರಳುತ್ತಿದ್ದನ್ನು ನೋಡಿ ಕೂಡಲೇ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ಉನ್ನಿಸಾ ಮೃತಪಟ್ಟಿದ್ದಾರೆ. ಅಳಿಯ ಪರಾರಿಯಾಗಿದ್ದು ಕೊಡಿಗೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

RELATED ARTICLES

Latest News