ಅತ್ತೆಯ ಕೊಂದಿದ್ದ ಅಳಿಯನ ಬಂಧನ

ಬೆಂಗಳೂರು,ಜು.19- ಪತ್ನಿಯನ್ನು ಮನೆಗೆ ಕಳುಹಿಸಿಕೊಡಲಿಲ್ಲ ಎಂಬ ಕಾರಣಕ್ಕೆ ಅತ್ತೆಯೊಂದಿಗೆ ಜಗಳವಾಡಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಅಳಿಯನನ್ನು ಎಚ್‍ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆ ನಿವಾಸಿ ನಾಗರಾಜ್ (35) ಬಂಧಿತ ಅಳಿಯ. ಮಾರತಹಳ್ಳಿಯ ಮಂಜುನಾಥನಗರದ ನಿವಾಸಿ ಸೌಭಾಗ್ಯ(40) ಕೊಲೆಯಾದ ಅತ್ತೆ. ಚಾಲಕ ವೃತ್ತಿ ಮಾಡುವ ನಾಗರಾಜನಿಗೆ ಆರು ವರ್ಷದ ಹಿಂದೆ ಸೌಭಾಗ್ಯ ಅವರ ಮಗಳು ಭವ್ಯಶ್ರೀ ಜೊತೆ ವಿವಾಹ ಮಾಡಿಕೊಡಲಾಗಿದ್ದು, ದಂಪತಿಗೆ ಒಂದು ಮಗುವಿದೆ. ಕುಡಿತದ ಚಟ ಹೊಂದಿದ್ದ ನಾಗರಾಜ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯತ್ತಿತ್ತು. ಇದರಿಂದ […]