Friday, September 20, 2024
Homeರಾಜ್ಯಹೈಟೆಕ್ ಸರ್ಕಾವೆಂದರೆ ಇದೇ ಇರಬೇಕು : ಎಚ್ಡಿಕೆ ವ್ಯಂಗ್ಯ

ಹೈಟೆಕ್ ಸರ್ಕಾವೆಂದರೆ ಇದೇ ಇರಬೇಕು : ಎಚ್ಡಿಕೆ ವ್ಯಂಗ್ಯ

Kumaraswamy On Darshan Photo And Video Call From jail

ಬೆಂಗಳೂರು, ಆ.26- ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿ ಕೊಡುತ್ತಿರುವುದೇ ಹೈಟೆಕ್ ಸರ್ಕಾರದ ಆಡಳಿತ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಮಂಡ್ಯದಲ್ಲಿ ದಿಶಾ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮದು ಹೈಟೆಕ್ ಸರ್ಕಾರ ಎಂದು ಕಾಂಗ್ರೆಸ್ನವರು ಹೇಳುತ್ತಾರೆ.

ಹೈಟೆಕ್ ಸರ್ಕಾವೆಂದರೆ ಇದೇ ಇರಬೇಕು ಎಂದು ಟೀಕಿಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ಖೈದಿಗಳಿಗೆ ಪಂಚತಾರ ವ್ಯವಸ್ಥೆ ಇದೆ. ಈಗ ನಟ ದರ್ಶನ್ ವಿಚಾರದಲ್ಲಿ ಅದು ಪ್ರಚಾರಕ್ಕೆ ಬಂದಿದೆ ಅಷ್ಟೆ. ಸರ್ಕಾರ ಆ ಖೈದಿಗಳನ್ನು ಬೇರೆ ಕಡೆಗೆ ವರ್ಗಾಯಿಸಬೇಕು ಎಂದು ತೀರ್ಮಾನ ಮಾಡುತ್ತಿದೆಯಂತೆ. ಈ ಸರ್ಕಾರದ ಬಗ್ಗೆ ಜನರಿಗೆ ನಂಬಿಕೆ ಬರಲು ಸಾಧ್ಯ ಇಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರ ಮಾಡಿರುವ ತಪ್ಪುಗಳನ್ನು ಮುಚ್ಚಿಕೊಳ್ಳಲು ಡೈವರ್ಟ್ ಮಾಡುತ್ತಿದ್ದಾರೆ. ಕೆಲವು ವಿಷಯಗಳನ್ನು ಮುನ್ನೆಲೆಗೆ ತಂದು ಜನರನ್ನು ಯಾಮಾರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅಧಿಕಾರಿಗಳಿಂದ ನ್ಯಾಯ ದೊರಕುವುದಿಲ್ಲ. ನ್ಯಾಯಾಲಯದಿಂದ ಮಾತ್ರ ನ್ಯಾಯ ದೊರಬೇಕು. ಇದಕ್ಕೆ ಸರ್ಕಾರವೇ ಹೊಣೆ ಆಗಬೇಕು ಎಂದು ಆಗ್ರಹಿಸಿರು ಅವರು, ಜೈಲಿನ ವ್ಯವಸ್ಥೆ ಹೊಸದಾಗಿ ಆಗಿಲ್ಲ, ಹಿಂದಿನಿಂದಲೂ ನಡೆಯುತ್ತಿದೆ. ಈ ಹಿಂದೆ ಡಿಜಿ ಮತ್ತು ಡಿಸಿಪಿ ನಡುವೆ ತನಿಖೆ ನಡೆಯಬೇಕು ಎಂದು ದೊಡ್ಡ ಗಲಾಟೆ ಆಗಿತ್ತು ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಸರ್ಕಾರವೇ ಇಲ್ಲ.ರಾಜ್ಯದಲ್ಲಿ ಆಡಳಿತ ಎನ್ನುವ ನಡವಳಿಕೆ ಇಲ್ಲ. ಭ್ರಷ್ಟಾಚಾರದ ಬಗ್ಗೆ ಬೀದಿ ಬೀದಿಯಲ್ಲಿ ಮಾತಾಡಿಕೊಂಡು ಇರುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಮಂತ್ರಿಗಳಿಗೆ ಕೆಲಸವಿಲ್ಲ. ಮುಖ್ಯಮಂತ್ರಿಗೆ ಅವರ ಹಗರಣ ಬಗ್ಗೆ ಮಾತಾಡಲು ಸಮಯ ಸಾಕಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ.

ದುಡ್ಡು ಇದ್ದವರು ಏನು ಬೇಕಾದರೂ ಕೊಂಡುಕೊಳ್ಳಬಹುದು. ಮೃತ ರೇಣುಕಾಸ್ವಾಮಿ ಕುಟುಂಬಸ್ಥರು ಅವರ ನೋವು ಹೇಳಿಕೊಳ್ಳುತ್ತಾರೆ. ಗೃಹ ಸಚಿವ ಡಾ. ಪರಮೇಶ್ವರ ಅವರು ಪ್ರತಿ ದಿನ ಒಂದೊಂದು ಕಥೆ ಹೇಳುತ್ತಾರೆ. ಪಾರದರ್ಶಕವಾದ ಸರ್ಕಾರ ಮಾಡುತ್ತಿದ್ದೇವೆ ಎನ್ನುತ್ತಾರೆ. ಆದರೆ ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂದು ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದಾರೆ.

RELATED ARTICLES

Latest News