Saturday, September 14, 2024
Homeರಾಜ್ಯಪರಪ್ಪನ ಅಗ್ರಹಾರ ಜೈಲಿಂದ ವಿಲ್ಸನ್ ಗಾರ್ಡನ್ ನಾಗನ ಸ್ಥಳಾಂತರಕ್ಕೆ ಪತ್ರ : ದಯಾನಂದ

ಪರಪ್ಪನ ಅಗ್ರಹಾರ ಜೈಲಿಂದ ವಿಲ್ಸನ್ ಗಾರ್ಡನ್ ನಾಗನ ಸ್ಥಳಾಂತರಕ್ಕೆ ಪತ್ರ : ದಯಾನಂದ

Wilson Garden Naga

ಬೆಂಗಳೂರು,ಆ.26- ರೌಡಿ ವಿಲ್ಸನ್ಗಾರ್ಡನ್ ನಾಗನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆ ಜೈಲಿಗೆ ಸ್ಥಳಾಂತರಿಸುವಂತೆ ಈಗಾಗಲೇ ಕಾರಾಗೃಹಗಳ ಡಿಜಿಪಿಯವರಿಗೆ ಪತ್ರ ಬರೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ವಿಲ್ಸನ್ಗಾರ್ಡನ್ ನಾಗ ಹಾಗೂ ಆತನ ಸಹಚರರ ಚಲನವಲನಗಳ ಬಗ್ಗೆ ನಾವು ನಿಗಾ ವಹಿಸುತ್ತಿದ್ದೇವೆ. ದರ್ಶನ್ ಜೊತೆ ವಿಲ್ಸನ್ಗಾರ್ಡನ್ ನಾಗನ ಸ್ನೇಹ ಹೇಗೆ ಬೆಳೆಯಿತು? ಈ ರೀತಿ ರಾಜಾತಿಥ್ಯ ನೀಡಿದವರ್ಯಾರು? ಎಂಬುದನ್ನು ಕಾರಾಗೃಹ ಗಳ ಇಲಾಖೆ ಈಗಾಗಲೇ ತನಿಖೆ ಆರಂಭಿಸಿದೆ ಎಂದರು.

ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಏಳು ಮಂದಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಕಳೆದ ಶನಿವಾರವಷ್ಟೇ ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ಸಂದರ್ಭದಲ್ಲಿ ಮೊಬೈಲಾಗಲೀ, ಮಾದಕ ವಸ್ತುವಾಗಲೀ ಏನೂ ಸಿಕ್ಕಿರಲಿಲ್ಲ.

ನಮ ಪೊಲೀಸರು ಆಗಾಗ್ಗೆ ಈ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿರುತ್ತಾರೆ. ಮುಂದಿನ ದಿನಗಳಲ್ಲೂ ಅನಿರೀಕ್ಷಿತ ದಾಳಿ ನಡೆಯಲಿದೆ ಎಂದು ಅವರು ಹೇಳಿದರು.

RELATED ARTICLES

Latest News