Saturday, September 14, 2024
Homeರಾಜ್ಯವಿಡಿಯೋ ಕಾಲ್‌ನಲ್ಲಿ ದರ್ಶನ್ ಜೊತೆ ಮಾತಾಡಿದ್ದು ರೌಡಿಯ ಮಗ

ವಿಡಿಯೋ ಕಾಲ್‌ನಲ್ಲಿ ದರ್ಶನ್ ಜೊತೆ ಮಾತಾಡಿದ್ದು ರೌಡಿಯ ಮಗ

Darshan Rowdy Vieo Call

ಬೆಂಗಳೂರು,ಆ.26- ಜೈಲಿನಿಂದ ದರ್ಶನ್ ವಿಡಿಯೊ ಕಾಲ್ ಮಾಡಿ ಮಾತನಾಡಿರುವ ವ್ಯಕ್ತಿ ನಗರದ ಹೊರವಲಯದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ, ರೌಡಿಶೀಟರ್ ಮಗ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ರೌಡಿಶೀಟರ್ ಮಗನಿಗೆ ವಿಡಿಯೊ ಕಾಲ್ ಮಾಡಿರುವ ದರ್ಶನ್, ಹಾಯ್ ಚಿನ್ನ, ಊಟ ಆಯ್ತಾ ಎಂದು ಕುಶಲೋಪರಿ ವಿಚಾರಿಸಿ ಮಾತನಾಡಿರುವ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.ಇದನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ರೌಡಿಯ ಮಗನಿಗೆ ವಿಡಿಯೊ ಕಾಲ್ ಮಾಡಲು ದರ್ಶನ್ಗೆ ಸಾರ್ಟ್ಫೋನ್ ಕೊಟ್ಟವರ್ಯಾರು? ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ. ರೌಡಿ ಮಗನಿಗೂ, ದರ್ಶನ್ಗೂ ಯಾವ ರೀತಿಯ ಸಂಬಂಧವಿದೆ ಎಂಬುದನ್ನು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News