Sunday, December 1, 2024
Homeಜಿಲ್ಲಾ ಸುದ್ದಿಗಳು | District Newsಕುಂದಾಪುರ : ಮದ್ಯದ ಅಮಲಿನಲ್ಲಿ ಪತ್ನಿಯ ಕತ್ತು ಕಡಿದು ಕುಣಿದು ಕುಪ್ಪಳಿಸಿದ ಪತಿ

ಕುಂದಾಪುರ : ಮದ್ಯದ ಅಮಲಿನಲ್ಲಿ ಪತ್ನಿಯ ಕತ್ತು ಕಡಿದು ಕುಣಿದು ಕುಪ್ಪಳಿಸಿದ ಪತಿ

ಉಡುಪಿ,ಆ.4-ಮನೆಗೆ ಮದ್ಯಕುಡಿದ ಬಂದು ಪತ್ನಿಯ ಮೇಲೆರಗಿದ ಪಾಪಿ ಪತಿ ಮಚ್ಚಿನಿಂದ ದಾಳಿ ಕೊಲೆ ಮಾಡಿ ವಿಕೃತಿ ಮೆರೆದಿರುವ ಬೀಕರ ಘಟನೆ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ಕಳೆದ ರಾತ್ರಿ ನಡೆದಿದೆ.

ಪತಿಯ ಕೌರ್ಯಕ್ಕೆ ಗಂಭೀರವಾಗಿ ಗಾಯಗೊಂಡು ಅನಿತಾ (38)ಅವರನ್ನು ನೆರೆಮನೆಯವರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆರೋಪಿ ಪತಿ ಲಕ್ಷ್ಮಣನನ್ನು ಕಂಡ್ಲೂರು ಪೊಲೀಸರು ಬಂದಿಸಿದ್ದಾರೆ.

ಬಸ್ರೂರು ಕಾಶಿ ಮಠ, ವಸತಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸೊರಬ ಮೂಲದ ದಂಪತಿ, ಕಾಶಿ ಮಠದ ತೋಟ ನೋಡಿಕೊಳ್ಳುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಇಲ್ಲಿಗೆ ಬಂದಿದ್ದರು.

ಕಳೆದ ರಾತ್ರಿ ಲಕ್ಷ್ಮಣ ಕುಡಿದ ಬಂದು ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ ಈ ವೇಳೆ ಅಲ್ಲೇ ಇದ್ದ ಮಚ್ಚಿನಿಂದ ಆಕೆ ಕುತ್ತಿಗೆಗೆ ಹೊಡೆದು ಮಾರಣಾಂತಿಕವಾಗಿ ಗಾಯಗೊಳಿಸಿದ್ದಾನೆ.

ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಿತಾಳನ್ನು ಬಿಟ್ಟ ಮನೆಯ ಹೊರಗೆ ಬಂದು ಬಾಗಿಲ ಚಿಲಕ ಹಾಕಿ ಹಾಲ್‌ ನಲ್ಲಿ ಕೈಯಲ್ಲಿ ಕತ್ತಿ ಹಿಡಿದು ಡಾನ್ಸ್ ಮಾಡಿ ಅಟ್ಟಹಾಸ ಮೆರೆದಿದ್ದಾನೆ.

ಕೆಲ ಕ್ಷಣದ ಬಳಿಕ ಸ್ಥಳೀಯರಿಗೆ ವಿಚಾರ ತಿಳಿದಿದ್ದು ಕೂಡಲೇ ಕಿಟಕಿ ಒಡೆದು ಅಡುಗೆ ಕೋಣೆಗೆ ತೆರಳಿ ಮಹಿಳೆಯನ್ನು ಹೊರತಂದಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿ ಮಹಿಳೆಯನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಿದ್ದಾರೆ.

ಇಷ್ಟಾದರೂ ಮೈ ಮೇಲೆ ದೆವ್ವ ಬಂದವರಂತೆ ಕೈಯಲ್ಲಿ ಕತ್ತಿ ಹಿಡಿದು ನರ್ತಿಸುತ್ತಿದ್ದ ಲಕ್ಷ್ಮಣನನ್ನು ಹಿಡಿಯಲು ಹೋದರು ಸಾಧ್ಯವಾಗಲಿಲ್ಲ .ಸದ್ಯ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿದ್ದು ಒಂದೂವರೆ ಗಂಟೆಯ ಬಳಿಕ ಆರೋಪಿ ಬಂಧಿಸಲಾಗಿದೆ ಕಂಡ್ಲೂರು ಪೊಲೀಸ್‌‍ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಭೀಮನ ಅಮಾವಸ್ಯೆಗೆ ಸಿದ್ದತೆ ಮಡುವಾಗಲೆ ನಡೆದ ಈ ಘಟನೆಯಿಂದ ಜನರು ಭಯ ಭೀತರಾಗಿದ್ದಾರೆ.

RELATED ARTICLES

Latest News