Tuesday, May 13, 2025
Homeಅಂತಾರಾಷ್ಟ್ರೀಯ | Internationalಕರಾಚಿ, ಲಾಹೋರ್‌ನಲ್ಲಿ ಸರಣಿ ಸ್ಫೋಟ, ಭಯದಲ್ಲಿ ಬದುಕುತ್ತಿರುವ ಪಾಕಿಗಳು

ಕರಾಚಿ, ಲಾಹೋರ್‌ನಲ್ಲಿ ಸರಣಿ ಸ್ಫೋಟ, ಭಯದಲ್ಲಿ ಬದುಕುತ್ತಿರುವ ಪಾಕಿಗಳು

Lahore Rocked By Multiple Blasts, Firing; Loud Explosion Heard In Karachi

ಲಾಹೋರ್‌,ಮೇ 8– ಪಾಕಿಸ್ತಾನ ದಲ್ಲಿ ಮತ್ತೆ ಭೀತಿ ಆವರಿಸಿದೆ. ಪಾಕಿಸ್ತಾನದ ಲಾಹೋರ್‌ನಲ್ಲಿ ಮೂರು ಸ್ಫೋಟಗಳು ಸಂಭವಿಸಿವೆ. ಈ ಸ್ಫೋಟಗಳನ್ನು ಯಾರು ನಡೆಸಿದ್ದಾರೆಂದು ಬಹಿರಂಗ ಗೊಂಡಿಲ್ಲ. ಪೊಲೀಸ್‌‍ ಮೂಲಗಳ ಪ್ರಕಾರ, ಈ ಸ್ಫೋಟಕ್ಕೆ 5-6 ಅಡಿ ಉದ್ದದ ಡ್ರೋನ್‌ ಕಾರಣವಾಗಿರಬಹುದು. ಡ್ರೋನ್‌ನ ವ್ಯವಸ್ಥೆಯನ್ನು ಜಾಮ್‌ ಮಾಡುವ ಮೂಲಕ ಹೊಡೆದುರುಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಯಾವುದೇ ಸಾವು ನೋವು ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ.

ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ. ಲಾಹೋರ್‌ನ ಗೋಪಾಲ್‌ ನಗರ ಮತ್ತು ನಸೀರಾಬಾದ್‌ ಪ್ರದೇಶಗಳಲ್ಲಿ, ವಾಲ್ಟನ್‌ ವಿಮಾನ ನಿಲ್ದಾಣದ ಬಳಿ ಸ್ಫೋಟಗಳು ಕೇಳಿಬಂದವು.

ಜನರು ಭಯದಿಂದ ತಮ ಮನೆಗಳಿಂದ ಹೊರಗೆ ಓಡುತ್ತಿರುವುದು ಕಂಡುಬಂದಿದೆ. ಅಲ್ಲದೆ, ಹೊಗೆ ಮೋಡಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ. ಈ ಪ್ರದೇಶವು ಲಾಹೋರ್‌ನ ಪ್ರಮುಖ ವಾಣಿಜ್ಯ ಜಿಲ್ಲೆ ಮತ್ತು ಲಾಹೋರ್‌ ಸೇನಾ ನೆಲೆಯ ಪಕ್ಕದಲ್ಲಿದೆ.

ಲಾಹೋರ್‌ನ ವಿಮಾನ ನಿಲ್ದಾಣದ ಬಳಿ ಈ ಸ್ಫೋಟ ಆಗಿದ್ದು, ಸ್ಫೋಟಕ್ಕೆ ಕಾರಣ ಪತ್ತೆಹಚ್ಚಲಾಗುತ್ತಿದೆ. ದೂರದವರೆಗೆ ಸ್ಫೋಟದ ಹೊಗೆ ಕಾಣಿಸಿಕೊಂಡಿವೆ. ತಕ್ಷಣ ಅಲರ್ಟ್‌ ನೀಡುವ ಸೈರನ್‌ಗಳು ಮೊಳಗಿದವು. ಭೀತಿಯಿಂದ ಜನರು ತಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಸೈರನ್‌ ಶಬ್ಧ ಹಾಗೂ ಸ್ಪೋಟದ ಹೊಗೆ ಕಾಣಿಸುತ್ತಿರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.ಲಾಹೋರ್‌ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಸ್ಫೋಟಗಳ ಪ್ರತಿಧ್ವನಿ ಹಲವಾರು ಕಿಲೋಮೀಟರ್‌ಗಳ ದೂರದಲ್ಲಿ ಕೇಳಿಬಂದಿದೆ. ಇದಾದ ನಂತರ, ಸೈರನ್‌ಗಳ ಶಬ್ದವೂ ಕೇಳಿಬಂದಿದೆ.

ಸುದ್ದಿ ಸಂಸ್ಥೆ ರಾಯಿಟರ್ಸ್‌ ಪ್ರಕಾರ, ಸ್ಫೋಟಗಳ ಸ್ಥಳ ಮತ್ತು ಅವುಗಳ ಕಾರಣವನ್ನು ಹುಡುಕುತ್ತಿದ್ದೇವೆ ಎಂದು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ. ಲಾಹೋರ್‌ನ ಗೋಪಾಲ್‌ ನಗರ ಮತ್ತು ನಾಸಿರಾಬಾದ್‌ ಪ್ರದೇಶಗಳಲ್ಲಿನ ವಾಲ್ಟನ್‌ ವಿಮಾನ ನಿಲ್ದಾಣದ ಬಳಿಯ ವಾಲ್ಟನ್‌ ರಸ್ತೆಯಲ್ಲಿ ಹಲವಾರು ಸ್ಫೋಟಗಳ ಶಬ್ದಗಳು ಕೇಳಿಬಂದವು. ಜನರು ಭಯಭೀತರಾಗಿ ತಮ ಮನೆಗಳಿಂದ ಹೊರಬಂದರು. ಹೊಗೆಯ ಮೋಡವನ್ನು ನೋಡಿರುವುದಾಗಿ ಜನರು ವರದಿ ಮಾಡಿದ್ದಾರೆ.

ಅದೇ ಸಮಯದಲ್ಲಿ, ಮೂಲಗಳನ್ನು ನಂಬುವುದಾದರೆ, ವಾಲ್ಟನ್‌ ವಿಮಾನ ನಿಲ್ದಾಣದ ನಂತರ ಡ್ರೋನ್‌ ದಾಳಿ ನಡೆದಿದೆ. ಸ್ಫೋಟಗಳ ನಂತರ ಲಾಹೋರ್‌ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದು ಒಂದು ರೀತಿಯ ಡ್ರೋನ್‌ ದಾಳಿ ಎಂದು ಹೇಳಲಾಗುತ್ತಿದೆ. ವಾಲ್ಟನ್‌ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ಸೇನಾ ಘಟಕ ಇರುವ ಸ್ಥಳದಲ್ಲಿ ಈ ಸ್ಫೋಟ ಸಂಭವಿಸಿದೆ. ಮೂಲಗಳ ಪ್ರಕಾರ, ಕರಾಚಿ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರವನ್ನು ಸಹ ಸದ್ಯಕ್ಕೆ ನಿಲ್ಲಿಸಲಾಗಿದೆ.

RELATED ARTICLES

Latest News