Friday, November 22, 2024
Homeಇದೀಗ ಬಂದ ಸುದ್ದಿಭಾನುವಾರ ರಜೆ ಹಿನ್ನೆಲೆಯಲ್ಲಿ ಫ್ಲವರ್ ಷೋ ನೋಡಲು ಸಸ್ಯಕಾಶಿಗೆ ಹರಿದುಬಂದ ಜನಸಾಗರ

ಭಾನುವಾರ ರಜೆ ಹಿನ್ನೆಲೆಯಲ್ಲಿ ಫ್ಲವರ್ ಷೋ ನೋಡಲು ಸಸ್ಯಕಾಶಿಗೆ ಹರಿದುಬಂದ ಜನಸಾಗರ

ಬೆಂಗಳೂರು, ಆ.11- ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಸ್ಯಕಾಶಿ ಲಾಲ್‌‍ಭಾಗನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದ ನಾಲ್ಕನೆ ದಿನವಾದ ಇಂದು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಪುಷ್ಟ ಸೌಂದರ್ಯವನ್ನು ಕಣ್ತುಂಬಿ ಕೊಂಡರು.

ಈ ಬಾರಿ ಗಾಜಿನ ಮನೆಯಲ್ಲಿ ಸಂವಿಧಾನಶಿಲ್ಪಿ ಅಂಬೇಡ್ಕರ್‌‍ ಅವರ ಜೀವನ- ಸಾಧನೆ ಹಾಗೂ ಹೋರಾಟಗಳ ಚಿತ್ರಣ. ನೂತನ ಸಂಸತ್‌‍ ಭವನ ಕಲಾಕೃತಿ ಅಭೂತಪೂರ್ವವಾಗಿ ಮೂಡಿ ಬಂದಿದ್ದು, ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಮತ್ತೊಂದೆಡೆ ಪೂರಕ ಕಲೆಗಳಾದ ಡಚ್‌‍ ಹೂಗಳ ಆಕರ್ಷಕ ಜೋಡಣೆ, ತರಕಾರಿಗಳ ಕೆತ್ತನೆ, ಬೊನ್ಸಾಯ್‌‍ ಗಿಡಗಳ ಪ್ರದರ್ಶನ ಗಮನ ಸೆಳೆಯುತ್ತಿವೆ.

ವಾರಾಂತ್ಯದ ಮೊದಲ ದಿನವಾದ ನಿನ್ನೆ ಒಂದೇ ದಿನ ಸುಮಾರು 55 ಸಾವಿರ ಜನರು ಭೇಟಿ ನೀಡಿದ್ದರು. ಇಂದು ಭಾನುವಾರ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಇರುವುದರಿಂದ ಜನರ ದಂಡೇ ಹರಿದು ಬಂದಿತ್ತು. ಬೆಂಗಳೂರಿನ ನಿವಾಸಿಗಳಷ್ಟೆ ಅಲ್ಲದೆ ಹಲವು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

ಎಳೆಯ ತೆಂಗಿನ ಗರಿ ಹಾಗೂ ಬಾಳೆ ಎಲೆಗಳಿಂದ ಮೂಡಿದ ಸಂಸತ್‌‍ ಭವನ ಮತ್ತು ಅಂಬೇಡ್ಕರ್‌‍ ಪ್ರತಿಕೃತಿ, ತುಳಸಿಕಟ್ಟೆ, ಶಿವಲಿಂಗ,ಪ್ರಾಣಿ-ಪಕ್ಷಿಗಳ ವಿವಿಧ ಕಲಾಕೃತಿಗಳು ಜನರನ್ನು ಆರ್ಷಿಸಿತ್ತಿವೆ.ಸೆಲ್ಫಿ ಜಾತ್ರೆ: ಭಾನುವಾರವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಶಾಲಾ ಮಕ್ಕಳು, ಪೋಷಕರು ಆಗಮಿಸಿದ್ದು, ಗಾಜಿನ ಮನೆಯಲ್ಲಿ ಜನರು ಕಿಕ್ಕಿರಿದು ಸೇರಿದ್ದರು.

ಕೆಲವರಂತೂ ತಮ ತಮ ಮೊಬೈಲ್‌‍ಗಳಲ್ಲಿ ಕಲಾಕೃತಿಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ನೆನಪಿಗಾಗಿ ಗ್ರೂಪ್‌‍ ಪೋಟೊಗಳಿಗೆ ೇಸ್‌‍ ಕೊಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಏಕಕಾಲಕ್ಕೆ ಲಾಲ್‌‍ಬಾಗ್‌‍ನತ್ತ ಹೆಚ್ಚಿನ ಜನರು ಆಗಮಿಸಿದ್ದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.ಜನರು ಆದಷ್ಟು ಸಮೂಹ ಸಾರಿಗೆ ಹಾಗೂ ಮೆಟ್ರೋ ಬಳಸುವಂತೆ ಅಧಿಕಾರಿಗಳು ಹಾಗೂ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಈ ಬಾರಿಯ ಪ್ರದರ್ಶನಕ್ಕೆ ವಾತಾವರಣವೂ ಸಹ ಕೂಲ್‌‍ ಕೂಲ್‌‍ ಆಗಿದ್ದು, ಬಿಸಿಲು ಇಲ್ಲದಿರುವುದರಿಂದ ಜನರು ಮತ್ತಷ್ಟು ಸಂಖ್ಯೆಯಲ್ಲಿ ಬಂದಿದ್ದರು. ಹೂ ಗಳು ಕೂಡ ತಾಜಾತನದಿಂದ ಕೂಡಿದ್ದವು.

RELATED ARTICLES

Latest News