Tuesday, October 8, 2024
Homeಜಿಲ್ಲಾ ಸುದ್ದಿಗಳು | District Newsಆಸ್ತಿಗಾಗಿ ಪತ್ನಿಯನ್ನೇ ಕೊಂದು ನಾಟಕವಾಡಿದ್ದ ಉಪನ್ಯಾಸಕ ಅರೆಸ್ಟ್

ಆಸ್ತಿಗಾಗಿ ಪತ್ನಿಯನ್ನೇ ಕೊಂದು ನಾಟಕವಾಡಿದ್ದ ಉಪನ್ಯಾಸಕ ಅರೆಸ್ಟ್

ಮಂಡ್ಯ, ನ.16-ಆಸ್ತಿಯ ಆಸೆಗಾಗಿ ಕೈಹಿಡಿದ ಪತ್ನಿಯನ್ನೆ ಕೊಲೆ ಮಾಡಿದ್ದ ಪ್ರಾಧ್ಯಾಪಕನನ್ನು ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ. ಟಿ ಎನ್ ಸೋಮಶೇಖರ್ (41) ಬಂಧಿತ ಆರೋಪಿಯಾಗಿದ್ದಾನೆ. ಮಂಡ್ಯದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ ಸೋಮಶೇಖರ್ ಮೈಸೂರು ಮೂಲದ ಶೃತಿ ಎಂಬುವವರನ್ನು ವಿವಾಹವಾಗಿ ವಿವಿ ನಗರ ಬಡಾವಣೆಯಲ್ಲಿ ವಾಸವಾಗಿದ್ದರು.

ಇತ್ತೀಚೆಗೆ ಶೃತಿ ಅವರ ತಂದೆ -ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಶೃತಿ ಅವರ
ಸಹೋದರಿ ಸುಸ್ಮಿತಾ ಕಳೆದ ಐದು ವರ್ಷಗಳ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರಿಂದಾಗಿ ಮೈಸೂರಿನಲ್ಲಿದ್ದ ಸುಮಾರು 10 ಕೋಟಿಗೂ ಹೆಚ್ಚು ಮೌಲ್ಯದ ವಾಣಿಜ್ಯ ಕಟ್ಟಡಗಳು, ಮನೆ ಹಾಗೂ ನಿವೇಶನಗಳು ಶೃತಿ ಅವರ ಹೆಸರಿಗೆ ನೋಂದಣಿ ಆಗಿತ್ತು.

ಈ ಆಸ್ತಿಯ ಮೇಲೆ ಕಣ್ಣು ಹಾಕಿದ ಸೋಮಶೇಖರ್ ಕೆಲವನ್ನು ಮಾರಲು ಪತ್ನಿ ಶೃತಿಗೆ ಒತ್ತಾಯಿಸುತ್ತಿದ್ದ, ಅದಕ್ಕೆ ಆಕೆ ನಿರಾಕರಿಸಿದ್ದಳು. ಕಳೆದ ಶನಿವಾರ ದಂಪತಿ ನಡುವೆ ಜಗಳವಾಗಿದೆ. ಈ ವೇಳೆ ತಡರಾತ್ರಿ ಶೃತಿ ಅವರು ಮಲಗಿದ್ದಾಗ ಕ್ರೂರಿ ಸೋಮಶೇಖರ ದಿಂಬು ಹಾಗೂ ಬೆಡ್‍ಶೀಟ್‍ನಿಂದ ಮುಖಮುಚ್ಚಿ ಉಸಿರು ಗಟ್ಟಿಸಿ ಕೊಲೆ ಮಾಡಿದ್ದ.

ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕಲೆಕ್ಷನ್ ಪ್ರಿನ್ಸ್ ಮಗ : ಹೆಚ್‌ಡಿಕೆ ಟೀಕೆ

ಮರುದಿನ ಪತ್ನಿ ಶೃತಿ ಒತ್ತಡದಲ್ಲಿ ಪಲ್ಸ್‍ರೇಟ್ ಕಡಿಮೆ ಆಗಿ ಮೃತಪಟ್ಟಿದ್ದಾಳೆಂದು ಬಿಂಬಿಸಿ ನಾಟಕವಾಡಿದ್ದ, ಇದರಿಂದ ಅನುಮಾನಗೊಂಡ ಶೃತಿ ಅವರ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಮರಣೋತ್ತರ ಪರೀಕ್ಷೆ ಮಾಡಿದ ಸಂದರ್ಭದ ವರದಿಯಲ್ಲಿ ಉಸಿರುಗಟ್ಟಿಸಿ ಸಾಯಿಸಿರುವುದು ತಿಳಿದು ಬಂದಿದೆ.

ತಕ್ಷಣ ಎಚ್ಚೆತ್ತ ಪೊಲೀಸರು ಆತನನ್ನು ಬಂಸಿ ವಿಚಾರಣೆ ಮಾಡಿದ್ದಾಗ ಆರೋಪಿ ತಪ್ಪೋಪ್ಪಿಕೊಂಡಿದ್ದಾನೆ. ಸದ್ಯ ಆತನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಂಡ್ಯ ಪಶ್ಚಿಮ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

RELATED ARTICLES

Latest News