Sunday, September 15, 2024
Homeರಾಷ್ಟ್ರೀಯ | Nationalಆರ್‌ಜಿ ಕರ್‌ ಆಸ್ಪತ್ರೆ ಮೇಲಿನ ದಾಳಿ ಹಿಂದಿವೆ ಬಿಜೆಪಿ, ಎಡಪಕ್ಷಗಳು ; ದೀದಿ ಆರೋಪ

ಆರ್‌ಜಿ ಕರ್‌ ಆಸ್ಪತ್ರೆ ಮೇಲಿನ ದಾಳಿ ಹಿಂದಿವೆ ಬಿಜೆಪಿ, ಎಡಪಕ್ಷಗಳು ; ದೀದಿ ಆರೋಪ

ಕೋಲ್ಕತ್ತಾ,ಆ.16- ಕೋಲ್ಕತ್ತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜಿನ ವೈದ್ಯರ ಮೇಲೆ ಗುಂಪು ಹಲ್ಲೆ ನಡೆಸಲು ಎಡರಂಗ ಮತ್ತು ಬಿಜೆಪಿ ಸಂಚು ರೂಪಿಸಿವೆ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ರಾತ್ರಿಯನ್ನು ಮರಳಿ ಪಡೆಯಿರಿ ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ಮಹಿಳೆಯರು ಬೀದಿಗಿಳಿದ ಕಾರಣ ಮಧ್ಯರಾತ್ರಿ ದಾಳಿ ನಡೆದಿದೆ. ದಾಳಿಕೋರರು ಆಸ್ಪತ್ರೆಯ ಒಂದು ಭಾಗವನ್ನು ಧ್ವಂಸಗೊಳಿಸಿದರು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಬಂದ ಪೊಲೀಸರನ್ನು ಗುರಿಯಾಗಿಸಿಕೊಂಡಿದ್ದರು. ಈ ಘಟನೆಗೆ ಟಿಎಂಸಿ ಕಾರಣ ಎಂಬ ಪ್ರತಿಪಕ್ಷಗಳ ಆರೋಪವನ್ನು ಮುಖ್ಯಂತ್ರಿ ಮಮತಾ ಬ್ಯಾನರ್ಜಿ ತಳ್ಳಿ ಹಾಕಿದ್ದಾರೆ.

ಎಡಪಕ್ಷಗಳು ಮತ್ತು ಬಿಜೆಪಿ ಬಂಗಾಳದಲ್ಲಿ ಅಶಾಂತಿಯನ್ನು ಸಷ್ಟಿಸಲು ಬಯಸುತ್ತವೆ ಮತ್ತು ಇದನ್ನು ಮಾಡಲು ಇಬ್ಬರೂ ಒಗ್ಗೂಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. ಆಸ್ಪತ್ರೆ ಧ್ವಂಸ ಮಾಡಿದವರು ಹೊರಗಿನವರು, ನಾನು ಎಷ್ಟೋ ವಿಡಿಯೋ ನೋಡಿದ್ದೇನೆ, ನನ್ನ ಬಳಿ ಮೂರು ವಿಡಿಯೋಗಳಿವೆ, ಅದರಲ್ಲಿ ಕೆಲವರು ರಾಷ್ಟ್ರಧ್ವಜ ಹಿಡಿದಿದ್ದಾರೆ, ಬಿಜೆಪಿಯವರು, ಇನ್ನು ಕೆಲವರು ಡಿವೈಎಫ್‌ಐ ಹಿಡಿದಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಅವರು ತಮ ಟಿಎಂಸಿ ಗೂಂಡಾಗಳನ್ನು ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಬಳಿ ರಾಜಕೀಯ ವಿರೋಧಿ ಪ್ರತಿಭಟನಾ ರ್ಯಾಲಿಗೆ ಕಳುಹಿಸಿದ್ದಾರೆ ಹಾಗೂ ಅವರಿಗೆ ಪೊಲೀಸರು ಸುರಕ್ಷಿತ ಮಾರ್ಗವನ್ನು ಒದಗಿಸಿದ್ದರು ಎಂದು ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದರು.

RELATED ARTICLES

Latest News