ಕೊರಟಗೆರೆ,ಆ.27– ಅನಾರೋಗ್ಯ ನಿಮಿತ್ತ ವ್ಯಕ್ತಿಯೊಬ್ಬರಿಂದ ಪಡೆಯಲಾದ 2.5 ಲಕ್ಷ ಸಾಲದ ಹಣಕ್ಕೆ ಸರಿಸುಮಾರು 12 ವರ್ಷಗಳ ಕಾಲ ಮೀಟರ್ ಬಡ್ಡಿ ಶೇ.10ರಷ್ಟು ಹೆಚ್ಚು ಹಣವನ್ನು ನೀಡಿದ್ದರೂ ಕಿರುಕುಳ ನೀಡಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ರಾಜ್ಯಪಾಲರಿಗೆ ಪತ್ರ ಬರೆದು ದಯಾಮರಣ ಕೋರಿದ್ದಾರೆ.
ಕುಣಿಗಲ್ ನ್ಯಾಯಾಲಯದಲ್ಲಿ 3.5 ಲಕ್ಷ ಹಣ ಕಟ್ಟಿಸಿಕೊಂಡು, ನಂತರ ತುಮಕೂರಿನ ಪ್ರತಿಷ್ಠಿತ ಸ್ಥಳದಲ್ಲಿರುವ ಸೈಟ್‌ನ್ನ ನನಗೆ ತಿಳಿಯದೆ ಸೇಲ್ ಅಗ್ರಿಮೆಂಟ್ ರಿಜಿಸ್ಟರ್ ಮಾಡಿಕೊಂಡು ಮೋಸ ಮಾಡಿರುವುದಲ್ಲದೆ ಸಾಲ ನೀಡುವ ಸಂದರ್ಭದಲ್ಲಿ ನೀಡಲಾದ ಚೆಕ್ ಹಾಗೂ ಆನ್ ಡಿಮ್ಯಾಂಡ್ (ಇ-ಸ್ಟಾಂಪ್ )ಪತ್ರಗಳಿವೆ ನಿನ್ನ ವಿರುದ್ಧ ಕೋರ್ಟಿಗೆ ದಾವೆ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
ಈ ಮೂಲಕ ನನಗೆ ಕಿರುಕುಳ ಕೊಡುತ್ತಿರುವ ಬಡ್ಡಿದಾರನಿಂದ ರಕ್ಷಿಸಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೋಲಿಸ್ ಮಹಾ ನಿರ್ದೇಶಕರ ಬಳಿ ಮನವಿ ಮಾಡಿಕೊಂಡಿದ್ದು, ರಾಜ್ಯಪಾಲರಿಗೆ ನನಗೆ ದಯಾಮರಣ ನೀಡಿ ಎಂದು ತಾಲೂಕಿನ ವಡ್ಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರುಗದೊಡ್ಡಿಯ ಜಿ.ವಿ.ವೀರೇಂದ್ರಪ್ರಸಾದ್ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ನಾನು ದೌರ್ಜನ್ಯಕ್ಕೆ ಸಿಲುಕಿದ್ದೇನೆ ರಾಘವೇಂದ್ರ ಪ್ರಸಾದ್‌ನಿಂದ ಸಾಲಬಾಧೆಗೆ ತುಂಬಾ ನೋವು ಅನುಭವಿಸಿದ್ದೇನೆ, ಹಣದ ಎಲ್ಲಾ ವ್ಯವಹಾರ ಪೂರ್ಣಗೊಂಡಿದರೂ ಸಹ ಕಿರುಕುಳ ಮಾತ್ರ ತಪ್ಪಿಲ್ಲ ಈತನಿಂದ ನನಗೆ ರಕ್ಷಣೆ ಕೊಡಿಸಿ ಇಲ್ಲವೇ ದಯಾ ಮರಣ ಅವಕಾಶ ಕೊಡಿಮನವಿ ಮಾಡಿಕೊಂಡಿದ್ದಾರೆ.
ಕೊರಟಗೆರೆ ಮೂಲದ ವೀರೇಂದ್ರಪ್ರಸಾದ್ ಕಳೆದ 15 -20 ವರ್ಷಗಳ ಹಿಂದೆ ತನ್ನ ಹಳೆಯ ಸ್ನೇಹಿತ ಕುಣಿಗಲ್ ಟೌನ್ ರಾಘವೇಂದ್ರ ಪ್ರಸಾದ್ ಎಂಬಾತನಿಂದ ಅನಾರೋಗ್ಯ ನಿಮಿತ್ತ 2.5 ಲಕ್ಷ ರೂ.ಗಳನ್ನ ತುರ್ತು ಆರೋಗ್ಯ ಚಿಕಿತ್ಸೆಗಾಗಿ ಶೇ.10ರ ಬಡ್ಡಿಗೆ ಹಣ ಪಡೆದದು ಹತ್ತಾರು ವರ್ಷಗಳ ಕಾಲ ಸುಮಾರು 5-6 ಪಟ್ಟು ಹೆಚ್ಚು ಹಣ ಬಡ್ಡಿ ರೂಪದಲ್ಲಿ ನೀಡಿದರೂ ರಾಘವೇಂದ್ರ ಪ್ರಸಾದ್ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ.
ಹತ್ತಾರು ಜನರನ್ನು ಕರೆದುಕೊಂಡು ಬಂದು ಬಾಯಿಗೆ ಬಂದಂತೆ ಅಶ್ಲೀಲವಾಗಿ ಮಾತನಾಡುತ್ತಾ ರೌಡಿಗಳ ರೀತಿಯಲ್ಲಿ ವರ್ತಿಸಿದ ಕಾರಣ ಭಯಗೊಂಡು ಅನೇಕ ಬಾಧೆಗಳಿದ್ದರೂ ಆತನಿಗೆ ಹಣ ನೀಡುತ್ತಿದ್ದರು ಕಿರುಕುಳ ಮಾತ್ರ ತಪ್ಪುತಿರಲಿಲ್ಲ ಎಂದು ನೋವು ತೊಡಿಕೊಂಡಿದ್ದಾರೆ.
ವೀರೇಂದ್ರ ಪ್ರಸಾದ್ ಕುಣಗಲ್ ಟೌನ್‌ನ ದೊಡ್ಡಪೇಟೆ ವಾಸಿ ರಾಘವೇಂದ್ರಪ್ರಸಾದ್ ನಿಂದ ಆರೋಗ್ಯ ತೊಂದರೆಯಿಂದ 2.5 ಲಕ್ಷ ರೂ ಹಣವನ್ನು ತುರ್ತು ನಿಮಿತ್ತ ಪಡೆದ ಕಾರಣ ರಾಘವೇಂದ್ರ ಹೇಳಿದಷ್ಟು ಶೇ.10 ಬಡ್ಡಿಗೆ ವಿಧಿ ಇಲ್ಲದೆ ಹಣ ಪಡೆದು ಹತ್ತಾರು ವರ್ಷ ಕಷ್ಟಪಟ್ಟು ಬಡ್ಡಿ ತೀರಿಸಿದರೂ ನಾನು ಸಾಲ ಪಡೆಯುವ ಸಂದರ್ಭದಲ್ಲಿ ನೀಡಲಾದ ಖಾಲಿ ಚೆಕ್ ಹಾಗೂ (ಅಂಡ್ ಡಿಮ್ಯಾಂಡ್ ಸ್ಟಾಂಪ್ ಪೇಪರ್) ಇ ಪೇಪರ್ ಮುಂದಿಟ್ಟುಕೊಂಡು ಕುಣಿಗಲ್ ಕೋಟ್‌ನಲ್ಲಿ ನನ್ನಿಂದ 3.5 ಲಕ್ಷ ಹಣವನ್ನು ಅಧಿಕೃತವಾಗಿ ಕಟ್ಟಿಸಿಕೊಂಡು ಅನಾದಿಕೃತವಾಗಿ ಸರಿ ಸುಮಾರು 19 ಲಕ್ಷಕ್ಕೂ ಹೆಚ್ಚು ಹಣವನ್ನು ದೌರ್ಜನ್ಯ ಹಾಗೂ ರೌಡಿಸಂ ರೂಪದಲ್ಲಿ ಹಣ ವಸೂಲಿ ಮಾಡಿದ್ದು, ಈಗಲೂ ಸಹ ನನಗೆ ಆತನಿಂದ ಸಾಲ ತೀರುವಳಿಯಾಗಿದ್ದರೂ ಕಿರುಕುಳ ಮಾತ್ರ ತಪ್ಪಿಲ್ಲ , ಹತ್ತಾರು ಜನರನ್ನ ಕಾರಿನಲ್ಲಿ ಕರೆದುಕೊಂಡು ಬಂದು ಎದುರಿಸಿ ಬೆದರಿಸಿ ಹಣ ವಸೂಲಿ ಮಾಡುವ ಈತನ ಕಿರುಕುಳದಿಂದ ನನ್ನನ್ನು ತಪ್ಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.